ಬಂಗಾರಪ್ಪರು ಬಳಸುತ್ತಿದ್ದ ಕಾರನ್ನು ಹರಾಜಿನಲ್ಲಿ ಉಳಿಸಿಕೊಂಡ “ಬಂ” ಅಭಿಮಾನಿ ಬಳಗ.ಹಿಂದಿನ ಡಿಸಿಗಳೆಲ್ಲಾ ಕರ್ತವ್ಯ ನಿರ್ವಹಿಸಿದ್ದ ಕಾರು ಏನಾಯ್ತು ಗೊತ್ತಾ?

ಬಂಗಾರಪ್ಪರು ಬಳಸುತ್ತಿದ್ದ ಕಾರನ್ನು ಹರಾಜಿನಲ್ಲಿ ಉಳಿಸಿಕೊಂಡ ಬಂ ಅಬಿಮಾನಿ ಬಳಗ.ಹಿಂದಿನ ಡಿಸಿಗಳೆಲ್ಲಾ ಕರ್ತವ್ಯ ನಿರ್ವಹಿಸಿದ್ದ ಕಾರು ಏನಾಯ್ತು ಗೊತ್ತಾ?

 

ಮನುಷ್ಯನಿಗೂ ತಾನು ಬಳಸವ ವಾಹನಗಳ  ಮೇಲೆ ಅವಿನಾಭಾವ ಸಂಬಂಧವಿರುತ್ದದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ದೈನಂದಿಕ ಬದುಕಿನಲ್ಲಿ ಕಾಣಸಿಗುತ್ತದೆ. ತಾವು ಪ್ರೀತಿಯಿಂದ ಕೊಂಡ ಇಲ್ಲವೇ ಬಳಸುವ ವಾಹನಗಳು ಅದರ ಲಕ್ಕಿ ನಂಬರ್ ಭವಿಷ್ಯವನ್ನೇ ಬದಲಾಯಿಸಿಬಿಡುತ್ತದೆ. ಇಂತಹ ಲಕ್ಕಿ ಕಾರ್ ಹಾಗು ನಂಬರ್ ಬಳಸಿದ ಶಿವಮೊಗ್ಗ ಜಿಲ್ಲೆಯ ಧೀಮಂತ ನಾಯಕರಿದ್ದರೆ ಅದು ದಿವಂಗತ ಸಾರೆಕೊಪ್ಪ ಬಂಗಾರಪ್ಪ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಬಂಗಾರಪ್ಪ ಮುಖ್ಯಮಂತ್ರಿಯಾದ ನಂತರ ಸಂಸದರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಟಾಟಾ ಸಫಾರಿಯನ್ನೇ ಬಳಸುತ್ತಿದ್ದರು.

 

Malenadu Today Shivamogga

ಹೌದು  ಎಸ್ ಬಂಗಾರಪ್ಪನವರು ತಮ್ಮ ಕಾರಿಗೆ ಪರ್ಮನೆಂಟ್ ಆಗಿ ಹಾಕಿಸಿಕೊಂಡಿದ್ದ 1179 ನಂಬರ್ ನ್ನು ತಮ್ಮ ಕಾರಿಗೆ ಹಾಕಿಕೊಂಡಿದ್ದಾರೆ. ಎಸ್ ಬಂಗಾರಪ್ಪನವರು ತಮ್ಮ ರಾಜಕೀಯ ಭವಿಷ್ಯದ ನಂಬಿಕೆ ಭಾಗವಾಗಿ 1179 ಅನ್ನು ಲಕ್ಕಿ ನಂಬರ್ ಎಂದೇ ಭಾವಿಸಿದ್ದರು. ತಮ್ಮ ಟಾಟಾ ಸಫಾರಿ ವಾಹನಕ್ಕೆ 1179 ನಂಬರ್ ಹಾಕಿಸಿಕೊಂಡಿದ್ದರು. ಈ ಲಕ್ಕಿ ನಂಬರ್ ಬಂಗಾರಪ್ಪನವರು ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕವಾಗುವಂತೆ ಮಾಡಿತ್ತು. ಪ್ರವಾಸಕ್ಕೆ ಮತ್ತು ಪ್ರಚಾರಕ್ಕೆ ಸಫಾರಿ ಕಾರನ್ನೇ ಬಳಸುತ್ತಿದ್ದರು.

 

Malenadu Today Shivamogga

ಶಾಸಕರಿಂದ ಹಿಡಿದು ಸಿಎಂ ಆಗುವವರೆಗೆ ಕೈ ಹಿಡಿದಿತ್ತು. ಈಗ ಈ ಕಾರನ್ನು ಶಿವಮೊಗ್ಗ ಜಿಲ್ಲಾಡಳಿತ ಬಹಿರಂಗ ಹರಾಜು ಹಾಕುತ್ತಿದ್ದಂತೆ ಬಂಗಾರಪ್ಪ ಅಭಿಮಾನಿಗಳು ದೊಡ್ಡ ಸಾಹೆಬ್ರು ಬಳಸುತ್ತಿದ್ದ ಕಾರನ್ನು ತಾವೇ ಹರಾಜಿನಲ್ಲಿ ಖರೀದಿ ಮಾಡುವ ಮೂಲಕ ಅದನ್ನು ಮಾನುಮೆಂಟ್ ಆಗಿ ಉಳಿಸಿಕೊಂಡಿದ್ದಾರೆ.

Malenadu Today Shivamogga

2024 ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕಮ್ಮ ಕಾರಿಗೆ 1179 ಲಕ್ಕಿ ನಂಬರ್ ಹಾಕಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ

 

ಅದೇ ರೀತಿ ಕಳೆದ ವಿಧಾನಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ತಂದೆ ಬಿ.ಎಸ್ ಯಡಿಯೂರಪ್ಪ ಬಳಿಸಿದ ಅಂಬಾಸಿಡರ್ ಕಾರನ್ನು ಬಿ.ವೈ ವಿಜಯೇಂದ್ರ ಬಳಸಿದ್ದರು. ಕಾರಿನ ನಂಬರ್ ಸಿಕೆಆರ್ 454 ಅಂಬಾಸಿಡರ್ ಕಾರನ್ನು ಏರಿ ರಾಜಠೀವಿಯಲ್ಲಿ  ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈಗ ಹರಾಜಿನಲ್ಲಿ ಕೊಂಡ ಅಂಬಾಸಿಡರ್ ಕಾರನ್ನು ಸೊರಬದ ಬಂಗಾರ ಧಾಮದಲ್ಲಿ ಶಾಶ್ವತ ನೆನಪಿಗಾಗಿ ಇಡಲಾಗುತ್ತದೆ.  ಬಂ ಜನರತ್ತ ಕೈಬೀಸಿ ಕಾರು ಏರುವ ಅನುಭವ ಬಂಗಾರಪ್ಪ ಅಭಿಮಾನಿಗಳಿಗೆ ಮರುಕಳಿಸಿದರೂ ಅಚ್ಚರಿಯಿಲ್ಲ.

 

ಬಂಗಾರಪ್ಪನವರಿಗೆ ಹಾಗು ಯಡಿಯೂರಪ್ಪನವರಿಗೆ ರಾಜಕೀಯ ಗೆಲುವನ್ನು ತಂದ ಕೊಟ್ಟ ಕಾರುಗಳನ್ನು ಅವರ ಮಕ್ಕಳು ಬಳಸುತ್ತಿರುವುದು ಅಚ್ಚರಿಯಾಗಿದೆ.

ಯಡಿಯೂರಪ್ಪ ಕಾರಿನ ನಂಬರ್ ಸಿಕೆಆರ್ 454 ಇದು ಯಡಿಯೂರಪ್ಪನವರಿಗೆ ಲಕ್ಕಿ ನಂಬರ್. ಯಡಿಯೂರಪ್ಪನವರು ರಾಜ್ಯಧ್ಯಕ್ಷರಾದ ನಂತರ ಈ ಕಾರನ್ನು ಖರೀದಿಸಿದ್ದರು..

 

ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮನೆಯಿಂದ ಹೊರಡುವಾಗ ಇದೇ ಅಂಬಾಸಿಡರ್ ಕಾರಿನಲ್ಲಿ ಬಿಪಾರಂ ನೊಂದಿಗೆ ಚುನಾವಣಾ ಕಛೇರಿಗೆ ಬರುತ್ತಿದ್ದರು. ಇದೇ ಸಂಪ್ರದಾಯಕ್ಕೆ ಪುತ್ರ ಬಿ.ವೈ ವಿಜಯೇಂದ್ರ ನಾಂದಿ ಹಾಡಿದ್ದರುರು. ತಂದೆಯಂತೆ ನಾನು ಕೂಡ ರಾಜಕೀಯ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂಬ ಮಹದಾಸೆ ವಿಜಯೇಂದ್ರ ಗೆ ಇದೆ ಅದೇ ಗೀತಾ ಶಿವರಾಜ್ ಕುಮಾರ್ 2024ರ ರ ಲೋಕಸಭೆ  ಚುನಾವಣೆಯಲ್ಲಿ ಲಕ್ಕಿ ನಂಬರ್ ವಿಜದತ್ತ ಕೊಂಡೊಯ್ಯುವಂತೆ ಮಾಡಿದ್ದಂತೂ ಸುಳ್ಳಲ್ಲ. 

 ಹಿಂದಿನ ಡಿಸಿಗಳು ಬಳಸಿದ ಕಾರು 

ಅದೇ ರೀತಿ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸಿದ ಹಿಂದಿನ ಡಿಸಿಗಳು ಬಳಸುತ್ತಿದ್ದ ಹಳೆಯ ಅಂಬಾಸಿಡರ್ ಕಾರನ್ನು ನೆನಪಿಗಾಗಿ ಉಳಿಸಿಕೊಳ್ಳಲು ಡಿಸಿ ಗುರುದತ್ ಹೆಗಡೆ ಮನಸ್ಸು ಮಾಡಿದ್ದರು. ಆದರೆ ಕಾರು ಹಳೆಯದಾಗಿದ್ದು ಇಂಜಿನ್ ಹಾಗು ಬಾಡಿ ಸಂಪೂರ್ಣ ತುಕ್ಕು ಹಿಡಿದು ಹೋಗಿತ್ತು. ಅಲ್ಲದೆ ಆರ್.ಟಿ. ಓ ನಿಯಮಾವಳಿ ರೀತಿಯಲ್ಲಿ ಹಾಗೆ ಇಟ್ಟಿಕೊಳ್ಳಲು ಬರುವುದಿಲ್ಲ ಎಂದು ಮನಗಂಡ ಡಿಸಿಯವರು ಬಹಿರಂಗ ಹರಜಾಗಿಲು ಮನಸ್ಸಿಲ್ಲದ ಮನಸ್ಸಿನಿಂದ ಮುಂದಾಗಿದ್ದಾರೆ. ಈ ಕಾರನ್ನು ಕೊಳ್ಳುವವನೇ ನಿಜವಾದ ಡಿಸಿ ಎಂಬಂತಾಗಿದ್ದಾನೆ. ಹಾಗಾದ್ರೆ. ಆ ಕಾರಿನ ನಂಬರ್ ಏನ್ ಅಂತಿರಾ ಅದೇ ಸಸ್ಪೆನ್ಸ್..ಅಂಡ್ ಥ್ರಿಲ್.

 

 

 

 

Leave a Comment