SHIVAMOGGA| Jan 3, 2024 | ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಬಸ್ತಿಕೊಪ್ಪದಲ್ಲಿ 15 ಅಡಿ ಉದ್ದದ ಹೆಬ್ಬಾವೊಂದನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.
ಹೆಬ್ಬಾವು
ಬಸ್ತಿಕೊಪ್ಪದಲ್ಲಿ 15 ಅಡಿಗಳ ಹೆಬ್ಬಾವು ಪತ್ತೆಯಾಗಿದ್ದು, ಈ ಸಂಬಂಧ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಗಣಪತಿ ಮಲ್ಲಾನಾಯ್ಕರ ಮನೆ ಎದುರಿನ ಹುಲ್ಲಿನ ರಾಶಿಯಲ್ಲಿ ಹೆಬ್ಬಾವು ಕಾಣಿಸಿತ್ತು.
READ : ಶಿವಮೊಗ್ಗಕ್ಕಿಂದು ಬರಲಿದ್ದಾರೆ ಮೂವರು ಸಚಿವರು ! ವಿಶೇಷ ಏನು? ವಿವರ ಇಲ್ಲಿದೆ
ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ನೇಕ್ ಆರೀಫ್ ಜೊತೆಗೂಡಿ ಹೆಬ್ಬಾವನ್ನ ಹಿಡಿದಿದ್ದಾರೆ. ಬಳಿಕ ಅದನ್ನ ಗುಂಜನೂರು ಅರಣ್ಯಕ್ಕೆ ಬಿಟ್ಟಿದ್ದಾರೆ.
15 ದಿನಗಳ ಹಿಂದೆಯೂ ಗ್ರಾಮದಲ್ಲಿ ಹೆಬ್ಬಾವು ಪತ್ತೆ ಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನೂ ಈ ಕಾರ್ಯಚರಣೆಯಲ್ಲಿ ಆರ್‌ಎಫ್‌ಒ ಜಾವೇದ್ ಬಾಷಾ ಅಂಡಿಗೆ, ಉಪವಲಯ ಅರಣ್ಯಾಧಿಕಾರಿ ಸರಣಪ್ಪ, ಸಿಬ್ಬಂದಿ ಪ್ರಶಾಂತ್, ಹರೀಶ್, ಗ್ರಾಮಸ್ಥರಿದ್ದರು.