ಬೆಳಗಿನ ವಾಯುವಿಹಾರದ ವೇಳೆ ಕುಸಿದು ಬಿದ್ದು ನೂರ್ ಮೊಹಮ್ಮದ್ ಸಾವು

ಹಂಚಿಕೊಳ್ಳಿ
WhatsApp Facebook X Telegram
Noor Mohammad dies of heart attack during morning walk
Noor Mohammad dies of heart attack during morning walk

ಮಲೆನಾಡು ಟುಡೆ ಸುದ್ದಿ / ಬೆಳಗಿನ ವಾಯುವಿಹಾರದ ವೇಳೆ ಹೃದಯಾಘಾತ ಸಂಭವಿಸಿ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಬಗ್ಗೆ ವರದಿಯಾಗಿದೆ ನಿನ್ನೆ ಬೆಳಿಗ್ಗೆ ಶಿವಮೊಗ್ಗದ ನೆಹರೂ ಸ್ಟೇಡಿಯಮ್ ಬಳಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ನೂರ್ ಮೊಹಮ್ಮದ್ (64-65 ವರ್ಷ) ಎಂದು ಗುರುತಿಸಲಾಗಿದೆ.

ಪ್ರತಿದಿನವೂ ಇವರು ನೆಹರೂ ಸ್ಟೇಡಿಯಮ್​ನಲ್ಲಿ ವಾಕ್ ಮಾಡುತ್ತಿದ್ದರು, ಯೋಗ ಪ್ರಾಕ್ಟೀಸ್​ನಲ್ಲಿಯು ಸಕ್ರಿಯರಾಗಿದ್ದರು. ಅದೆರೀತಿಯಲ್ಲಿ ನಿನ್ನೆಯು ಸ್ನೇಹಿತರೊಂದಿಗೆ ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಮಲೆನಾಡು ಟುಡೆಗೆ ನೂರ್​ರವರ ಸ್ನೇಹಿತರೊಬ್ಬರು ತಿಳಿಸಿದ ಮಾಹಿತಿ ಪ್ರಕಾರ, ಕಳೆದ 3 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನೂರ್ ಮೊಹಮ್ಮದ್ ಅವರಿಗೆ ಮಧುಮೇಹದ ಸಮಸ್ಯೆ ಇತ್ತು. ಕಳೆದ 15-20 ದಿನಗಳಿಂದ ತೀವ್ರ ಸುಸ್ತು ಎಂದು ಹೇಳಿಕೊಳ್ಳುತ್ತಿದ್ದ ಅವರು, ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ನಿಧಾನವಾಗಿ ವಾಕ್ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಪವಿತ್ರ ಮೆಕ್ಕಾ ಯಾತ್ರೆ ಮುಗಿಸಿ ಹಿಂದಿರುಗಿದ್ದರು. ಆನಂತರ ಅವರ ದೇಹದಲ್ಲಿ ಶುಗರ್​ ಪ್ರಮಾಣ ಜಾಸ್ತಿಯಾಗಿತ್ತು ಈ ಹಿನ್ನೆಲೆಯಲ್ಲಿ ಅವರು ಇನ್ಸುಲಿನ್ ಪಡೆಯುತ್ತಿದ್ದರು. ಇನ್ನೂ ಇನ್ಸುಲಿನ್ ಪಡೆದ ಕಾರಣದಿಂದ, ಬೆಳಗಿನ ಜಾವ ಅವರ ದೇಹದಲ್ಲಿ ಸಕ್ಕರೆಯ ಅಂಶ ದಿಢೀರ್ ಕುಸಿತ ಕಂಡಿದೆ ಎನ್ನಲಾಗಿದೆ.ಆ ಬಳಿಕ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನೂ ನೆಹರೂ ಸ್ಟೇಡಿಯಂನಲ್ಲಿ ವಾಯು ವಿಹಾರ ಮಾಡುವವರನ್ನು ಒಳಗೊಂಡಂತೆ ಹಲವರ ಜೊತೆ ಸ್ನೇಹ ಹೊಂದಿದ್ದ ನೂರ್ ಮೊಹಮ್ಮದ್ ಸಾವಿಗೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor