ಕಾಚಿನಕಟ್ಟೆಯಲ್ಲಿ ಸಾರ್ವಜನಿಕವಾಗಿ ಗನ್ ಹಿಡಿದು ಭಯ ಹುಟ್ಟಿಸಿದ ವ್ಯಕ್ತಿ

ಹಂಚಿಕೊಳ್ಳಿ
WhatsApp Facebook X Telegram
ಕಾಚಿನಕಟ್ಟೆಯಲ್ಲಿ ಸಾರ್ವಜನಿಕವಾಗಿ ಗನ್ ಹಿಡಿದು ಭಯ ಹುಟ್ಟಿಸಿದ ವ್ಯಕ್ತಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 25, 2025

ಶಿವಮೊಗ್ಗ | ಹಾಡು ಹಗಲೇ ವ್ಯಕ್ತಿಯೊಬ್ಬ ಗನ್ನು ಹಿಡಿದು ಓಡಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿರುವ ಘಟನೆ ನಗರದ ಹೊರವಲಯದ ವಿಮಾನ ನಿಲ್ದಾಣ ಸಮೀಪದ ಕಾಚಿನಕಟ್ಟೆಯಲ್ಲಿ ನಡೆದಿದೆ.



 

ವಿಡಿಯೋದಲ್ಲಿರುವಂತೆ ಕಾಚಿನಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಹೋಟೆಲ್‌ನ ಖುರ್ಚಿಯಲ್ಲಿ ಕುಳಿತು ಟೇಬಲ್ ಮೇಲೆ ಗನ್ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ  ಎದುರಿಗೆ ಪುಟ್ಟ ಮಗುವಿನ ಜತೆ ಬಂದಿದ್ದ ಮತ್ತೊಬ್ಬ ವ್ಯಕ್ತಿಗೆ ಗನ್ ತೋರಿಸಿ ಬೆದರಿಕೆ ಹಾಕಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ವರ್ತನೆ ಈಗ ಸಾರ್ವಜನಿಕರಲ್ಲಿ ಭಯ ಹುಟಿಸಿದೆ, ಅಷ್ಟೇ ಅಲ್ಲದೆ ಆತ ಸಾರ್ವಜನಿಕವಾಗಿಯೇ ಗನ್ ಹಿಡಿದು ಮನೆಯಿಂದ ಹೊರಬರುತ್ತಿದ್ದು, ರಸ್ತೆ, ಹೋಟೆಲ್ ಮತ್ತಿತರರ ಸ್ಥಳಗಳಲ್ಲಿ ಓಡಾಡುತ್ತಾ ಗನ್ ತೋರಿಸುತ್ತಾರೆಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ. ಹಾಗೆಯೇ ಪೊಲೀಸರು ಆತನನ್ನು ಕರೆದು ವಿಚಾರಣೆ ನಡೆಸಿ ಗನ್‌ಗೆ ಪರವಾನಗಿ ಪಡೆದುಕೊಂಡಿದ್ದಾರೋ ಅಥವಾ ಅನಧಿಕೃತವಾಗಿ ಇಟ್ಟುಕೊಂಡಿದ್ದಾರೋ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

SUMMARY | The incident took place at Kachinakatte near the airport on the outskirts of the city when a man was seen walking around with a gun in broad daylight.

KEYWORDS | Kachinakatte, airport,  gun, 

 

 

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor