ಭದ್ರಾವತಿಯಲ್ಲಿ ಹುಲ್ಲಿನ ಬಣವೆಗೆ ಬೆಂಕಿ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ದೊಣಬಘಟ್ಟದಲ್ಲಿ ಅಗ್ನಿ ಆಕಸ್ಮಿಕವೊಂದು  ಸಂಭವಿಸಿದೆ. ಇಲ್ಲಿನ ಸ್ಥಳೀಯೊಬ್ಬರಿಗೆ ಸೇರಿದ ಹುಲ್ಲಿನ ಬಣವವೆಯೊಂದಕ್ಕೆ ಬೆಂಕಿಬಿದ್ದು ಸಂಪೂರ್ಣ ಸುಟ್ಟು ನಷ್ಟವಾಗಿದೆ. 
ದೊಣಬಘಟ್ಟ ಗ್ರಾಮದ ನಿವಾಸಿ ನಾಸೀರ್ ಎಂಬವರ ಜಮೀನಿನ ಕಣದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದೆ. ಈ ಸಂಬಂಧ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ. 
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor