ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ದೀಪಾವಳಿ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳ ನಂತರ ಇದೀಗ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರಗಳು ಬಿಡುಗಡೆಯಾಗಿದೆ. ಆದರೆ ಹಬ್ಬದ ನಂತರ ಅಡಕೆ ರೇಟ್ ಹೆಚ್ಚಾಗಬಹುದು ಎಂದು ಕಾಯುತ್ತಿದ್ದ ರೈತರಿಗೆ ಇಂದಿನ ದರ ನಿರಾಸೆ ಮೂಡಿಸಿದ್ದು, ಅಡಕೆ ದರ ಹೆಚ್ಚೂ ಕಡಿಮೆಯೂ ಆಗದೆ ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಹಾಗಾದರೆ ಇವತ್ತು ಅಂದರೆ 12-11-2026 ರಂದು ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ ಅಂತ ತಿಳಿದುಕೊಳ್ಳೋಕೆ ಈ ಕೆಳಗಿನ ದರಪಟ್ಟಿ ನೋಡಿ:
| ಅಡಿಕೆಯ ವಿವಿಧ ವೆರೈಟಿಗಳು | ಕನಿಷ್ಠ (ಕ್ವಿಂ) | ಗರಿಷ್ಠ (ಕ್ವಿಂ) | ಮಾದರಿ (ಕ್ವಿಂ) |
| ಸರಕು/ಹಸ | 55559 | 92859 | 83500 |
| ಬೆಟ್ಟೆ | 50400 | 58200 | 55800 |
| ರಾಶಿಇಡಿ | 43009 | 48539 | 47009 |
| ಗೊರಬಲು | 20009 | 39167 | 36599 |
| ಹೊಸರಾಶಿಇಡಿ | 44159 | 47009 | 47009 |
