ಶಾಲು ಹಾಕಿ ಕಪಾಲಕ್ಕೆ ಹೊಡೆಯೊ ವಿಕೃತಿಯ ವಿಡಿಯೋ ಬಗ್ಗೆ ಪೊಲೀಸರು ಹೇಳಿದ್ದೇನು?

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ನಿನ್ನೆಯಿಂದ ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರಿಗೆ ಮನೆಯಲ್ಲಿ ಸನ್ಮಾನ ಮಾಡಿ ಹಲ್ಲೆ ಮಾಡುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಅಲ್ಲದೆ ಈ ವಿಡಿಯೋದಲ್ಲಿ ಅಮಾಯಕನಿಗೆ ಹಲ್ಲೆ ಮಾಡಿ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ವಿಕೃತಿ ಬಗ್ಗೆ ಸಾರ್ವಜನಿಕರಿಗೆ ತುಂಬಾನೇ ಆಕ್ರೋಶ ವ್ಯಕ್ತವಾಗಿತ್ತು. ಮೇಲಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಂಘಟನೆಗಳು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದರು. 

ಈ ಸಂಬಂಧ ಹೊಸಕೋಟೆ ಪೊಲೀಸರು ಪರಿಶೀಲನೆ ನಡೆಸಿದ್ದು, ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿಡಿಯೋ ಹಳೆಯ ವಿಡಿಯೋ ಎಂದು ಗೊತ್ತಾಗಿದ್ದು, ನಡೆದ ಘಟನೆ ಖಾಸಗಿ ವಿಚಾರದ್ದು ಎಂದು ಹಲ್ಲೆಗೊಳಗಾದ ವ್ಯಕ್ತಿ ಹಾಗೂ ಹಲ್ಲೆಮಾಡಿರುವ ವ್ಯಕ್ತಿಗಳು ಹೇಳಿದ್ದಾರೆ. ಮೇಲಾಗಿ ಹಲ್ಲೆಗೊಳಗಾದ ವ್ಯಕ್ತಿಯು ಕಂಪ್ಲೆಂಟ್‌ ಕೊಡಲು ನಿರಾಕರಿಸಿದ್ದಾರೆ. ಹಾಗಾಗಿ ಪೊಲೀಸರು ಹಲ್ಲೆ ಮಾಡಿದ ಆರೋಪಿಗಳಿಗೆ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ. 

ಇನ್ನೂ ವಿಡಿಯೋ ಸಂಬಂಧ ಮಾತನಾಡಿರುವ ಬೆಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಪಿ ಸಿಕೆ ಬಾಬು, ವಿಡಿಯೊ ಒಂದುವರೆ ವರ್ಷದ ಹಳೆಯ ವಿಡಿಯೋವಾಗಿದೆ. ಮದ್ಯ ಸೇವಿಸಿದ್ದ ವ್ಯಕ್ತಿಯನ್ನು ಕೀಟಲೆ ಮಾಡಿದಂತಹ ವಿಡಿಯೋ ಇದಾಗಿದ್ದು, ಹಲ್ಲೆ ಸಂಬಂಧ ಸಂತ್ರಸ್ತ ದೂರು ನೀಡಿಲ್ಲ. ಈಗಲೂ ದೂರು ನೀಡಲು ಸಿದ್ದರಿಲ್ಲ. ನಮ್ಮ ಖಾಸಗಿ ವಿಚಾರ ಇದಾಗಿದ್ದು, ಪರಿಚಿತರ ನಡುವೆ ನಡೆದ ಘಟನೆಯಾಗಿದೆ, ಹಾಗಾಗಿ ದೂರು ನೀಡಲು ಸಿದ್ದರಿಲ್ಲ ಎಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಬಿತ್ತರಿಸಿರುವಂತೆ ಬೇರೆ ವಿಚಾರಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು