bidar atm robbery news | ಎಟಿಎಂ ಕ್ಯಾಶ್‌ ಬಾಕ್ಸ್‌ ದರೋಡೆ | ಗನ್‌ ಹಿಡಿದವರ ಮೇಲೆ ಕಲ್ಲು ತೂರಿದ ಯುವಕ | ಬೆಚ್ಚಿ ಬೀಳಿಸ್ತಿರುವ ವಿಡಿಯೋ!!

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 17, 2025 ‌‌ 

ATM  ಎಟಿಎಂಗೆ ಕ್ಯಾಶ್‌ ಹಾಕಲು ತೆರಳುತ್ತಿದ್ದ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ ₹92 ಲಕ್ಷ ಕ್ಯಾಶ್‌ನ್ನ ಬೈಕ್‌ನಲ್ಲಿ ಕದ್ದೊಯ್ದ ಘಟನೆ ನಿನ್ನೆ ದಿನ ದೊಡ್ಡ ಸದ್ದು ಮಾಡಿದೆ. ಪೊಲೀಸ್‌ ವ್ಯವಸ್ಥೆಯ ವೈಫಲ್ಯಕ್ಕೆ ಈ ಘಟನೆ ಕನ್ನಡಿ ಹಿಡಿಯುತ್ತಿದೆ. 

ಬೀದರ್‌ನಲ್ಲಿ ನಿನ್ನೆ ದಿನ ಸಿನಿಮೀಯ ರೀತಿಯ ದರೋಡೆ ನಡೆದಿದೆ. ಘಟನೆಯ ದೃಶ್ಯಗಳು ಭಯ ಹುಟ್ಟಿಸುತ್ತಿದೆ. ಘಟನೆಯಲ್ಲಿ ಇಬ್ಬರಿಗೆ ಗುಂಡೇಟು ಬಿದ್ದಿದ್ದು ನಗರದ ಚಿದ್ರಿ ನಿವಾಸಿ ಗಿರಿ ವೆಂಕಟೇಶ ಮಲ್ಲಪ್ಪ ಸಾವನ್ನಪ್ಪಿದ್ದಾರೆ . ನಗರದ ಲಾಡಗೇರಿ ನಿವಾಸಿ ಶಿವಕುಮಾರ್‌ರವರಿಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸಿಎಂಎಸ್ ಹೆಸರಿನ ಖಾಸಗಿ‌ ಸಂಸ್ಥೆಯ ಕ್ಯಾಶ್‌ ಕಸ್ಟೋಡಿಯನ್‌ ಆಗಿದ್ದು ಇವರು ಬ್ಯಾಂಕ್‌ನಿಂದ ಹಣ ತಂದು ಎಟಿಎಂಗೆ ತುಂಬಬೇಕಿತ್ತು. ಇದರ ನಡುವೆ ನಿನ್ನೆ ಹನ್ನೊಂದು ಗಂಟೆ ಸುಮಾರಿಗೆ ಇಬ್ಬರು ಅಪರಿಚಿತರು ಇವರ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಕ್ಯಾಶ್‌ ಟ್ರಂಕ್‌ನ್ನು ಬೈಕ್‌ ಮೇಲೆ ಇರಿಸಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಸ್ಥಳೀಯರು ಆರೋಪಿಗಳ ಮೇಲೆ ಕಲ್ಲು ಹೊಡೆಯುವ ಪ್ರಯತ್ನ ಮಾಡಿದರಾದರೂ ಪ್ರಯತ್ನ ಫಲಕಾರಿಯಾಗಲಿಲ್ಲ. 

ಆರೋಪಿಗಳು  ತೆಲಂಗಾಣ ಗಡಿ ಮೂಲಕ ಹೈದರಾಬಾದ್‌ನ ಅಫ್ಜಲ್‌ ಗಂಜ್‌ಗೆ ತೆರಳಿ ಛತ್ತೀಸಗಢದ ರಾಯಪುರಕ್ಕೆ  ಹೋಗುವವರಿದ್ದರು. ಈ ನಡುವೆ ಹೈದ್ರಾ ಬಾದ್‌ ಪೊಲೀಸರು ಆರೋಪಿಗಳನ್ನ ಬೆನ್ನಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಗಾಯಗೊಂಡಿರುವ ಸಾಧ್ಯತೆ ಇದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. 

  

SUMMARY |   bidar atm robbery news

KEY WORDS |‌  bidar atm robbery news

Leave a Comment