ಟ್ರ್ಯಾಕ್ಟರ್ ಚಿತ್ರವಿರುವ ₹5 ನೋಟಿಗೆ ₹20 ಲಕ್ಷ! ವಿಜಯ್, ಮೋದಿ, ಸಿದ್ದರಾಮಯ್ಯರ ಪೋಟೋ ಇರುವ ಆಡ್ ನೋಡಿ ಮೋಸ ಹೋಗಬೇಡಿ! ಈ ವಿಷಯ ತಿಳಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Tractor ₹5 Note Worth ₹20 Lakh Warning Over Fake Currency Note Offers
Tractor ₹5 Note Worth ₹20 Lakh Warning Over Fake Currency Note Offers

ಮಲೆನಾಡು ಟುಡೆ ಸುದ್ದಿ / ಟ್ರ್ಯಾಕ್ಟರ್ ಚಿತ್ರವಿರುವ ಹಳೆಯ ₹5 ನೋಟಿಗೆ ₹20 ಲಕ್ಷ ನೀಡುವುದಾಗಿ ನಂಬಿಸಿ ಮುಗ್ಧ ಜನರನ್ನು ವಂಚಿಸುವ ಪ್ರಕರಣಗಳು ಸೋಶಿಯಲ್ ಮೀಡಿಯಾ ಇನ್​ಸ್ಟಾಗ್ರಾಮ್​ನಲ್ಲಿ ವಿಪರೀತವಾಗಿ ನಡೆಯುತ್ತಿದೆ. ಕರ್ನಾಟಕ ಸರ್ಕಾರದ ಲೋಗೋ ಬಳಸಿ ತಮಿಳು ನಾಡು ಸಿಎಂ ಫೋಟೋ ಹಾಕಿ ಆಡ್ ನೀಡುವ ಹಾಗೂ ಮೋದಿ ಸಿದ್ದರಾಮಯ್ಯರ ಫೋಟೋ ಬಳಸಿ ಆಡ್ ನೀಡುವ ಟ್ರಸ್ಟಡ್​ ಅಕೌಂಟ್ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇಂತಹ ಆಡ್​ಗಳನ್ನ ನಂಬಿ ವಿಶೇಷವಾಗಿ ಇನ್​ಸ್ಟಾಗ್ರಾಮ್ ಜಾಹಿರಾತುಗಳನ್ನ ನಂಬಬೇಡಿ ಎಂದು ದಸರಾ ಅಂಗವಾಗಿ ನಾಣ್ಯ ಪ್ರದರ್ಶನ ಹಮ್ಮಿಕೊಂಡಿರುವ ಮಲೆನಾಡು ನಾಣ್ಯ ಮತ್ತು ಅಂಚೆಚೀಟಿ ಸಂಗ್ರಾಹಕರ ಟ್ರಸ್ಟ್ ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ತಿಳಿಸಿದ್ದಾರೆ.

ನಿನ್ನೆ ದಿನ ಶಿವಮೊಗ್ಗದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಇವರು ಟ್ರ್ಯಾಕ್ಟರ್ ಚಿತ್ರವಿರುವ ₹5 ನೋಟಿನ ಮುಖಬೆಲೆ ಕೇವಲ ₹5 ಮಾತ್ರ. ನಾಣ್ಯ ಹಾಗೂ ಹಳೆಯ ನೋಟುಗಳ ಸಂಗ್ರಹಕಾರರ ಬಳಿ ಅದರ ಬೆಲೆ ₹10ರಿಂದ ₹12ರವರೆಗೆ ಇರಬಹುದು. ಆದರೆ ಕೆಲವರು ಇದೇ ನೋಟಿಗೆ ₹20 ಲಕ್ಷ ನೀಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ಇಂತಹ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಹಳೆಯ ನೋಟುಗಳಿಗೆ ಲಕ್ಷಾಂತರ ರೂಪಾಯಿ ಬೆಲೆ ದೊರೆಯುತ್ತದೆ ಎಂಬ ಮಾತುಗಳನ್ನು ನಂಬಿ ಮೋಸ ಹೋಗಬಾರದು. ಇಂತಹ ಭರವಸೆಗಳನ್ನು ನೀಡುವವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ವಿನೋದ್ ಕುಮಾರ್ ಜೈನ್ ಹೇಳಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor