ದೀಪಾವಳಿ ಹಬ್ಬದ ಬೆನ್ನಲ್ಲೆ ಶುರುವಾಯಿತು ಮಲ್ನಾಡ್​ನಲ್ಲಿ ವರ್ಷದ ಮೊದಲ ಹೋರಿ ಹಬ್ಬ! ಹೇಗಿದೆ ಟ್ರೆಂಡ್

ಹಂಚಿಕೊಳ್ಳಿ
WhatsApp Facebook X Telegram
Traditional Hori Habba Celebrated During Deepavali in Shikaripura
Traditional Hori Habba Celebrated During Deepavali in Shikaripura

ಸುದ್ದಿಯ ಸ್ಥಳ: Shikaripura, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ಬೆಳಕಿನ ಹಬ್ಬ ದೀಪಾವಳಿ ಬೆನ್ನಲ್ಲೆ ಮಲ್ನಾಡ್​ ಹಾಗೂ ಬಯಲು ಸೀಮೆಯಲ್ಲಿ ಹೋರಿ ಬೆದರಿಸುವ ಹಬ್ಬ ಆರಂಭವಾಗಿದೆ. ಇದಕ್ಕೆ ಸಾಕ್ಷಿ ಎಂಬಂಥೆ ದೊಡ್ಡಕೇರಿ ಹಾಗೂ ಸೊಪ್ಪಿನಕೇರಿ ಭಾಗಗಳಲ್ಲಿ ಸಾಂಪ್ರದಾಯಿಕ ಹೋರಿ ಹಬ್ಬ ನಡೆದಿದ್ದು, ವಿವಿಧ ವಯೋಮಾನದ ಜನರು ಹೋರಿಗಳ ಪ್ರದರ್ಶನವನ್ನು ವೀಕ್ಷಿಸಿದರು.

ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಸಾಂಪ್ರದಾಯಿಕ ಹೋರಿ ಬೆರಸುವ ಹಬ್ಬಕ್ಕೂ ಮಂಗಳವಾರದಿಂದಲೇ ಚಾಲನೆನ ನೀಡಲಾಗಿದೆ. ವಿಶೇಷವಾಗಿ ದೊಡ್ಡಕೇರಿ ಮತ್ತು ಸೊಪ್ಪಿನಕೇರಿ ಪ್ರದೇಶಗಳಲ್ಲಿ ಹೋರಿ ಹಬ್ಬವನ್ನು ಆಯೋಜಿಸಲಾಗಿತ್ತು.

ದೊಡ್ಡಕೇರಿಯಲ್ಲಿ ಗಿಡ್ಡಯ್ಯ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನ ನೀಡಿದವು.

ಹೋರಿ ಬೆರಸುವ ಹಬ್ಬವನ್ನ ವೀಕ್ಷಿಸಲು ಹಿರಿಯರು, ಯುವಕರು ಹಾಗೂ ಪುಟಾಣಿ ಮಕ್ಕಳು ಸೇರಿದಂತೆ ವಿವಿಧ ವಯೋಮಾನದ ಜನರು ಭಾಗವಹಿಸಿದ್ದರು. ಹೋರಿಗಳ ಓಟ ಹಾಗೂ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು.

ಹೋರಿಗಳು ಓಡುವ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಆಯೋಜಕರು ಧ್ವನಿವರ್ಧಕಗಳ ಮೂಲಕ ಮುನ್ನೆಚ್ಚರಿಕೆ ನೀಡುತ್ತಿದ್ದರು. ಆಗಮಿಸಿದ್ದ ಜನರಿಗೆ ಅಗತ್ಯ ಸೂಚನೆಗಳನ್ನು ನೀಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor