ತಾನೆ ಬೀಸಿದ ಮೀನಿನ ಬಲೆಗೆ ಸಿಲುಕಿ ಸಾವು | ಗುಂಡು ಹೊಡೆದುಕೊಂಡು ರೈತ ದುರ್ಮರಣ

This Article Written by / 13 / ನವೆಂಬರ್ 14, 2024

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024 

ಗುಂಡು ಹೊಡೆದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ. ಇವರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮತ್ತು ಕೈಸಾಲ ಮಾಡಿಕೊಂಡಿದ್ದರು. ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ ಗ್ರಾಮದ ಮಜೀದ್ (45) ಆತ್ಮಹತ್ಯೆ ಮಾಡಿಕೊಂಡ ರೈತ. ಕಾಫಿತೋಟ, ಶುಂಠಿ ಇನ್ನಿತರ ಕೃಷಿ ಬೆಳೆ ನಿರ್ವಹಣೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಸೇರಿ ಕೈಸಾಲ ಮಾಡಿಕೊಂಡಿದ್ದರು. ಇದರಿಂದ ಬೇಸತ್ತ ಅವರು ಕೋವಿಯಿಂದ ಮನೆ ಯೊಳಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾನೆ ಹಾಕಿದ ಬಲೆಗೆ ಸಿಲುಕಿ ಸಾವು

ತಾನೇ ಹಾಕಿದ್ದ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಬಕವಿಯಲ್ಲಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ  ಸೋಮಲಿಂಗ ಪಂಡಿತ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ. ತಾನೇ ಹಾಕಿದ್ದ ಡಿಸ್ಕೋ ಬಲೆಗೆ ಆಕಸ್ಮಿಕವಾಗಿ ಸಿಲುಕಿಕೊಂಡ ಆತ ಅದರಿಂದ ಬಿಡಿಸಿಕೊಳ್ಳಲು ಆಗದೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.  ಈಜುಗಾರರ ತಂಡ ಕಾರ್ಯಾಚರಣೆ ನಡೆಸಿ ಅವರ ಮೃತದೇಹವನ್ನು ನದಿಯಿಂದ ಹೊರ ತೆಗೆದಿದೆ.  

SUMMARY |  Kodagu, Saturday Santhe, Somwarpet, Somwarpet Taluk, Rabakavi, Bagalkot, Krishna Nadi, Fish Net,

KEYWORDS |Kodagu, Saturday Santhe, Somwarpet, Somwarpet Taluk, Rabakavi, Bagalkot, Krishna Nadi, Fish Net,

ಮುಂದಿನ ಸುದ್ದಿ ಒದಿ

Leave a Comment