MALENADUTODAY.COM |SHIVAMOGGA| #KANNADANEWSWEB
ಬದುಕಿರುವ ವ್ಯಕ್ತಿಯು ಮೃತ ಪಟ್ಟಿರುವುದಾಗಿ ಸುಳ್ಳು ವಂಶವೃಕ್ಷವನ್ನು ಸೃಷ್ಟಿಸಿ ಅವಿಭಕ್ತ ಕುಟುಂಬದ ಆಸ್ತಿಯನ್ನು ಲಪಟಾಯಿಸಿದ ಪ್ರಕರಣವೊಂದಕ್ಕೆ ತೀರ್ಥಹಳ್ಳಿ ಕೋರ್ಟ್ ಕಠಿಣ ಶಿಕ್ಷೆಯನ್ನ ವಿಧಿಸಿದೆ. ತೀರ್ಥಹಳ್ಳಿಯ ಹಿರಿಯ ಸಿ ಜೆ ಮತ್ತು ಜೆಎಮ್ಎಫ್ಸಿ ಈ ಆದೇಶ ನೀಡಿದೆ.
ನಡೆದಿದ್ದೇನು?
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮದ ಕಡಿದಾಳ್ ವಾಸಿ ತಿಮ್ಮಪ್ಪ ಗೌಡರ ಹೆಸರಿನಲ್ಲಿದ್ದ 5 ಎಕರೆ 36 ಗುಂಟೆ ಜಮೀನು ಅವಿಭಕ್ತ ಕುಟುಂಬದ ಆಸ್ತಿಯಾಗಿತ್ತು. ಅವರ ಮರಣದ ನಂತರ ಅವರ ಹೆಂಡತಿಯಾದ ಈರಮ್ಮರವರ ಹೆಸರಿಗೆ ಪೌತಿ ಖಾತೆ ದಾಖಲಾಗಿತ್ತು. ಪದ್ಮಾವತಿ ಕೋಂ ಶಿವಣ್ಣ ಇವರು ಈರಮ್ಮರವರ ಮಗಳಾಗಿದ್ದು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಅವರಿಗು ಸಹ ಹಕ್ಕು ಇತ್ತು. ಆದರೆ ಇವರಿಗೆ ಆಸ್ತಿಯನ್ನು ಕೊಡದೇ ಮೋಸ ಮಾಡುವ ಉದ್ದೇಶದಿಂದ 1) ಈರಮ್ಮ ಕೋಂ ತಿಮ್ಮಪ್ಪ ಗೌಡ 2) ಕೆ.ಸಿ.ಅನಿಲ್ ಕುಮಾರ್ ಬಿನ್ ಚೂಡಪ್ಪ ಗೌಡ 3) ಕೆ.ಸಿ.ಅಮೃತ್ ಕುಮಾರ್ ಬಿನ್ ಚೂಡಪ್ಪಗೌಡ ದಿನಾಂಕ 22-12-2010 ರಂದು ಪದ್ಮಾವತಿ ಕೋಂ ಶಿವಣ್ಣ ರವರು ಬದುಕಿದ್ದರು ಸಹ ಮೃತ ಪಟ್ಟಿರುವುದಾಗಿ ನಕಲಿ ವಂಶವೃಕ್ಷವನ್ನು ಸೃಷ್ಟಿಸಿದ್ದರು. ಸೃಷ್ಟಿಸಿದ ನಕಲಿ ವಂಶವೃಕ್ಷದ ಆಧಾರದ ಮೇಲೆ ಹೇಳಿದ ಆಸ್ತಿಗಳನ್ನು 2 ಮತ್ತು 3 ನೇ ಆರೋಪಿತರ ಹೆಸರಿಗೆ ಮೋಸದಿಂದ ನೊಂದಾಯಿಸಿಕೊಂಡು, ಪದ್ಮಾವತಿ ಕೋಂ ಶಿವಣ್ಣ ಇವರಿಗೆ ಮೋಸ ಮಾಡಿರುತ್ತಾರೆಂದು ದೂರು ದಾಖಲಾಗಿತ್ತು.
ಆ ಸಂಬಂಧ ತನಿಖಾಧಿಕಾರಿ ಪಿ.ಎಸ್ ಐ ಭರತ್ ಕುಮಾರ್ ಕೇಸ್ ದಾಖಲಿಸಿ ತನಿಖೆ ನಡೆಸಿ ಜಾರ್ಜ್ಶೀಟ್ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಪ್ರಕರಣದ 1 ನೇ ಆರೋಪಿ ಈರಮ್ಮ ಕೋಂ ತಿಮ್ಮಪ್ಪ ಗೌಡ ಇವರು ವಿಚಾರಣೆ ಹಂತದಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು ಅವರನ್ನ ಪ್ರತ್ಯೇಕಿಸಿ ವಿಚಾರಣೆ ನಡೆದಿತ್ತು. ಸದ್ಯ ಈ ಸಂಬಂಧ ತೀರ್ಥಹಳ್ಳಿ ಹಿರಿಯ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಆರೋಪಿತರು ತಪ್ಪಿತಸ್ಥರೆಂದು ದಿನಾಂಕ: 22/02/2023 ರಂದು ತೀರ್ಪು ನೀಡಿದೆ
- ಅಲ್ಲದೆ ಆರೋಪಿಗಳಿಗೆ 2 ಮತ್ತು 3 ನೇ ಆರೋಪಿಗಳಿಗೆ ಐಪಿಸಿ ಕಲಂ 406 ಕ್ಕೆ ಸಂಬಂಧಿಸಿದಂತೆ 3 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗು 10,000/ ರೂಗಳ ದಂಡ
- 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 418 ಕ್ಕೆ ಸಂಬಂಧಿಸಿದಂತೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡ
- 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 465 ಕ್ಕೆ ಸಂಬಂಧಿಸಿದಂತೆ 1 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡ
- 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 471 ಕ್ಕೆ ಸಂಬಂಧಿಸಿದಂತೆ 6 ತಿಂಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡ
- 2 ಮತ್ತು 3 ನೇ ಆರೋಪಿತರಿಗೆ ಐ ಪಿ ಸಿ ಕಲಂ 420 ಕ್ಕೆ ಸಂಬಂದಿಸಿದಂತೆ 6 ತಿಂಗಳ ಕಾಲ ಕಠಿಣ ಕಾರಾಗೃಹ ವಾಸ ಮತ್ತು 10,000/ ರೂಗಳ ದಂಡವಿಧಿಸಿದೆ.
ಅಲ್ಲದೆ, ಎಲ್ಲಾ ಸೆಕ್ಷನ್ಗಳಿಗೆ ಅನ್ವಯವಾಗುವಂತೆ, ಕಾರಾಗೃಹ ವಾಸಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅನುಭವಿಸಬೇಕೆಂದು ಆದೇಶಿಸಿದ್ದು, ಆರೋಪಿಗಳು ಕಟ್ಟುವ ದಂಡದ ಮೊತ್ತದಲ್ಲಿ 40,000/- ರೂ ಗಳನ್ನು ಪದ್ಮಾವತಿ ಕೋಂ ಶಿವಣ್ಣ ರವರಿಗೆ ನೊಂದವರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದೆ. ಇನ್ನೂ ಈ ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಡಿ.ಬಿನುರವರು ಪ್ರಕರಣದ ವಿಚಾರಣೆ ನಡೆಸಿದ್ದು ಪ್ರೇಮಲೀಲಾ.ಡಿ.ಜೆ, ರವರು ಪ್ರಕರಣದಲ್ಲಿ ವಾದ ಮಂಡಿಸಿದ್ದರು .
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #shivamoggaairport