ಶಿವಮೊಗ್ಗ :  6 ತಿಂಗಳು VGF ಅನುದಾನ ಕೊಡಿ, ಏರ್‌ಪೋರ್ಟ್‌ನಲ್ಲಿ ಕೋಲ್ಡ್ ಸ್ಟೋರೇಜ್ & ಪೈಲಟ್ ಕೇಂದ್ರ ತೆರೆಯಿರಿ: ಸರ್ಕಾರಕ್ಕೆ ಚೇಂಬರ್ ಆಫ್ ಕಾಮರ್ಸ್ ಒತ್ತಾಯ

ಹಂಚಿಕೊಳ್ಳಿ
WhatsApp Facebook X Telegram
Use VGF Funds to Resume Shivamogga Flights
Use VGF Funds to Resume Shivamogga Flights

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕೇಂದ್ರ ಸರ್ಕಾರವು ಉಡಾನ್ 6.0 ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಸೇರಿಸಿರುವುದು ಸಂತೋಷದ ವಿಚಾರ. ಆದರೆ, ಆ ಯೋಜನೆ ಜಾರಿಗೆ ಬರಲು ಇನ್ನೂ 5 ರಿಂದ 6 ತಿಂಗಳು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿಜಿಎಫ್ (VGF – ಕಾರ್ಯಸಾಧ್ಯತಾ ಅಂತರ ನಿಧಿ) ಹಣವನ್ನು ಬಳಸಿಕೊಂಡು ವಿಮಾನಯಾನವನ್ನು ಪುನರಾರಂಭಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ಚೇಂಬರ್ ಆಫ್ ಕಾಮರ್ಸ್) ಅಧ್ಯಕ್ಷರಾದ ಬಿ. ಗೋಪಿನಾಥ್ ಹೇಳಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇದೀಗ ಅನೇಕ ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ. ಇದರ ನಡುವೆ ಒಂದು ಸಿಹಿಸುದ್ದಿ ಸಿಕ್ಕಿದ್ದು, ಕೇಂದ್ರ ಸರ್ಕಾರ ಉಡಾನ್ 6.0 ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಸೇರಿಸಿದೆ. ಇದಕ್ಕೆ ಕಾರಣಕರ್ತರಾದ ವಿಮಾನಯಾನ ಸಂಸ್ಥೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವಿಮಾನ ಹಾರಾಟ ನಡೆಸಲು 6 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಇದರಿಂದಾಗಿ ವಾಣಿಜ್ಯೋದ್ಯಮಿಗಳಿಗೆ ಹಾಗೂ ತುರ್ತು ಕಾರ್ಯಗಳಿಗೆ ಹೋಗುವವರಿಗೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತನ್ನ ವಿಜಿಎಫ್ (VGF – ಕಾರ್ಯಸಾಧ್ಯತಾ ಅಂತರ ನಿಧಿ) ಫಂಡ್ ಅನ್ನು ಬಳಸಿಕೊಂಡು 6 ತಿಂಗಳವರೆಗೆ ಶಿವಮೊಗ್ಗ-ಬೆಂಗಳೂರು ಹಾಗೂ ಶಿವಮೊಗ್ಗ-ಹೈದರಾಬಾದ್ ಈ ಎರಡು ಮಾರ್ಗಗಳಿಗೆ (ರೂಟ್) ವಿಮಾನ ಹಾರಾಟ ನಡೆಸಲು ಅವಕಾಶ ಮಾಡಿಕೊಡಬೇಕು. ಪ್ರತಿ ಮಾರ್ಗಕ್ಕೆ ವರ್ಷಕ್ಕೆ ರಾಜ್ಯ ಸರ್ಕಾರಕ್ಕೆ 14 ಕೋಟಿ ರೂಪಾಯಿ ಖರ್ಚು ಬರುತ್ತದೆ. 6 ತಿಂಗಳುಗಳ ಕಾಲ ಈ ರೀತಿ ವಿಮಾನ ಸೇವೆಯನ್ನು ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಮುಂದುವರಿದು ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು. ಮೊದಲನೆಯದಾಗಿ ವಿಮಾನ ನಿಲ್ದಾಣದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಬೇಕು. ಇದರಿಂದಾಗಿ ಕೃಷಿ ಉತ್ಪನ್ನಗಳನ್ನು ಬೆಂಗಳೂರು, ಚೆನ್ನೈ ಮುಂತಾದ ಪ್ರದೇಶಗಳಿಗೆ ಸರಬರಾಜು (ಸಪ್ಲೈ) ಮಾಡಬಹುದು. ಹಾಗೆಯೇ ಪೈಲಟ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಇದರಿಂದ ನಮ್ಮ ವಿಮಾನ ನಿಲ್ದಾಣ ಸ್ವತಂತ್ರ ವಿಮಾನ ನಿಲ್ದಾಣವಾಗುತ್ತದೆ. ವಿಮಾನಯಾನ ಮುಂದುವರಿಸುವುದರಿಂದ ಹಾಗೂ ಶಿವಮೊಗ್ಗ ಮೆಡಿಕಲ್ ಹಬ್ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor