ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಆಗುಂಬೆ ಸಮೀಪದ ಮಲ್ಲಂದೂರಲ್ಲಿ ನಿನ್ನೆ ದಿನ ಶುಕ್ರವಾರ ಬೆಳಗಿನ ಜಾವ ಕಾಡಾನೆಯೊಂದು ಓಡಾಡಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಆನೆಯೊಂದು ಗದ್ದೆಗೆ ನುಗ್ಗಿ ಭತ್ತದ ಬೆಳೆ ಹಾನಿ ಮಾಡಿರುವ ಗುರುತುಗಳು ಕಂಡು ಬಂದಿದೆ. ಈ ವಿಚಾರ ಆಗುಂಬೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಮಲ್ಲಂದೂರು ಗ್ರಾಮದ ಭತ್ತದ ಗದ್ದೆಯಲ್ಲಿ ಓಡಾಡಿರುವುದು ಕಾಡಾನೆಯೇ ಎಂದು ಸ್ಥಳೀಯರು ಹೇಳುತ್ತಿದ್ದು, ಹೆಜ್ಜೆ ಗುರುತುಗಳು ಸಹ ಇದು ಕಾಡಾನೆಯದ್ದೆ ಕೆಲಸ ಎಂದು ಹೇಳುವಂತಿದೆ. ಇನ್ನೂ ಕಾಡಾನೆಯ ತುಳಿತಕ್ಕೆ ಭತ್ತ ನೆಲದಡಿಯಾಗಿದೆ. ಊರಿನವರು ಹೇಳುವ ಪ್ರಕಾರ, ತಿಂಗಳ ಕೆಳಗೆ ಶೃಂಗೇರಿ ಸಮೀಪದ ಕಿಗ್ಗಾ ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆ, ಇಲ್ಲಿಗೆ ಬಂದಿರಬೇಕು ಎಂಬ ಅಂದಾಜಿದೆ. ಇದೇ ಆನೆ ತಿರುಗಾಟ ಆರಂಭಿಸಿದರೆ ಮಲ್ಲಂದೂರು, ಬಾಳೇಹಳ್ಳಿ, ವಾಟೇಹಳ್ಳ, ಕಂಚಿನಹಳ್ಳ, ಆಗಸರಕೋಣೆ, ಕೌರಿಹಕ್ಕಲು, ನೆರಲು ಮನೆ, ಹೊಸಂಗಡಿ ಹಾಗೂ ಬಿದರಗೋಡು ಸೇರಿದಂತೆ ಹಲವೆಡೆ ಓಡಾಡಬಹುದು. ಹಾಗಾಗಿ ಅದನ್ನ ತಡಿಬೇಕು ಎಂಬುದು ಸ್ಥಳೀಯರ ಆಗ್ರಹ
