ಚಿನ್ನದ ಬೆಲೆ ₹21,650 ಇಳಿಕೆ; ಬೆಳ್ಳಿ ದರದಲ್ಲೂ ₹60,800 ಕುಸಿತ! ಇದೆ ವಿಶೇಷ!

ಹಂಚಿಕೊಳ್ಳಿ
WhatsApp Facebook X Telegram
ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark
ಚಿನ್ನದ ದರ ಕುಸಿತ 03-02-2026: ಒಂದೇ ದಿನದಲ್ಲಿ 12,800 ರೂ. ಇಳಿಕೆ ಕಂಡ ಬಂಗಾರ Gold Rate Crash 03-02-2026: Gold Price Drops by Rs 12,800 in a Single Day

ಮಲೆನಾಡು ಟುಡೆ ಸುದ್ದಿ / ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಚಿನ್ನದ ದರ 10 ಗ್ರಾಂಗೆ ₹21,650 ಕಡಿಮೆಯಾಗಿದ್ದರೆ, ಬೆಳ್ಳಿಯ ಬೆಲೆಯಲ್ಲಿ ₹60,800 ಕುಸಿತ ದಾಖಲಾಗಿದೆ.

ಮುಂಬೈ ಮಾರುಕಟ್ಟೆಯ ವರದಿ ಪ್ರಕಾರ, ಅಕ್ಟೋಬರ್ 21ರಂದು ಶೇ.99.9ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ₹1,50,450 ಇತ್ತು. ನವೆಂಬರ್ 21ರ ವೇಳೆಗೆ ಈ ದರ ₹1,28,800ಕ್ಕೆ ಇಳಿಕೆಯಾಗಿದೆ. ಅದೇ ರೀತಿ ₹2,20,400 ಇದ್ದ ಬೆಳ್ಳಿ ದರ ₹1,59,600ಕ್ಕೆ ಕುಸಿದಿದೆ. ಹೀಗೆ ಕೇವಲ ಒಂದು ತಿಂಗಳ ಅಂತರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗಿದೆ.

ವಿಶೇಷವೆಂದರೆ, ನವೆಂಬರ್ 2ರಿಂದ 21ರವರೆಗಿನ 20 ದಿನಗಳ ಅವಧಿಯಲ್ಲಿಯೇ ಚಿನ್ನದ ಬೆಲೆ ₹14,750 ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಬೆಳ್ಳಿ ದರ ₹33,600 ಕಡಿಮೆಯಾಗಿದೆ.

ಅಮೆರಿಕದಲ್ಲಿ ಬಡ್ಡಿದರ ಹೆಚ್ಚಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಬದಲಾಗಿ ಹೆಚ್ಚಿನ ಬಡ್ಡಿ ನೀಡುವ ಅಮೆರಿಕದ ಸಾಲಪತ್ರಗಳಲ್ಲಿ ಹೂಡಿಕೆ ಮಾಡುತ್ತಿರುವುದು ಬೆಲೆ ಇಳಿಕೆಗೆ ಒಂದು ಕಾರಣ ಎನ್ನಲಾಗುತ್ತಿದೆ.

ಇದರೊಂದಿಗೆ ಜಾಗತಿಕ ಯುದ್ಧಗಳಿಗೆ ಸಂಬಂಧಿಸಿದ ವೆಚ್ಚ ಹಾಗೂ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೆಲವು ದೇಶಗಳು ತಮ್ಮಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಸಂಗ್ರಹವನ್ನು ಮಾರಾಟ ಮಾಡುತ್ತಿರುವುದು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಾಗಿರುವುದೂ ಬೆಲೆ ಕುಸಿತಕ್ಕೆ ಕಾರಣಗಳೆಂದು ವಿಶ್ಲೇಷಿಸಲಾಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor