ಫೆಬ್ರವರಿ 20 ರಿಂದ 25ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನಯಾತ್ರೆ

MALENADUTODAY.COM | SHIVAMOGGA NEWS

ಶಿವಮೊಗ್ಗ :  ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯು ಇದೇ ಫೆಬ್ರವರಿ 20 ಕ್ಕೆ  ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದೆ.

ಆನೆ ಸಾಕಲು ಸಹ ಸರ್ಕಾರಕ್ಕೆ ಬಡತನವೇ? ಸಂಖ್ಯೆ ಕಡಿಮೆ ಮಾಡುವ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ? ಗಜಪಡೆಯಿಂದಲೂ ದುಡಿಮೆ ನಿರೀಕ್ಷಿಸಿತೆ ಇಲಾಖೆ! JP Exclusiv

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂಇಬ್ರಾಹಿಂ, ಮುಖಂಡ ಎಸ್.ಎಲ್.ಬೋಜೇಗೌಡ, ನಿಖಿಲ್ ಕುಮಾರಸ್ವಾಮಿ, ಶಾರದಾ ಪೂರ್ಯ ನಾಯ್ಕ, ಎಂ.ಶ್ರೀಕಾಂತ್ ಸೇರಿದಂತೆ ಅನೇಕ ಮುಖಂಡರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ಯಾತ್ರೆಯ ವಿವರವನ್ನು ನೋಡುವುದಾದರೆ,  

Malenadu Today

  • ಫೆ. 21 ರಂದು ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ  ಸಂಜೆ 5 ಗಂಟೆಗೆ ಭದ್ರಾವತಿಯ ಕನಕ ಮಂಟಪದಲ್ಲಿ ಬಹಿರಂಗ ಸಭೆ
  • ನವುಲೆ ಬಸವಾಪುರ ಗ್ರಾಮದಲ್ಲಿ (ಕೆ.ಎಂ.ಎಸ್ ಡೈರಿ ಹಿಂಬಾಗ) ಗ್ರಾಮವಾಸ್ತವ್ಯ.
  • ಫೆ. 22 ರಂದು ಸಂಜೆ 7 ಗಂಟೆಗೆ ಹಾರನಹಳ್ಳಿಯಲ್ಲಿ ಬಹಿರಂಗ ಸಭೆ, ಸಭೆಯ ನಂತರ ಶಿವಮೊಗ್ಗ ನಗರದ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ವಾಸ್ತವ್ಯ.
  • ಫೆ. 23ರಂದು ಬೆಳಗ್ಗೆ ಶಿವಮೊಗ್ಗ ಗ್ರಾಮಾಂತರದ ವಿವಿಧ ಗ್ರಾಮಗಳಲ್ಲಿ ಸಂಚರಿಸಿ, ಸಂಜೆ 4 ಗಂಟೆಗೆ ಸೊರಬ ವಿಧಾನಸಭಾ ಕ್ಷೇತ್ರವನ್ನು ಪಂಚರತ್ನ ಯಾತ್ರೆ ತಲುಪಲಿದೆ. ಸೊರಬ ವಿಧಾನಸಭಾ ಕ್ಷೇತ್ರದೆ ಬಹಿರಂಗ ಸಭೆ ಹಾಗೂ ಗ್ರಾಮ ವಾಸ್ತವ್ಯ.
  • ಫೆ. 24 ರಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಂತರ ದಿನಾಂಕ ಹುಂಚದಕಟ್ಟೆಯಲ್ಲಿ ಗ್ರಾಮವಾಸ್ತವ್ಯ.
  • ಫೆ.25 ರ ಬೆಳಿಗ್ಗೆ 12 ಗಂಟೆಗೆ ತೀರ್ಥಹಳ್ಳಿಯ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಬಹಿರಂಗ ಸಭೆ  

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು