Video report : ಸೈಕಲ್​ನಲ್ಲಿ ಹಾಲು ತರುತ್ತಿದ್ದಾಗ ಬಾಲಕನ ಮೇಲೆ ಏಕಾಯೇಕಿ ಗೂಳಿಗಳ ಅಟ್ಯಾಕ್​ /

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ನಗರದಲ್ಲಿ ಗೂಳಿಗಳ ದಾಳಿಯಲ್ಲಿ ಬಾಲಕನೊಬ್ಬ ಗಾಯಗೊಂಡಿದ್ದಾನೆ.ಮೊನ್ನೆ ಜನವರಿ 16 ರಂದು ಈ ಘಟನೆ ಸಂಭವಿಸಿದೆ. ಇಲ್ಲಿನ ಗೋಪಿಶೆಟ್ಟಿಕೊಪ್ಪದಲ್ಲಿ ಕಳೆದ ಸೋಮವಾರ ಸಂಜೆ ನಡೆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

BREAKING NEWS : ಶಿಕಾರಿಪುರದಲ್ಲಿ ಕರಡಿ ಕಾಟ/ ಡ್ರೋನ್​ ಬಳಸಿ ಹುಡುಕಾಟ

ಇಲ್ಲಿನ ನಿವಾಸಿ ಏಳು ವರ್ಷ ಬಾಲಕ, ಮನೆಯಿಂದ ಅಂಗಡಿಗೆ ಹೋಗಿ ಹಾಲು ತೆಗೆದುಕೊಂಡು ಪುನಃ ವಾಪಸ್ ಆಗುತ್ತಿದ್ದ. ಈ ವೇಳೆ ಅಲ್ಲಿಯೇ ಇದ್ದ ಬಿಡಾಡಿ ಗೂಳಿಗಳು ಬಾಲಕನ ಮೇಲೆ ದಾಳಿ ನಡೆಸಿವೆ. ಏಕಾಯೇಕಿ ದಾಳಿ ನಡೆಸಿದ ಗೂಳಿಯೊಂದು, ಬಾಲಕ ಹಾಗೂ ಆತನ ಸೈಕಲ್​ನ್ನ ಎತ್ತಿ ಹಾಕಿದೆ. ಅಲ್ಲದೆ ತಿವಿಯಲು ಮುಂದಾಗಿದೆ. ಈ ವೇಳೆ ಇನ್ನೊಂದು ಗೂಳಿಯು ಸಹ ತಿವಿಯಲು ಮುಂದಾಗಿದೆ. 

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಇದನ್ನ ನೋಡುತ್ತಲೇ ಅಲ್ಲಿದ್ದ ಮಹಿಳೆಯರಿಬ್ಬರು, ಸಿಕ್ಕಿದ್ದನ್ನ ಗೂಳಿಗಳ ಮೇಲೆ ಎಸೆಯುತ್ತಾ ಅವುಗಳನ್ನ ಓಡಿಸಿ ಬಾಲಕನನ್ನ ರಕ್ಷಿಸಿದ್ದಾರೆ. ಸದ್ಯ ಘಟನೆಯಲ್ಲಿ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟಕ್ಕೆ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಇನ್ನೂ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ  ಆತಂಕ ಮೂಡಿಸುತ್ತಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor