ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮುಂಬರುವ ಚುನಾವಣೆಯಲ್ಲಿ ಬಿಜೆಪಿಯೊಡನೆ ಫ್ರೆಂಡ್ಲಿ ಫೈಟ್ ಅಂದರೆ ಫ್ರೆಂಡ್ಲಿಯಾಗಿ, ಸಪರೇಟ್ ಅಂದರೆ ಸಪರೇಟ್ ಆಗಿ ಪಕ್ಷದ ಹೈಕಮಾಂಡ್ ಯಾವ ರೀತಿ ನಿರ್ದೇಶನ ನೀಡುತ್ತದೆಯೋ ಅದೇ ರೀತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ್ ನಾಯ್ಕ್ ಹೇಳಿದ ಮಾತನ್ನು ಕೇಳಿಸಿಕೊಂಡಿದ್ದೇನೆ. ಬಿಜೆಪಿಯ ಜಿಲ್ಲಾಧ್ಯಕ್ಷರು ಪಕ್ಕದಲ್ಲೇ ಕೂತಿದ್ದಾಗ ಈ ರೀತಿಯ ಮಾತನ್ನು ಹೇಳಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ ಜಿಲ್ಲಾಧ್ಯಕ್ಷರನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ರೀತಿ ಹೇಳಿಕೆ ನೀಡುವ ಫ್ರೀಡಂ ಅನ್ನು ಬಿಜೆಪಿ ಯಾರಿಗೂ ಕೊಟ್ಟಿಲ್ಲ. ಮೇಲಿನಿಂದ ಬರುವ ಆದೇಶವನ್ನು ನಮ್ಮವರು ಪಾಲಿಸುತ್ತೇವೆ. ಮೊದಲು ಮೈತ್ರಿ ಆಗುವುದು ನಾವು ಮಾಡಿಕೊಂಡ ತೀರ್ಮಾನ ಅಲ್ಲ, ದೇಶದ ಮಟ್ಟದಲ್ಲಿ ತೆಗೆದುಕೊಂಡ ತೀರ್ಮಾನ; ನಮ್ಮ ಜಿಲ್ಲೆಯವರು ಅದನ್ನು ಫಾಲೋ ಮಾಡಿದ್ವಿ. ಮೈತ್ರಿ ಇನ್ನೂ ನಡೆಯುತ್ತಿದೆ ಎಂದು ನಾವು ತಿಳಿದುಕೊಂಡಿದ್ದೇವೆ, ಈ ಬಗ್ಗೆ ಜಾಸ್ತಿ ಡಿಸ್ಕಷನ್ ಮಾಡುವುದು ಸರಿ ಅಲ್ಲ ಎಂದರು.
ಫ್ರೆಂಡ್ಲಿ ಜೊತೆಗೆ ಅಂದರೆ ಜೊತೆಗೆ, ಸಪರೇಟ್ ಅಂದರೆ ಸಪರೇಟ್ ಮಾಡ್ತೀವಿ. ಅದರಲ್ಲಿ ಎರಡು ಮಾತಿಲ್ಲ. ಅವರು ನಮ್ಮನ್ನು ನಂಬಿಕೊಂಡು ರಾಜಕೀಯ ಮಾಡಲ್ಲ, ನಾವು ಕೂಡ ಹಾಗೆಯೇ, ಮಧ್ಯದಲ್ಲಿ ಎನ್ಡಿಎ (NDA) ಇರುವುದರಿಂದ ಕೇಳಬೇಕಾಗುತ್ತದೆ ಎಂದರು.
