SHIVAMOGGA | MALENADUTODAY NEWS
Sep 7, 2024 Karnataka Fast news
ರಾಜ್ಯದಲ್ಲಿ ನಡೆದ ವಿವಿಧ ಘಟನೆಗಳ ಸಂಕ್ತಿಪ್ತ ವಿವರಗಳನ್ನ ನೀಡುವ ಮಲೆನಾಡು ಟುಡೆ ಸುದ್ದಿವಿಭಾಗದ ಇವತ್ತಿನ Karnataka Fast news ವರದಿ ಹೀಗಿದೆ.
ವಿದ್ಯಾರ್ಥಿನಿಯನ್ನ ಹೊತ್ತು ಕುಣಿದ ಉಪನ್ಯಾಸಕ
ನೆರೆಯ ಜಿಲ್ಲೆಯ ವಿವಿ ಕ್ಯಾಂಪಸ್ ಒಂದರಲ್ಲಿ ಅತಿಥಿ ಉಪನ್ಯಾಸಕರೊಬ್ಬರು ತಮ್ಮ ಬೆನ್ನ ಮೇಲೆ ವಿದ್ಯಾರ್ಥಿನಿ ಒಬ್ಬರನ್ನು ಹೊತ್ತು ಡ್ಯಾನ್ಸ್ ಮಾಡಿರುವ ವಿಡಿಯೊವೊಂದು ಇದೀಗ ವೈರಲ್ ಆಗಿದ್ದು ಅಷ್ಟೆ ಟೀಕೆಗೆ ಗುರಿಯಾಗಿದೆ. ಅಂತಿಮ ವರ್ಷದ ತರಗತಿ ವಿದ್ಯಾರ್ಥಿಗಳ ಬಿಳ್ಗೊಡುಗೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಅತಿಥಿ ಉಪನ್ಯಾಸಕರಿಗೆ ನೋಟಸ್ ಜಾರಿ ಮಾಡಲಾಗಿದೆ. ಅಲ್ಲದೆ ಈ ಸಂಬಂಧ ಕ್ಷಮಾಪಣೆ ಕೋರಿದ್ದಾರೆ ಎನ್ನಲಾಗಿದೆ
ಷೇರು ಮಾರ್ಕೆಟ್ ಲಾಸ್, ಬ್ಯಾಂಕ್ಗೆ ದರೋಡೆಗೆ ಸ್ಕೆಚ್
ಷೇರು ಮಾರುಕಟ್ಟೆಯಲ್ಲಿ ಕಳೆದುಕೊಂಡ ಹಣವನ್ನ ವಾಪಸ್ ಸಂಪಾದನೆ ಮಾಡಲು ಯುವಕನೊಬ್ಬ ಬ್ಯಾಂಕ್ಗೆ ತೆರಳಿ ಸುಲಿಗೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಯೂನಿ ಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸುಲಿಗೆ ಮಾಡುಲು ತೆರಳಿದ್ದ ಯುವಕ ಕ್ಯಾಶ್ ಕೌಂಟರ್ನಲ್ಲಿದ್ದ ನೌಕರನ ಕುತ್ತಿಗೆಗೆ ಚಾಕು ಹಿಡಿದು ಬ್ಯಾಗ್ನಲ್ಲಿ ಕೂಡಲೇ ₹10 ಲಕ್ಷ ಹಣಹಾಕುವಂತೆ ಹೇಳಿದ್ದಾನೆ. ಈ ವೇಳೆ ಅಲ್ಲಿ ಜನ ಸೇರಿದ್ದರಿಂದ ಯುವಕ ಎಸ್ಕೇಪ್ ಆಗಿದ್ದಾನೆ. ಆ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಆರೋಪಿ ಅರೆಸ್ಟ್ ಆಗಿದ್ದಾನೆ.

ಅರುಣ್ ಪುತ್ತಿಲ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು
ಬಿಜೆಪಿಯ ಫೈರ್ ಬ್ರ್ಯಾಂಡ್ ಅರುಣ್ ಕುಮಾರ್ ಪುತ್ತಿಲರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವ ಸಂತ್ರಸ್ತೆ ಇದೀಗ ರಾಜ್ಯ ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದ್ದಾರೆ. ಪುತ್ತಿಲ ವಿರುದ್ಧ ದೂರು ನೀಡಿದ್ದು, ತಮ್ಮ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಸಂತ್ರಸ್ತೆ ದೂರಿದ್ದಾರೆ. ಅಂದಹಾಗೆ ಈ ಪ್ರಕರಣ ಸಂಬಂಧ ಈಗಾಗಲೇ ಅತ್ಯಾಚಾರ ಆರೋಪದನ್ವಯ ಪ್ರಕರಣ ದಾಖಲಾಗಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ