ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಯಾವುದೇ ಡ್ರೈವರ್ ಎಷ್ಟೆ ಎಕ್ಸ್ಪಿರಿಯೆನ್ಸ್ ಇದ್ದರೂ ಘಾಟಿ ಹತ್ತಿಸುವುದು ಸುಲಭದ ಮಾತಲ್ಲ. ಅದರಲ್ಲಿಯು ಹೇರ್ ಪಿನ್ ಕಟ್ಗಳಲ್ಲಿ ಅಪ್ ಹತ್ತಿಸುವಾಗ ಚೂರು ಕಂಟ್ರೋಲ್ ತಪ್ಪಿದರೂ ಬಸ್ ಸೀದಾ…ಗೊತ್ತಲ್ಲ. ಹಾಗಿದ್ದರೂ ನಮ್ಮ ಜಿಲ್ಲೆಯ ಡ್ರೈವರ್ಗಳು ಪ್ರತಿನಿತ್ಯ ಹತ್ತಾರು ಸಲ ಬಸ್ಗಳನ್ನ ಘಟ್ಟದ ಕೆಳಗೆ ಮೇಲೆ ಹತ್ತಿಸಿ ಇಳಿಸಿ, ಪ್ರಯಾಣಿಕರನ್ನ ಸೇಫ್ ಆಗಿ ತಲುಪಿಸುತ್ತಾರೆ.
ಈ ಮಧ್ಯೆ ನಿನ್ನೆ ದಿನ ಆಗುಂಬೆ ಘಾಟಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ವೊಂದು ಘಾಟಿ ತಿರುವಿನಲ್ಲಿ ಮೇಲಕ್ಕೆ ಬರದೆ ನಿಂತು ಬಿಟ್ಟಿತ್ತು. ಘಾಟಿಯ 6ನೇ ತಿರುವಿನಲ್ಲಿ ಬಸ್ ಅನ್ನು ಮುಂದಕ್ಕೆ ಚಲಾಯಿಸಲು ಸಾಧ್ಯವಾಗದೆ ಚಾಲಕ ಪರದಾಟ ಪಟ್ಟಿದ್ದ. ಈ ದೃಶ್ಯ ಮೇಲಿನಿಂದ ಕೆಳಕ್ಕೆ ಹೋಗುತ್ತಿದ್ದ ಬಸ್ನ ಪ್ರಯಾಣಿಕರ ಮೊಬೈಲ್ಗಳಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಘಾಟಿ ಕ್ರಾಸ್ನಲ್ಲಿ ನಾನಾ ಸಾಹಸ ಮಾಡಿ ಚಾಲಕ ಬಳಿಕ, ಕೈಸೋತಿದ್ದಾನೆ. ಅಷ್ಟರಲ್ಲಿ ಎದುರಿನಿಂದ ಬರುತ್ತಿದ್ದ ವಾಹನಗಳಲ್ಲಿದ್ದವರು, ಚಾಲಕರು ಕೆಎಸ್‌ಆರ್‌ಟಿಸಿ ಚಾಲಕನ ಸಹಾಯಕ್ಕೆ ಬಂದರು.
ಕೆಳಗಿನಿಂದ ಬರುತ್ತಿದ್ದ ವಾಹನಗಳನ್ನ ಕೆಲವರು ತಡೆದು ನಿಲ್ಲಿಸಿದರು, ಇನ್ನೂ ಕೆಲವರು ಬಸ್ನಲ್ಲಿದ್ದ ಪ್ರಯಾಣಿಕರನ್ನ ಕೆಳಕ್ಕೆ ಇಳಿಸಿ ಸುರಕ್ಷತೆಯ ಕ್ರಮ ಕೈಗೊಂಡರು, ಆ ಬಳಿಕ ಡ್ರೈವರ್ಗೆ ಗೈಡ್ ಮಾಡುತ್ತಾ, ಬಸ್ ತಿರುವಿನ ಅಂಚಿನವರೆಗೂ ರಿವರ್ಸ್ ಬರುವಂತೆ ಮಾಡಿ, ಬಳಿಕ ಟರ್ನ್ ತೆಗೆದುಕೊಳ್ಳಲು ಬೇಕಾಗುವ ಸಲಹೆ ನೀಡಿದರು. ಹಾಗೂಹೀಗೂ ಬಸ್ ಮೇಲೆ ಘಾಟಿಯ ತಿರುವು ಹತ್ತಿದ ಬಳಿಕ ಬಸ್ನಲ್ಲಿದ್ದ ಪ್ರಯಾಣಿಕರು ತಮ್ಮ ಪ್ರಯಾಣ ಮುಂದುವರಿಸಿದರು
