ಸುದ್ದಿಯ ಸ್ಥಳ: Chikkamagaluru, Karnataka
ಮಲೆನಾಡು ಟುಡೆ ಸುದ್ದಿ / ಕಡೂರು / ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕರಿಯನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದ್ದ ಕಾವಲುಗಾರನ ಕೊಲೆ ಕೇಸ್ ಇಲ್ಲಿನ ಪೊಲೀಸರಿಗೆ ದೊಡ್ಡ ಸವಾಲಿನ ಪ್ರಕರಣವಾಗಿತ್ತು. ಏಕೆಂದರೆ, ತೋಟದ ಮನೆಯಲ್ಲಿ ನಡೆದಿದ್ದ ಹತ್ಯೆಯನ್ನ ನೋಡಿದವರಲಿಲ್ಲ, ತಿಳಿದವರಿರಲಿಲ್ಲ. ಪೂರಕ ಸಾಕ್ಷ್ಯಗಳು ಸಹ ಸಿಕ್ಕಿರಲಿಲ್ಲ. ಹೀಗಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಹುಡುಕಾಟ ಕಷ್ಟವಾಗಿತ್ತು. ಹಾಗಿದ್ದರೂ ಪ್ರಕರಣದಲ್ಲಿ ಪೊಲೀಸರು ತಮ್ಮ ಹಳೆ ತಂತ್ರಗಾರಿಕೆಯನ್ನ ಉಪಯೋಗಿಸಿ ಇದೇ ಹಳ್ಳಿಯ ನವೀನ್ ಎಂಬಾತನನ್ನ ಅರೆಸ್ಟ್ ಮಾಡಿದ್ದಾರೆ.
ಕಾವಲುಗಾರನ ಕೊಲೆ ಕೇಸ್! ಏನಿದು ಪ್ರಕರಣ
ನವೆಂಬರ್ 5ರ ರಾತ್ರಿ ಕರಿಯನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಜಾವಗಲ್ ಹೋಬಳಿಯ ತಿರುಪತಿಹಳ್ಳಿ ಗ್ರಾಮದ ಲಕ್ಷ್ಮಣ ಕೊಲೆ ಆಗಿದ್ದ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಆಧರೆ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ವಿಚಾರಣೆ ನೆಪದಲ್ಲಿ ಹಲವರನ್ನ ವಿಚಾರಿಸಿದಾಗ ಕೆಲವೊಂದು ಸುಳಿವು ಸಿಕ್ಕಿದೆ. ಆ ಸುಳಿವಿನ ಮೇರೆಗೆ ಆರೋಪಿಯನ್ನ ತಲಾಶ್ ಮಾಡಿದ್ದಾರೆ.ಬೆಂಗಳೂರಿಗೆ ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನ ಬಂಧಿಸಿ ವಿಚಾರಿಸಿದಾಗ ಪೂರ್ತಿ ಕಥೆ ಬಿಚ್ಚಿಟ್ಟಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ನವೆಂಬರ್ 5ರ ರಾತ್ರಿ ತೋಟದ ಮನೆಯಲ್ಲಿ ಕಾವಲುಗಾರನಾಗಿದ್ದ ಲಕ್ಷ್ಮಣ ಅವರೊಂದಿಗೆ ಆರೋಪಿ ನವೀನ್ ಜಗಳವಾಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ ಜಗಳದ ಸಂದರ್ಭದಲ್ಲಿ ಕಬ್ಬಿಣದ ರಾಡ್ನಿಂದ ಲಕ್ಷ್ಮಣ ಅವರ ತಲೆಗೆ ಹೊಡೆದು, ನಂತರ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಪತ್ತೆ ಹಾಗೂ ಬಂಧನ ಕಾರ್ಯಾಚರಣೆಯಲ್ಲಿ ಸಿಪಿಐ ಟಿ.ಎಸ್. ಮಧು, ಪಿಎಸ್ಐಗಳಾದ ಸಚಿತ್ ಕುಮಾರ್, ವಿದ್ಯಾ, ಧನಂಜಯ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ಧನಪಾಲ ನಾಯ್ಕ್, ದೇವರಾಜ್, ಮಧುಕುಮಾರ್, ರಿಯಾಜ್, ಹರೀಶ್, ಇರ್ಫಾನ್ ಮತ್ತು ಶಿವರಾಜ್ ಪಾಲ್ಗೊಂಡಿದ್ದರು.
