ಏರ್‌ಪೋರ್ಟ್‌ ರೋಡ್‌ನಲ್ಲಿ ಏನಾಯ್ತು ಗೊತ್ತಾ? | ಶಿವಮೊಗ್ಗದ ಚಟ್‌ಪಟ್‌ ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
ಏರ್‌ಪೋರ್ಟ್‌ ರೋಡ್‌ನಲ್ಲಿ ಏನಾಯ್ತು ಗೊತ್ತಾ? | ಶಿವಮೊಗ್ಗದ ಚಟ್‌ಪಟ್‌ ಸುದ್ದಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆ ವರದಿ ಇವತ್ತಿನ ಚಟ್‌ಪಟ್‌ ನ್ಯೂಸ್‌ 

ಸುದ್ದಿ  1 | ಶಿವಮೊಗ್ಗ: ತಲೆಯಿಲ್ಲದ ಅನಾಮಧೇಯ ಶವ ವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿಯ ತುಂಗಾ ನದಿಯ ದಡದಲ್ಲಿ ಪತ್ತೆಯಾಗಿದೆ. ಶವದ ಬಗ್ಗೆ ಹಲವು ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಸುದ್ದಿ 2 | ಸಾಲ ಜಾಸ್ತಿಯಾಧ್ದರಿಂದ ಹೊಸನಗರ ತಾಲ್ಲೂಕು ಹರತಾಳು ಪಂಚಾಯ್ತಿ ವ್ಯಾಯ್ತಿಯ ಗಣಂದೂರು ಗ್ರಾಮದ ಪುಟ್ಟನಾಯ್ಕ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ಸಂಸ್ಥೆಗಳಲ್ಲಿ ಸಾಲ ಮಾಡಿದ್ದ ಇವರು ತೋಟದಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ

ಸುದ್ದಿ 3| ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ನಿಂತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಾವನ್ನಪ್ಪಿದ್ದಾರೆ. ಅವರನ್ನು ನಗರದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ ಎಂದು ಗುರುತಿಸಲಾಗಿದೆ. ತಮ್ಮ ಸ್ನೇಹಿತನನ್ನು ಮನೆಗೆ ಬಿಟ್ಟು ಶಾಹಿ ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಕಾರಿನ ಚಾಲಕ ಬಚಾವ್‌ ಆಗಿದ್ದಾನೆ. 

ಸುದ್ದಿ 4 | ಶಿವಮೊಗ್ಗದ ಏರ್‌ಪೋರ್ಟ್‌ ರಸ್ತೆಯಲ್ಲಿ ಡಿವೈಡರ್‌ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ನಿಶ್ಚಿತ್ ಎಂಬಾತ ಸಾವನ್ನಪ್ಪಿದ್ದಾನೆ. ಭದ್ರಾವತಿ ಹುಣಸೆಕಟ್ಟೆ ಜಂಕ್ಷನ್‌ ಬಳಿ ಈ ಘಟನೆ ಸಂಭವಿಸಿದೆ. ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಸ್‌ ಬರುವಾಗ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. 

ಸುದ್ದಿ 5 | ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಳ್ಳಿಗದ್ದೆ ತಿರುವಿನಲ್ಲಿ ಬಲೆನೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿರುವ ಬಗ್ಗೆ ವರದಿಯಾಗಿದೆ. ಕಾರು ನುಜ್ಜುಗುಜ್ಜಾಗಿದ್ದು, ಅದೃಷ್ಟಕ್ಕೆ ಕಾರಿನಲ್ಲಿದ್ದವರು ಬಚಾವ್‌ ಆಗಿದ್ದಾರೆ. ಇವರೆಲ್ಲರು ಶಿವಮೊಗ್ಗದಿಂದ ಮಣಿಪಾಲ್‌ಗೆ ಹೋಗುತ್ತಿದ್ದರು ಎನ್ನಲಾಗಿದೆ. 

SUMMARY |    shivamogga short news 

KEY WORDS | shivamogga short news 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor