MALENADUTODAY.COM/ SHIVAMOGGA / KARNATAKA WEB NEWS
ಕಾಂಗ್ರೆಸ್ ಹೈಕಮಾಂಡ್ನ ನಿರೀಕ್ಷೆಯಂತೆಯೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ (Tirthahalli Assembly constituency)ದಲ್ಲಿ ಭಿನ್ನಮತ ಶಮನವಾಗಿದೆ. ಟಿಕೆಟ್ ಘೋಷಣೆಯ ನಂತರ ಇದೇ ಮೊದಲ ಸಲ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಹಿರಿಯ ಮುಖಂಡ ಆರ್ಎಂ ಮಂಜುನಾಥ್ ಗೌಡ (Tirthahalli Assembly constituency) ರಿಬ್ಬರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿಯ ತೀರ್ಥಹಳ್ಳಿ ಅಭ್ಯರ್ಥಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರವರ (Araga jnanendra)ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮತ್ತೆ ಒಂದಾದ ಜೋಡೆತ್ತು
ಟಿಕೆಟ್ ಸಿಕ್ಕ ಬೆನ್ನಲ್ಲೆ ಕಿಮ್ಮನೆ ರತ್ನಾಕರ್ ಆರ್ಎಂ ಮಂಜುನಾಥ್ ಗೌಡರ ಮನೆಗೆ ಬಂದು, ಅವರೊಡನೆ ಮಾತನಾಡಿದ್ದಾರೆ. ಇನ್ನೂ ಒಬ್ಬರು ಎಂಎಲ್ಸಿ ಮತ್ತೊಬ್ಬರು ಎಂಎಲ್ಎ ಎನ್ನುವಂತಹ ಸಂಧಾನಕೂಡ ಹೈಕಮಾಂಡ್ ನಡೆಸಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಇವತ್ತು ಪಟ್ಟಣದ ಬೆಟ್ಟಮಕ್ಕಿಯ ನಿವಾಸದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘೋಷಿತ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ರೊಂದಿಗೆ ಆರ್ಎಂ ಮಂಜುನಾಥ್ಗೌಡರು ಮಾತನಾಡಿದ್ದಷ್ಟೆ ಅಲ್ಲದೆ, ಕಿಮ್ಮನೆ ರತ್ನಾಕರ್ರವರ ಗೆಲುವು ನಿಶ್ಚಿತ ಎಂದಿದ್ದಾರೆ.
ಮತ ವಿಭಜನೆ ಆಗದಂತೆ ನೋಡಿಕೊಳ್ತೀವಿ
ಈ ಬಾರಿ ಕ್ಷೇತ್ರದಲ್ಲಿ ಜ್ಯಾತ್ಯಾತೀತ ಮತಗಳು ವಿಭಜನೆ ಆಗದಂತೆ ನಾವು ಒಂದಾಗಿ ಕಾರ್ಯನಿರ್ವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ,ತೀರ್ಥಹಳ್ಳಿ ಕಾಂಗ್ರೆಸ್ (congress party) ಪಕ್ಷದಲ್ಲಿ ಯಾವುದೇ ಗೊಂದಲ,ಭಿನ್ನಾಭಿಪ್ರಾಯ ಇಲ್ಲ,ಸಣ್ಣ,ಪುಟ್ಟ ಭಿನ್ನಾಭಿಪ್ರಾಯ ಗಳಿರಬಹುದು ಅದನ್ನು ಬಗೆಹರಿಸಿಕೊಂಡು ಪಕ್ಷವನ್ನು ಗೆಲ್ಲಿಸಲಿದ್ದೇವೆ ಎಂದು ಮಂಜುನಾಥ್ ಗೌಡರು ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಇನ್ನೂ ಘೋಷಣೆಯಾಗಿಲ್ಲ ಬಿಜೆಪಿ ಅಭ್ಯರ್ಥಿ
ತೀರ್ಥಹಳ್ಳಿ ಕ್ಷೇತ್ರದಲ್ಲಿ ಇನ್ನು ಬಿಜೆಪಿಗೆ ಅಭ್ಯರ್ಥಿ ಘೋಷಣೆ ಆಗಿಲ್ಲ ,ನಮಗೆ ಬಿಜೆಪಿ ಪಕ್ಷವೇ ಪ್ರಬಲ ಸ್ಪರ್ಧಿ ಎಂದ ಆರ್ಎಂಎಂ, ಕ್ಷೇತ್ರದ ಶಾಸಕರು ಗೃಹ ಮಂತ್ರಿಯಾಗಿ ಏನು ಅಭಿವೃದ್ಧಿ ಮಾಡಿದ್ದಾರೆ. ಇವರು ಗೃಹ ಮಂತ್ರಿಯಾದ ಮೇಲೆ ಹಲವು ಬಿಜೆಪಿ ಮುಖಂಡರು ಸಹ ಗೃಹ ಮಂತ್ರಿಗಳಾಗಿದ್ದಾ ರೆ.ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ಕಂದಾಯ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡ ಶಾಸಕರು ತೀರ್ಥಹಳ್ಳಿ ಕ್ಷೇತ್ರದ ಸಂಸ್ಕಾರ,ಸಂಸ್ಕೃತಿ,ಘನತೆಗೆ ಅಗೌರವ ತಂದಿದ್ದಾರೆ ಎಂದು ಟೀಕಿಸಿದ್ರು.
Read / Shivamogga airport ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು
ಮಂಜುನಾಥ್ ಗೌಡರಿಗೆ ಅಭಿನಂದನೆ
ಇನ್ನೂ ಪ್ರೆಸ್ಮೀಟ್ನಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ್ ಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಒಂದಾಗಿ ಚುನಾವಣೆಯಲ್ಲಿ ಸಾಗುತ್ತೇವೆ ಎಂದ ಅವರು,
ಈ ಕ್ಷೇತ್ರದ ಶಾಸಕರು ಗೃಹ ಮಂತ್ರಿಗಳಾಗಿ ಬರೀ ಸುಳ್ಳುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಹೇಳುತ್ತಿದ್ದಾರೆ .ನಲವತ್ತು ವರುಷ ರಾಜಕೀಯ ಅನುಭವ ಹೊಂದಿರುವ ಜ್ಞಾನೇಂದ್ರರವರು, ಈಗ ನನ್ನ ಕೊನೆಯ ಚುನಾವಣೆ ಎಂದು ಫ್ಲೆಕ್ಸ್ ಮೂಲಕ ಪ್ರಚಾರ ಮಾಡುತ್ತ ಮತ ಕೇಳಲು ಹೊರಟಿದ್ದಾರೆ,ಇದು ಬಿಜೆಪಿಯ ದುಸ್ಥಿತಿ ಅಂತಾ ಟೀಕಿಸಿದ್ರು. ಆರಗರವರು, ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯಲಿ,ಎಂದು ಸವಾಲು ಹಾಕಿದರು.
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
ಏಪ್ರಿಲ್ 19 ಕ್ಕೆ ನಾಮಪತ್ರ ಸಲ್ಲಿಕೆ
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯ ಆದೇಶದಂತೆ ಅರ್.ಎಂ.ಮಂಜುನಾಥ್ ಗೌಡರ ನೇತೃತ್ವದಲ್ಲಿ ನೆಡೆಯಲಿದೆ. ಏಪ್ರಿಲ್19ರಂದು ನಾನು ನಾಮಪತ್ರಸಲ್ಲಿಸುತ್ತೇನೆ ಎಂದ ಕಿಮ್ಮನೆ ರತ್ನಾಕರ್,,ಅಂದು ಪಕ್ಷದ ಮುಖಂಡರಾದ ಕಾಗೋಡು ತಿಮ್ಮಪ್ಪ,ಮಧು ಬಂಗಾರಪ್ಪ,ಬೇಳೂರು ಗೋಪಾಲಕೃಷ್ಣ ಮುಂತಾದವರು ಆಗಮಿಸಲಿದ್ದಾರೆ ಎಂದರು.
ಇದನ್ನು ಸಹ ಓದಿ
Read /ಶಿವಮೊಗ್ಗದ ಈ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್ ಲೆಟರ್ನಲ್ಲಿ ಏನಿದೆ ಗೊತ್ತಾ
Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?
Read / fire accident / ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್ನಲ್ಲಿ ನಿಲ್ಲಿಸಿದ್ದ ಏಳು ಬೈಕ್ಗಳು!
Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ?
Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
Read / Shivamogga airport ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು
Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News Kimmane Ratnakar, Araga Jnanendra, Thirthahalli Assembly Constituency, Election, Thirthahalli Politics, RM Manjunath Gowda, Thirthahalli Congress, Thirthahalli BJP, Kimmane Ratnakar-RM Manjunath Gowda, ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ, ಚುನಾವಣೆ, ತೀರ್ಥಹಳ್ಳಿ ರಾಜಕೀಯ, ಆರ್ಎಂ ಮಂಜುನಾಥ್ ಗೌಡರು, ತೀರ್ಥಹಳ್ಳಿ ಕಾಂಗ್ರೆಸ್, ತೀರ್ಥಹಳ್ಳಿ ಬಿಜೆಪಿ, ಕಿಮ್ಮನೆ ರತ್ನಾಕರ್-ಆರ್ಎಂಮಂಜುನಾಥ್ ಗೌಡ,