ಶಿವಮೊಗ್ಗ: ಅಯ್ಯೋ… ಇವ್ನು ನೋಡ್ಬೇಕೋ ಬೇಡ್ವೋ! ಒಳಗೆ ಬಂದ್ ಕತ್ಕೊಂಡ್ ಹೋರ್ಟವ್ನಾ? ಪೊಲೀಸ್ರು ಬಂದ್ ಎತ್ಕೊಂಡು ಹೋದ್ರು,  ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram
ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳ
ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕಳ್ಳ
dasrara add shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಳ್ಳರು ಕಳ್ಳತನ ಮಾಡುವಾಗ ತಮ್ಮದೇ ಆದ ಬ್ಲೂಪ್ರಿಂಟ್ ಒಂದನ್ನು ಹಾಕಿಕೊಂಡಿರುತ್ತಾರೆ. ಅದು ಹಗಲು ಕಳ್ಳತನವಾದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ, ರಾತ್ರಿ ಕಳ್ಳತನವಾದರೆ ಎಲ್ಲರೂ ಮಲಗಿದ ಮೇಲೆ, ಹೀಗೆ ಜಾಗರೂಕತೆಯಿಂದ ಸುಮಾರು ದಿನಗಳಿಂದ ಪ್ಲಾನ್ ಮಾಡಿ ಕಳ್ಳತನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಯಾವುದೇ ಪ್ಲಾನ್ ಮಾಡದೆ ರಾಜಾರೋಷವಾಗಿ ಮನೆಯೊಂದಕ್ಕೆ ನುಗ್ಗಿ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಈ ಘಟನೆ ನಡೆದಿದ್ದು ಶಿವಮೊಗ್ಗ ನಗರದ ಅಚ್ಯುತ ರಾವ್ ಲೇಔಟ್ ಒಂದನೇ ಕ್ರಾಸ್‌ನಲ್ಲಿ. ಕಳ್ಳನೊಬ್ಬ ಬೆಳ್ಳಂಬೆಳಗ್ಗೆ ಕಳ್ಳತನಕ್ಕೆ ಮುಂದಾಗಿದ್ದಾನೆ. ಮನೆಯಲ್ಲಿ ಎಲ್ಲರೂ ಇರುವ ವೇಳೆ ಒಳಗೆ ನುಗ್ಗಿದ ಆತ, ಅಲ್ಲೇ ಇಟ್ಟಿದ್ದ ದೀಪ ಹಾಗೂ ಮೊಬೈಲ್ ಅನ್ನು ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಆತನು ತನ್ನನ್ನು ತಾನು ಮನೆ ಸದಸ್ಯನೆಂದುಕೊಂಡಿದ್ದನೋ ಏನೋ ಗೊತ್ತಿಲ್ಲ, ರಾಜಾರೋಷವಾಗಿ ತೆಗೆದುಕೊಂಡು ಹೋಗುಲು ರೆಡಿಯಾಗಿದ್ದಾನೆ. 

dasrara add shivamogga
shivamogga dasara add
dasrara add shivamogga

ಈ ಸಂದರ್ಭದಲ್ಲಿ ಆತನನ್ನು ಮನೆಯವರು ಗಮನಿಸಿದ್ದಾರೆ. ಕೂಡಲೇ ಮನೆಯವರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

shivamogga dasara add
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor