
ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ: ಕಿಟಕಿಯ ಮೆಶ್ ಕಟ್ ಮಾಡಿ, ಕಿಟಕಿ ಮೇಲೆ ನೇತುಹಾಕಿದ್ದ ಪ್ಯಾಂಟ್ನಲ್ಲಿದ್ದ ನಗದು ಹಾಗೂ ವ್ಯಾನಿಟಿ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಶಿವಮೊಗ್ಗದ ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ.
ವಿವೇಕಾನಂದ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಕಿಟಕಿಯ ಮೆಶ್ ಅನ್ನು ಕಟ್ ಮಾಡಿ ಕಿಟಕಿ ಮೇಲೆ ನೇತುಹಾಕಿದ್ದ ಪ್ಯಾಂಟ್ ಅನ್ನು ಪರಿಶೀಲಿಸಿದ್ದಾರೆ. ಅದರಲ್ಲಿದ್ದ 8 ಸಾವಿರ ರೂಪಾಯಿ ನಗದನ್ನು ಕದ್ದು, ಅಲ್ಲೇ ಪಕ್ಕದಲ್ಲಿದ್ದ ವ್ಯಾನಿಟಿ ಬ್ಯಾಗ್ ಅನ್ನು ಪರಿಶೀಲಿಸಿದ್ದಾರೆ. ಅದರಲ್ಲಿ 3,80,000 ರೂಪಾಯಿ ಮೌಲ್ಯದ 38 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಹಾಗೂ ಮನೆಯ ಇಂಟರ್ಲಾಕ್ ಕೀಯನ್ನು ಸಹ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.



ದೂರುದಾರರು ಬೆಳಗ್ಗೆ ಎದ್ದಾಗ ಪ್ಯಾಂಟ್ ಕಿಟಕಿಯ ಬಳಿ ಬಿದ್ದಿರುವುದು ಕಾಣಿಸಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಹಣ ಕಳುವಾಗಿರುವುದು ಗೊತ್ತಾಗಿದೆ. ಅಲ್ಲೇ ಪಕ್ಕದಲ್ಲಿ ನೋಡಿದಾಗ ವ್ಯಾನಿಟಿ ಬ್ಯಾಗ್ ಸಹ ಬಿದ್ದಿರುವುದು ಕಂಡುಬಂದಿದ್ದು, ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿರುವುದು ದೂರುದಾರರಿಗೆ ದೃಢಪಟ್ಟಿದೆ. ಈ ಹಿನ್ನೆಲೆ, ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದನ್ನು ಕಳ್ಳತನ ಮಾಡಿರುವ ಕಳ್ಳರನ್ನು ಬಂಧಿಸುವಂತೆ ದೂರುದಾರರು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

