ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಜಂಬೂ ಸವಾರಿ ವೇಳೆ ಗಾಬರಿಗೊಂಡ ಸೋಮಣ್ಣ ಆನೆ ಅತಿರೇಕಕ್ಕೆ ಹೋಗದೆ ಒಂದು ಎಚ್ಚರಿಕೆಯನ್ನು ನೀಡಿದೆ. ಸಿಸಿಎಫ್ ಆತಂರಿಕ ಸತ್ಯಾಸತ್ಯತೆ ತನಿಖಾ ವರದಿಯನ್ನ ಸರ್ಕಾರಕ್ಕೆ ನೀಡಿದ್ದು, ಘಟನೆ ಕುರಿತು ಸೋಮವಾರ ಮತ್ತೆ ಚರ್ಚೆ ನಡೆಸುತ್ತೇನೆ ಎಂದು ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಹಬ್ಬ ಎಲ್ಲ ದಿನವು ವಿಜೃಂಭಣೆಯಿಂದ ನಡೆದಿದೆ. ಇದರ ಮಧ್ಯೆ ಕೊನೆ ದಿನ ಅಂಬಾರಿ ಮೆರವಣಿಗೆಯಲ್ಲಿ ಒಂದು ಘಟನೆ ನಡೆದಿದ್ದು,ಮಾನವಹಾನಿ ಆಗದೆ ಹೋದ್ರು ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.ಕೆಲವು ಉತ್ತರಗಳನ್ನ ನಾನು ನೋಡಿಕೊಂಡು ಕೊಡಬೇಕಿದೆ ಮತ್ತು ಘಟನೆಗೆ ಕಾರಣ ಏನು ಎಲ್ಲವನ್ನ ನಾನು ಮೊದಲನೇ ದಿನದಿಂದಲೇ ಅಪ್ಡೇಟ್ ತಗೊಂಡಿದ್ದೇನೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸರ್ಕಾರವು ಈಗಾಗಲೇ ಮಾಹಿತಿ ತಗೊಂಡಿದೆ ಎಂದ ಸಚಿವರು, ಯಾವ ರೀತಿ ತಾಲೀಮು ಆಗಬೇಕು ಎನ್ನುವುದಕ್ಕೆ ಎಲ್ಲಾ ಗೈಡ್ ಲೈನ್ ಇದೆ ಮತ್ತು ಅಂಬಾರಿ ಹೊರುವ ಆನೆ ಯಾವುದು ಎಲ್ಲವನ್ನ ಜವಾಬ್ದಾರಿ ರೂಲ್ಸ್ ಪ್ರಕಾರವೇ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಗೊಂದಲ ಇಲ್ಲದೆ ಒಮ್ಮತದಿಂದ ಸೋಮಣ್ಣ ಅಂಬಾರಿ ಹೊರುವುದನ್ನ ನಿರ್ಧರಿಸಲಾಗಿದೆ ಎಂದ ಅವರು, ಸಿಸಿಎಫ್ ಆಂತರಿಕ ಸತ್ಯಾಸತ್ಯತೆ ತನಿಖಾ ವರದಿಯನ್ನ ಸರ್ಕಾರಕ್ಕೆ ನೀಡಿದ್ದಾರೆ ಹಾಗೂ ಸೋಮಣ್ಣ ಆನೆ ಗಲಿಬಿಲಿಯಿಂದ ಗೊಂದಲ ಸೃಷ್ಟಿಯಾಗಿದೆ. ಅಂಬಾರಿ ಮೆರವಣಿಗೆಯಲ್ಲಿ ಯಾವುದೇ ನ್ಯೂನತೆ ಆಗಿಲ್ಲ. ಗಾಬರಿಯಾಗಿ ಆನೆ ತಿರುಗಿ ಜನರ ಕಡೆಗೆ ಬರದೆ ಎಲ್ಲಿಗೆ ಹೋಗಬೇಕಿತ್ತು ಅಲ್ಲಿಗೆ ಹೋಗಿದೆ, ಆನೆ ತಿರುಗಿ ಗಲಿಬಿಲಿಗೊಂಡು ಈ ಘಟನೆ ನಡೆದಿದೆ ಮತ್ತು ಆನೆ ಅತಿರೇಕಕ್ಕೆ ಹೋಗದೆ ಒಂದು ಎಚ್ಚರಿಕೆ ನೀಡಿದೆ ಎಂದು ವಿವರಿಸಿದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ತಾಲೀಮು ಮಾಡಿದ್ದಾರೆ ಎಂದ ಸಚಿವರು, ಸೋಮವಾರ ಮತ್ತೆ ತಾನು ಚರ್ಚೆ ನಡೆಸುವುದಾಗಿ ತಿಳಿಸಿದರು. ಈ ಜಿಲ್ಲೆ ತನ್ನದೆಂದ ಅವರು, ಭಾವನೆ ಹಾಗೂ ಪರಂಪರೆಗೆ ಗೌರವ ಕೊಡುವುದಾಗಿ, ಆದರೆ ವೈಜ್ಞಾನಿಕವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ವಾಸ್ತವ ಘಟನೆ ಮತ್ತು ಮಾಧ್ಯಮದ ವರದಿ ಎಲ್ಲವನ್ನ ಪರಿಗಣಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ , ಇಲ್ಲಿ ಚರ್ಚೆಯಾದ ಎಲ್ಲಾ ವಿಚಾರಗಳನ್ನು ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿದರು. ಎಲ್ಲಾ ಗೈಡ್ ಲೈನ್ ಗಳನ್ನ ಪಾಲಿಸಲಾಗಿದೆ ಆದ್ರೂ ಅನಾಹುತ ಆಗಿದೆ, ನ್ಯಾಯಾಂಗ ತನಿಖೆ ಮಾಡಿ ಅಂತಲೂ ಸಹ ಹೇಳ್ತೇನೆ ಎಂದರು. ಬೆಳ್ಳಿ ಮಂಟಪ ಹಾನಿಯಾದಾಗ ನಮಗೂ ನೋವಾಗುತ್ತೆ ಎಂದ ಅವರು, ರಾಜ್ಯ ಸರ್ಕಾರದಲ್ಲಿ ಧಾರ್ಮಿಕ ಇಲಾಖೆ ಧಾರ್ಮಿಕ ಕಾರ್ಯಕ್ರಮ ಮಾಡುವ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
