MALENADUTODAY.COM |SHIVAMOGGA| #KANNADANEWSWEB
ಮುಖ್ಯ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗಕ್ಕೆ ಮತ್ತೆ ಎನ್ಐಎ ರಾಷ್ಟ್ರೀಯ ತನಿಖಾ ದಳದ ತಂಡ ಇವತ್ತು ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಬೆಂಗಳೂರು ಮೂಲಗಳಿಂದಲೇ ಹೊರಬಿದ್ದಿದೆ. ಈ ಸಂಬಂಧ ಈಗಷ್ಟೆ ಮಾಹಿತಿ ಹೊರಬಿದ್ದಿದ್ದು, ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಜಬಿ, ಹಾಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ನನ್ನ ಎನ್ಐಎ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದೆ ಎನ್ನಲಾಗಿದೆ.
READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್
ಶಿವಮೊಗ್ಗ ನಗರಕ್ಕೆ ರಾತ್ರಿ ಎರಡು ತಂಡಗಳಲ್ಲಿ ಇಬ್ಬರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದಿರುವ ಎನ್ಐಎ , ಆರೋಪಿಗಳ ಮನೆ ಹಾಗೂ ಟ್ರಯಲ್ ಬ್ಲಾಸ್ಟ್ ನಡೆಸಿದ ಜಾಗ ಮತ್ತು ನಿರ್ದಿಷ್ಟ ತೋಟದಲ್ಲಿ ಮಹಜರ್ ನಡೆಸಿದೆ ಎಂಬ ಮಾಹಿತಿಯಿದೆ. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಶಾರೀಕ್ ಗುಣವಾದ ಬೆನ್ನಲ್ಲೆ ಆತನನ್ನ ಎನ್ಐಎ ವಶಕ್ಕೆ ಪಡೆದಿತ್ತು. ಅದರ ಬೆನ್ನಲ್ಲೆ ಇಬ್ಬರು ಆರೋಪಿಗಳನ್ನು ತನಿಖಾಧಿಕಾರಿಗಳು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.
READ | ಬ್ಯಾಲೆನ್ಸ್ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್
ಇನ್ನೂ ತೀರ್ಥಹಳ್ಳಿಗೂ ಆರೋಪಿ ಶಾರೀಖ್ನನ್ನ ಕರೆದುಕೊಂಡು ಹೋಗಿರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನವನ್ನು ಮಲೆನಾಡು ಟುಡೆ, ತಂಡ ಮಾಡುತ್ತಿದೆ. ಅಪ್ಡೇಟ್ ಸಿಕ್ಕಿದ ಬಳಿಕ, ವರದಿಗೆ ಸಂಬಂಧಿತ ವಿಚಾರವನ್ನು ಇನ್ನಷ್ಟು ವಿಸ್ತ್ರತವಾಗಿ ನೀಡಲಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #