ಗಾಂಧಿ ಬಜಾರ್‌ನ ಚಿನ್ನದ ಅಂಗಡಿಯಲ್ಲಿ ಸರ ಕದ್ದ ಲೇಡಿ | ಸಿಸಿ ಕ್ಯಾಮಾರಾ ತೋರಿಸಿತು ಸತ್ಯ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಆಗಾಗ ಚಿನ್ನ ಖರೀದಿಗೆ ಅಂಥಾ ಬರುವ ಕೆಲವರು, ಅಂಗಡಿಯಲ್ಲಿನ ಚಿನ್ನವನ್ನು ಎಗರಿಸಿಕೊಂಡು ಹೋಗುವ ಕೃತ್ಯವೆಸಗುತ್ತಿರುತ್ತಾರೆ. ಆದರೆ ಮೊನ್ನೆ ಮೊನ್ನೆ ಹೀಗೆ ಒಂದು ಘಟನೆಯಲ್ಲಿ ಚಿನ್ನದ ಸರ ಎಗರಿಸಲು ಹೋದ ಮಹಿಳೆಯಿಬ್ಬರು ಅಂಗಡಿಯವನ ಕೈಗೆ ಸಿಕ್ಕಿಬಿದ್ದು, ಕೊನೆಗೆ ಪ್ರಕರಣ ಕೋಟೆ ಠಾಣೆಗೆ ಶಿಫ್ಟ್‌ ಆಗಿದ್ದಷ್ಟೆ ಅಲ್ಲದೆ ಎಫ್‌ಐಆರ್‌ ಸಹ ದಾಖಲಾಗಿದೆ. 

ಸದ್ಯ ಇದರ ಸಿಸಿ ಕ್ಯಾಮರಾದ ದೃಶ್ಯಗಳು ಲಭ್ಯವಾಗಿದೆ. ಕಳೆದ 18 ತಾರೀಖು ಗಾಂಧಿ ಬಜಾರ್‌ನಲ್ಲಿರುವ ಚಿನ್ನದ ಅಂಗಡಿಯೊಂದಕ್ಕೆ ಇಬ್ಬರು ಮಹಿಳೆಯರು ಬಂದಿದ್ದಾರೆ. ಚಿನ್ನದ ಸರದ ಖರೀದಿಗಾಗಿ ಬಂದಿದ್ದ ಅವರಿಗೆ ಅಂಗಡಿಯವರು ಚಿನ್ನದ ಸರಗಳನ್ನು ತೋರಿಸಿದ್ದಾರೆ. ಈ ವೇಳೆ ಓರ್ವ ಮಹಿಳೆ ಚಿನ್ನದ ಸರವನ್ನು ತನ್ನ ಬುರ್ಖಾದ ಉದ್ದ ತೋಳಿನೊಳಗೆ ಮುಚ್ಚಿಟ್ಟುಕೊಂಡು, ತಾನು ತಂದಿದ್ದ ನಕಲಿ ಸರವನ್ನು ಚಿನ್ನದ ಸರದ ಟ್ರೇನೊಳಗೆ ಇಟ್ಟಿದ್ದಾರೆ. ಅದಕ್ಕೆ ಅಂಟಿಸಿದ್ದ ಟ್ಯಾಗ್‌ ತಮ್ಮ ಅಂಗಡಿಯದ್ದಲ್ಲ ಎಂದು ಅನುಮಾನಗೊಂಡ ಅಂಗಡಿ ಮಾಲೀಕರು ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ನಡೆದ ಕೃತ್ಯ ಕಾಣಿಸಿದೆ. ಹೀಗಾಗಿ ಇಬ್ಬರು ಮಹಿಳೆಯರನ್ನು ವಿಚಾರಿಸಿದ್ದಾರೆ. ಆಗ ಸತ್ಯ ಗೊತ್ತಾಗಿ ಕೋಟೆ ಪೊಲೀಸ್‌ ಠಾಣೆಯ ಪೊಲೀಸರಿಗೆ ಇಬ್ಬರು ಮಹಿಳೆಯರನ್ನು ಒಪ್ಪಿಸಿ ದೂರು ನೀಡಿದ್ದಾರೆ. ಸದ್ಯ ಸಿಸಿ ಕ್ಯಾಮಾರಾ ಪೂಟೇಜ್‌ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

SUMMARY | cCCTV footage shows theft of gold chain from Gandhi Bazaar shop

KEY WORDS |‌ CCTV footage, gold chain theft case, Gandhi Bazaar shop

 

Share This Article