ಶಿವಮೊಗ್ಗ : 7 ಗಂಟೆ ವಿದ್ಯುತ್​ ಕೊಡುತ್ತೇವೆಂದು 3 ತಾಸು ಮಾತ್ರ ಕೊಡುತ್ತಿದ್ದಾರೆ, ಸಾಗರ ಶಾಸಕರು ಅಡಿಕೆ ತೋಟ ನೋಡಿಯೂ ಇಲ್ಲ ಮಾಡಿಯೂ ಇಲ್ಲ : ಹರತಾಳು ಹಾಲಪ್ಪ ಹೀಗಂದಿದ್ಯಾಕೆ 

ಹಂಚಿಕೊಳ್ಳಿ
WhatsApp Facebook X Telegram
Haratalu Halappa Slams Government Over Power Crisis
Haratalu Halappa Slams Government Over Power Crisis

ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ :  ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ವಿದ್ಯುತ್​ ಸಮಸ್ಯೆಯಿಂದ ಬಹುವಾರ್ಷಿಕ ಬೆಳೆಗಳಿಗೆ ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನಹರಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ಇಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಗರ, ಸೊರಬ, ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ವಿದ್ಯುತ್​ ಸಮಸ್ಯೆ ಉಂಟಾಗುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರವು 7 ತಾಸು ವಿದ್ಯುತ್​ ನೀಡುತ್ತೇವೆ ಎಂದು ಹೇಳಿ ಈಗ ಕೇವಲ 6 ತಾಸು ಮಾತ್ರ ನೀಡುತ್ತಿದೆ. ಅದರಲ್ಲಿಯೂ ಪ್ರತಿ 10 ನಿಮಿಷಕ್ಕೆ ಒಂದು ಬಾರಿ ಕರೆಂಟ್ ತೆಗೆದು, 6 ಗಂಟೆ ಇರಬೇಕಾದ ವಿದ್ಯುತ್ ಕೇವಲ 3 ಗಂಟೆ ಮಾತ್ರ ಸರಿಯಾಗಿ ಸಿಗುತ್ತಿದೆ ಎಂದು ದೂರಿದರು. ಸೊರಬದಲ್ಲಿ ಈ ಕುರಿತು ಈಗಾಗಲೇ ಹೋರಾಟ ಮಾಡಲಾಗಿದೆ ಎಂದು ತಿಳಿಸಿದರು.ದೇವರ ದಯೆಯಿಂದ ನಿನ್ನೆ ಮೊನ್ನೆಯಿಂದ ಮಳೆ ಆಗುತ್ತಿದ್ದರೂ, ಆ ಮಳೆಯಿಂದ ನದಿ ತುಂಬಿ ಹರಿಯುವುದಿಲ್ಲ. ಭತ್ತವೆಲ್ಲ ಈಗಾಗಲೇ ಒಣಗಿ ಹೋಗಿಬಿಟ್ಟಿದೆ. ಕನಿಷ್ಠಪಕ್ಷ ಬಹುವಾರ್ಷಿಕ ಬೆಳೆಯನ್ನಾದರೂ ನಾವು ಉಳಿಸಿಕೊಳ್ಳಬೇಕಾದರೆ ನಿರಂತರ ವಿದ್ಯುತ್ ಬೇಕೇಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಕೇಳಿದಾದ ಮೆಸ್ಕಾಂನಲ್ಲಿ ಲೈನ್ ಮ್ಯಾನ್​ಗಳ ಕೊರತೆ ಇದೆ ಎನ್ನುತ್ತಾರೆ. ಶೇಕಡಾ  50 ರಷ್ಟು ಲೈನ್​ ಮ್ಯಾನ್​​​ಗಳ ಕೊರತೆ ಇದೆ.   ಉದಾಹರಣೆಗೆ ರಿಪ್ಪನ್​ಪೇಟೆಯಲ್ಲಿ ಹಿಂದೆ 28 ಜನ ಲೈನ್ ಮ್ಯಾನ್​ಗಳು ಇದ್ದು, ಈಗ ಕೇವಲ 17 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ರಿಪ್ಪನ್​ಪೇಟೆ ಇಂದು ದೊಡ್ಡ ಊರಾಗಿದ್ದು, ಅಲ್ಲಿ ಲೈನ್ ಮ್ಯಾನ್​ಗಳು ಹೆಚ್ಚಾಗಿ ಕಾರ್ಯನಿರ್ವಹಿಸಬೇಕು ಎಂದರು ಇದರ ಬಗ್ಗೆ ಶಾಸಕರು ಮತ್ತು ಸಚಿವರು ಗಂಭೀರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಎಕ್ಸಿಕ್ಯೂಟಿವ್ ಇಂಜಿನಿಯರ್​ಗಳ ಕೊರತೆಯೂ ಉಂಟಾಗಿದ್ದು, ವಿದ್ಯುತ್ ಕೊರತೆಯ ವಿಚಾರವನ್ನು ಎಇಇ (AEE) ಮೇಲಾಧಿಕಾರಿಗಳಿಗಾಗಳಿ ಸಚಿವರಿಗಾಗಲಿ ತಿಳಿಸಲು ಆಗುವುದಿಲ್ಲ. ಹಾಗಾಗಿ ಕೂಡಲೇ ಎಕ್ಸಿಕ್ಯೂಟಿವ್ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. ಮೆಸ್ಕಾಂನಲ್ಲಿ ಭ್ರಷ್ಟಾಚಾರ ಶುರುವಾಗಿದೆ. ಸಾಗರದಲ್ಲೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಇಲ್ಲ, ಸೊರಬದಲ್ಲೂ ಇಲ್ಲ. ಏಕೆಂದರೆ ಅಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳಲು ಲಂಚ ಕೇಳಲಾಗುತ್ತದೆ ಆದ್ದರಿಂದ ಅವರ್ಯಾರು ಬರುತ್ತಿಲ್ಲ ಎಂದು ಕಿಡಿಕಾರಿದರು.

ಒಂದು ಅಡಿಕೆ ಮರ ಬೆಳೆಯಲು 8 ವರ್ಷ ಬೇಕು. ಅಷ್ಟು ಕಷ್ಟಪಟ್ಟು ಬೆಳೆಸಿದ ತೋಟಕ್ಕೆ ನೀರಿನ ಸಮಸ್ಯೆ ಎದುರಾದರೆ ಏನು ಮಾಡುವುದು. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿಗೆ ಯಾವುದೇ ಯೋಚನೆಯೇ ಇಲ್ಲ. ಸಾಗರ ಶಾಸಕರು ಅಡಿಕೆ ತೋಟ ಮಾಡಿಯೂ ಇಲ್ಲ, ನೋಡಿಯೂ ಇಲ್ಲ. 15 ದಿನ ನೀರಿಲ್ಲದಿದ್ದರೆ ಗದ್ದೆ ಒಣಗಿದಂತೆ ಅಡಿಕೆ ತೋಟ ಸಹ ಒಣಗಿಹೋಗುತ್ತದೆ. ಇದರ ಬಗ್ಗೆ ಶಾಸಕರು ಮತ್ತು ಸಚಿವರು ತಕ್ಷಣವೇ ಗಮನ ಹರಿಸಬೇಕು ಎಂದರು. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor