ನವೆಂಬರ್ 1ರಿಂದ ಮೊಬೈಲ್‌ಗೆ ಅನ್​ನೌನ್​ ನಂಬರ್​ನಿಂದ ಕಾಲ್​ ಬಂದರೂ, ಸಿಮ್ ಓನರ್​ನ ಹೆಸರು ಕಾಣಿಸಲಿದೆ! ಹೇಗೆ ಗೊತ್ತಾ3

ಹಂಚಿಕೊಳ್ಳಿ
WhatsApp Facebook X Telegram
Caller Name Display Mandatory from November 1 DoT CNP Rule for 4G, 5G
Caller Name Display Mandatory from November 1 DoT CNP Rule for 4G, 5G

ಮಲೆನಾಡು ಟುಡೆ ಸುದ್ದಿ / ನವದೆಹಲಿ / ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದಾಗ, ಅವರು ಯಾರು ಅಂತಾ ತಲೆಕೆರದುಕೊಳ್ಳುವುದೆ ಆಗುತ್ತೆ ಹೊರತಾಗಿ, ಯಾರು ಅಂತಾ ಗೊತ್ತಾಗಲ್ಲ. ಇನ್ಮೇಲೆ ಈ ಕಿರಿಕಿರಿ ಸ್ವಲ್ಪ ಕಡಿಮೆ ಆಗಬಹುದು. ಏಕೆಂದರೆ ನವೆಂಬರ್ 1ರಿಂದ 4G ಹಾಗೂ 5G ಮೊಬೈಲ್ ಬಳಕೆದಾರರಿಗೆ ಬರುವ ಅಪರಿಚಿತ ಕರೆಗಳಲ್ಲಿಯೂ ಕರೆ ಮಾಡಿದವರ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಸಂಬಂಧ ದೂರಸಂಪರ್ಕ ಇಲಾಖೆ ಎಲ್ಲ ಟೆಲಿಕಾಂ ಸೇವಾದಾರರಿಗೆ ಹೊಸ ಸೌಲಭ್ಯ ಒದಗಿಸುವುದನ್ನು ಕಡ್ಡಾಯಗೊಳಿಸಿದೆ.

ಅಕ್ಟೋಬರ್ 13ರಂದು ದೂರಸಂಪರ್ಕ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ನವೆಂಬರ್ 1ರಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ (Calling Name Presentation – CNP) ಸೌಲಭ್ಯವನ್ನು ಎಲ್ಲ ದೂರಸಂಪರ್ಕ ಸೇವಾದಾರರು ಒದಗಿಸಬೇಕಾಗಿದೆ. ಈ ವ್ಯವಸ್ಥೆಯ ಮೂಲಕ ಮೊಬೈಲ್‌ನಲ್ಲಿ ಸೇವ್ ಮಾಡದ ಸಂಖ್ಯೆಯಿಂದ ಕರೆ ಬಂದರೂ ಆ ಸಂಖ್ಯೆಯೊಂದಿಗೆ ಸಂಬಂಧಿಸಿದ ಹೆಸರನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ಹೊಸ ಸಿಎನ್‌ಪಿ ವ್ಯವಸ್ಥೆಯಲ್ಲಿ ಮೊಬೈಲ್‌ನಲ್ಲಿ ಸೇವ್ ಆಗದ ಸಂಖ್ಯೆಯಿಂದ ಕರೆ ಬಂದಾಗಲೂ ಸಂಬಂಧಪಟ್ಟ ಟೆಲಿಕಾಂ ಸೇವಾದಾರರ ಬಳಿ ದಾಖಲಾಗಿರುವ ಹೆಸರನ್ನು ಮೊಬೈಲ್ ಸಂಖ್ಯೆಯೊಂದಿಗೆ ಪ್ರದರ್ಶಿಸಲಾಗುತ್ತದೆ. ಇದರಿಂದ ಸಂಪರ್ಕ ಪಟ್ಟಿಯಲ್ಲಿ ಇಲ್ಲದ ಸಂಖ್ಯೆಯಿಂದ ಕರೆ ಬಂದಾಗಲೂ ಆ ಸಂಖ್ಯೆ ಯಾರ ಹೆಸರಿನಲ್ಲಿ ದಾಖಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇನ್ನೂ ಹೊಸ ವ್ಯವಸ್ಥೆಯಲ್ಲಿ ಇಂಟರ್ ನ್ಯಾಷನಲ್ ಕಾಲ್​ಗಳನ್ನ ಅಂತಾರಾಷ್ಟ್ರೀಯ ಕರೆ ಅಂತಲೇ ತೋರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಳಿದಂತೆ ಟೆಲಿಕಾಂ ಸೇವಾದಾರರ ಬಳಿ ದಾಖಲಾಗಿರುವ ಹೆಸರನ್ನು ಪ್ರದರ್ಶಿಸುವ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ಸೌಲಭ್ಯವನ್ನು ನವೆಂಬರ್ 1ರಿಂದ ಒದಗಿಸುವುದು ಕಡ್ಡಾಯವಾಗಲಿದೆ ಎಂದು ದೂರಸಂಪರ್ಕ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor