ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವ್ಹಾ ಕಾರಿಗೆ ಜಿಂಕೆ ಡಿಕ್ಕಿ! ರಸ್ತೆಯಲ್ಲಿಯೇ ಸಾವನ್ನಪ್ಪಿದ ವನ್ಯಜೀವಿ!

This Article Written by / Malenadu Today / ಜೂನ್ 4, 2023

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS  

ಶಿವಮೊಗ್ಗ ತಾಲೂಕಿನ ಚೋರಡಿ ಸಮೀಪ, ನಿನ್ನೆ  ಭಾನುವಾರ ಸಂಜೆ ವಾಹನಕ್ಕೆ ಡಿಕ್ಕಿಯಾಗಿ ಜಿಂಕೆಯೊಂದು ಸಾವಿಗೀಡಾಗಿದೆ. ಬಿ.ಹೆಚ್.ರಸ್ತೆಯ ಕುಮದ್ವತಿ ಸೇತುವೆಗೆ ಅನತಿದೂರದಲ್ಲಿಯೇ ಈ ಘಟನೆ ಸಂಭವಿಸಿದೆ. 

ಹೇಗಾಯ್ತು ಘಟನೆ ?

ಸಾಗರದಿಂದ ಶಿವಮೊಗ್ಗ ಕಡೆ ಬರುತಿದ್ದ ಇನ್ನೋವಾಃ ಕಾರಿಗೆ, ಅದೇ ಸಂದರ್ಭದಲ್ಲಿ ವೇಗವಾಗಿ ರಸ್ತೆ ದಾಟುತಿದ್ದ ಗಂಡು ಜಿಂಕೆಯೊಂದು ಡಿಕ್ಕಿ ಹೊಡೆದಿದೆ. ಜಿಂಕೆ ರಸ್ತೆ ದಾಟುತ್ತಿರುವುದು,  ಚಾಲಕನ ಗಮನಕ್ಕೆ ಬಾರದೆ ಹೋಗಿದ್ದರಿಂದ ಜಿಂಕೆ ಕಾರಿಗೆ ಡಿಕ್ಕಿಯಾಗಿದೆ. 

ಇನ್ನೂ ಜಿಂಕೆ ಡಿಕ್ಕಿ ಹೊಡೆದ ರಬಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಅದರ. ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಜಿಂಕೆ ಸಠಾವನ್ನಪ್ಪಿದೆ. ಇನ್ನೂ ಘಟನೆ ಸಂಬಂಧ ಸ್ಥಳ ಮಹಜರು ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ.

 

 

#Shimoga,National Highway,Sagar

ಮುಂದಿನ ಸುದ್ದಿ ಒದಿ

Leave a Comment