KARNATAKA NEWS/ ONLINE / Malenadu today/ Jun 22, 2023 SHIVAMOGGA NEWS
ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದ ನಡುವೆ ಭದ್ರಾವತಿ ತಾಲ್ಲೂಕಿನ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿದೆ. ಇದಕ್ಕಾಗಿ ತಾಲ್ಲೂಕಿಗೆ ಚಿತ್ರನಟ ದೊಡ್ಡಣ್ಣ ಆಗಮಿಸಿದ್ದರು.
ಪುರುಷರೇ ಹುಷಾರ್! ಅನಾಥಳೆಂದು ಹೇಳಿ ಲಗ್ನವಾಗಿ ಯುವಕನಿಗೆ ಬೆದರಿಕೆ !7 ವರ್ಷಗಳ ನಂತರ ಬಯಲಾಯ್ತು 4 ಮಕ್ಕಳ ತಾಯಿ ಮದುವೆ. ಸಂಸಾರ, ಮೋಸ
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಭದ್ರಾವತಿಯಲ್ಲಿ ದೊಡ್ಡಮಟ್ಟದ ಹೋರಾಟ ಆರಂಭವಾಗಿತ್ತು. ಈ ಹೋರಾಟ ಇವತ್ತಿಗೂ ಮುಂದುವರಿದಿದೆ. ಗುತ್ತಿಗೆ ಕಾರ್ಮಿಕರು ಕಳೆದ 5-6 ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ.
ದೊಡ್ಗಣ್ಣ ನೇತೃತ್ವದಲ್ಲಿ ಸಭೆ
ಇದರ ನಡುವೆ ಕಾರ್ಖಾನೆ ಶತಮಾನೋತ್ಸವ ಸಂಭ್ರಮದಿಂದ ಆಚರಿಸಲು ಸಿದ್ದತೆಗಳು ನಡೆಯುತ್ತಿವೆ. ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ನೇತೃತ್ವದಲ್ಲಿ ಕಾಯಂ, ಗುತ್ತಿಗೆ ಕಾರ್ಮಿಕ ಸಂಘಟನೆಗಳು ಹಾಗು ಅಧಿಕಾರಿಗಳ ಸಂಘ ಈ ಸಂಬಂಧ ಸಭೆ ನಡೆಸಿವೆ. ಸಭೆಯಲ್ಲಿ ಶತಮಾನೋತ್ಸವ ಸಮಾರಂಭವನ್ನು ಸಂಭ್ರಮದಿಂದ ಆಚರಿಸುವ ಸಂಬಂಧ ಒಮ್ಮತದ ತಿರ್ಮಾನಗಳನ್ನು ಕೈಗೊಳ್ಳಲಾಗಿದೆ
ಶತಮಾನೋತ್ಸವ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ!
ಇನ್ನೂ ಶತಮಾನೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದೆ. ಒಟ್ಟಾರೆ, ಕಾರ್ಖಾನೆಯ ಶತಮಾನೋತ್ಸವ ಸಮಾರಂಭಕ್ಕಾಗಿ ಆರಂಭಿಕ ಸಭೆ ಅಂತಿಮಗೊಂಡಿದ್ದು, ಈ ಸಂಬಂಧ ಇನ್ನಷ್ಟು ಸಮಾಲೋಚನೆಗೆ ವಿವಿಧ ಸಂಘಟನೆಗಳು ಮುಂದಾಗಿವೆ.