ಕಾರು–ಕ್ಯಾಂಟರ್ ದುರಂತದ ಅಪ್​ಡೇಟ್​! ದಂಪತಿ ಸೇರಿ ನಾಲ್ವರು ಸಾವು, ಮತ್ತೊಬ್ಬರು ಗಂಭೀರ

ಹಂಚಿಕೊಳ್ಳಿ
WhatsApp Facebook X Telegram
Shikaripura Accident Two Killed, Three Injured in Car-Canter Collision
Shikaripura Accident Two Killed, Three Injured in Car-Canter Collision

ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ನಿನ್ನೆ ದಿನ ತಾಲೂಕಿನ ತರಲಘಟ್ಟ ಗ್ರಾಮದ ಸಮೀಪ ನಡೆದಿದ್ದ ಕಾರು ಹಾಗೂ ಅಡಿಕೆ ತುಂಬಿದ ಕ್ಯಾಂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಈ ವರದಿಗೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ವಿವರ ಲಭ್ಯವಾಗಿದೆ. ಕಾರು–ಕ್ಯಾಂಟರ್ ದುರಂತ ಘಟನೆಯಲ್ಲಿ ದಂಪತಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿದ್ದಾರೆ.

ಮೃತರನ್ನು ಶಿಕಾರಿಪುರ ತಾಲೂಕಿನ ಮುತ್ತಗಿ ಗ್ರಾಮದ ನಿವಾಸಿಗಳಾದ ಉಜ್ಜಪ್ಪ (77), ಅವರ ಪತ್ನಿ ಲಲಿತಮ್ಮ (65), ಉಜ್ಜಪ್ಪ ಅವರ ಸಹೋದರಿ ಹಿರೇಕೆರೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಜಯಮ್ಮ (64) ಹಾಗೂ ಕಾರು ಚಾಲಕ, ಅದೇ ಗ್ರಾಮದ ಸಿದ್ದು ವಾಲ್ಮೀಕಿ (35) ಎಂದು ಗುರುತಿಸಲಾಗಿದೆ. ಜಯಮ್ಮ ಅವರ ಪತಿ ಹನುಮಂತಪ್ಪ ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಟ್ರೀಟ್ಮೆಂಟ್ ಮುಂದುವರಿದಿದೆ.

ಹೇಗಾಯ್ತು ಘಟನೆ ಅಂತಾ ನೋಡುವುದಾದರೆ, ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಮೃತ ಉಜ್ಜಪ್ಪ ಟ್ರೀಟ್ಮೆಂಟ್​ ತೆಗೆದುಕೊಳ್ತಿದ್ರು. ಅವರನ್ನ ಡಿಸ್​ಚಾರ್ಜ್​ ಮಾಡಿಸ್ಕೊಂಡು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತರಲಘಟ್ಟ ಗ್ರಾಮದ ಹತ್ತಿರ ಕಾರು ಆಕ್ಸಿಡೆಂಟ್ ಆಗಿದೆ. ಕ್ಯಾಂಟರ್ ಕಾರು ನೇರ ನೇರಾ ಹೊಡ್ಕೊಂಡಿದ್ದರಿಂಧ ಕಾರು ಚಾಲಕ ಸಿದ್ದು ವಾಲ್ಮೀಕಿ ಮತ್ತು ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಜ್ಜಪ್ಪ ಹಾಗೂ ಜಯಮ್ಮ ಶಿವಮೊಗ್ಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor