ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಹಾಗೂ ಮಲೆನಾಡಿನ ಪ್ರಮುಖ ರಾಜಕೀಯ ಬೆಳವಣಿಗೆಗಳು, ಸ್ಥಳೀಯ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳು, ಶಿಕ್ಷಣ, ಸಾಹಿತ್ಯ, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಬದುಕಿಗೆ ಸಂಬಂಧಿಸಿದ ವಿಶೇಷ ಲೇಖನಗಳೊಂದಿಗೆ ಇಂದಿನ ಇ ಪತ್ರಿಕೆಯನ್ನ ಇಲ್ಲಿ ನೀಡಲಾಗಿದೆ. ಓದುಗರು ಇಂದಿನ 4 ಪುಟಗಳ ಸಂಪೂರ್ಣ ಪತ್ರಿಕೆಯನ್ನು PDF ರೂಪದಲ್ಲಿ ಓದಿಕೊಳ್ಳಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಮಲೆನಾಡು ಟುಡೆ ಇ-ಪೇಪರ್ ಮುಖಪುಟದಲ್ಲಿದೆ ರಾಜ್ಯ ರಾಜಕೀಯದ ಪ್ರಮುಖ ಸುದ್ದಿ
ಶಿವಮೊಗ್ಗ ಜಿಲ್ಲೆಯಿಂದ 5ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಆಶಯ ಇಂದಿನ ಪತ್ರಿಕೆಯ ಪ್ರಮುಖ ಸುದ್ದಿಗಳಲ್ಲೊಂದಾಗಿದೆ. ಹೊಸನಗರದಲ್ಲಿ ನಡೆದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ವಿಜಯೇಂದ್ರ ಅವರ ಪಕ್ಷ ಸಂಘಟನಾ ಚಟುವಟಿಕೆಗಳ ಬಗ್ಗೆ ಹಾಲಪ್ಪ ಮಾತನಾಡಿರುವ ವಿವರವನ್ನು ಪ್ರಕಟ ಮಾಡಲಾಗಿದೆ.
ರಾಜ್ಯದಲ್ಲಿ 3ನೇ ಮುಖ್ಯಮಂತ್ರಿ ಬಂದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದು ಸಹ ಇವತ್ತಿನ ಮತ್ತೊಂದು ಪ್ರಮುಖ ಸುದ್ದಿ. ಕಾಂಗ್ರೆಸ್ನಲ್ಲಿ ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ಗಳ ಷಡ್ಯಂತ್ರ ನಡೆಯುತ್ತಿದೆ ಎಂಬ ಅವರ ಆರೋಪ, ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಹೇಳಿಕೆ ಹಾಗೂ ಚುನಾವಣೆ ಘೋಷಣೆಯಾದರೆ 20ರಿಂದ 25 ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂಬ ಅವರ ಹೇಳಿಕೆಯ ವಿವರಗಳು ಮುಖಪುಟದಲ್ಲಿವೆ.
ಝೆಕ್ ಗಣರಾಜ್ಯದ ಕಂಪನಿಗಳು ಬೆಂಗಳೂರಿಗೆ ಸೀಮಿತವಾಗದೆ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಹೂಡಿಕೆ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ನೀಡಿರುವ ಆಹ್ವಾನ, ಝೆಕ್ ನಿಯೋಗದೊಂದಿಗಿನ ಸಮಾಲೋಚನೆ ಹಾಗೂ ಕೈಗಾರಿಕಾ ಹೂಡಿಕೆ ಅವಕಾಶಗಳ ಕುರಿತಾದ ವರದಿಯೂ ಪ್ರಕಟವಾಗಿದೆ.
ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮಾಡಿರುವ ರಾಜಕೀಯ ಆರೋಪಗಳು ಮತ್ತು ಶಿಕಾರಿಪುರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದ ಸುದ್ದಿಯನ್ನೂ ಮುಖಪುಟದಲ್ಲಿ ಓದಬಹುದು.
ಎರಡನೇ ಪುಟದಲ್ಲಿ ಬದುಕಿನ ಬಗ್ಗೆ ಚಿಂತನೆಗೆ ಹಚ್ಚುವ ಲೇಖನಗಳು
ಇಂದಿನ ಪತ್ರಿಕೆಯ 2ನೇ ಪುಟದಲ್ಲಿ ‘ಹಣವಿದ್ದಾಗ ನೂರು ಆಟ… ಖಾಲಿಯಾದಾಗ ಜೀವನವೇ ಪಾಠ!’ ವಿಶೇಷ ಲೇಖನವಿದೆ. ಇದರೊಂದಿಗೆ ‘ಇರಲಿ ಬಿಡು… ಯಾವಾಗಲಾದರೂ ಬೇಕಾಗಬಹುದು!’ ಎಂಬ ಮತ್ತೊಂದು ವಿಶೇಷ ಬರಹವಿದೆ. ಮೂರನೇ ಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಸುದ್ದಿಗಳಿಗೆ ಆದ್ಯತೆ ನೀಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಹಸಿರುಮಕ್ಕಿ ಸೇತುವೆಯನ್ನು ಲೋಕಾರ್ಪಣೆ ಮಾಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ನೀಡಿರುವ ಭರವಸೆ, ತುಮರಿಯಲ್ಲಿ ₹22 ಕೋಟಿ ವೆಚ್ಚದ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆ, ಜಾನುವಾರು ಸಾಕಣೆದಾರರಿಗೆ ಉಚಿತ ಮೇವಿನ ಬೀಜ ವಿತರಣೆಗಾಗಿ ಅರ್ಜಿ ಆಹ್ವಾನ ಹಾಗೂ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮಮನೋಹರ ಲೋಹಿಯಾ ಹೆಸರಿಡುವಂತೆ ಆಗ್ರಹಿಸಿರುವ ಸುದ್ದಿಗಳು ಪ್ರಕಟವಾಗಿವೆ.
ಇಂದಿನ ಸಂಪೂರ್ಣ ಇ-ಪತ್ರಿಕೆ ಓದಿ, PDF ಡೌನ್ಲೋಡ್ ಮಾಡಿಕೊಳ್ಳಿ
ಮಲೆನಾಡು ಟುಡೆ ದಿನಪತ್ರಿಕೆಯ ಇಂದಿನ ಸಂಪೂರ್ಣ ಸಂಚಿಕೆಯನ್ನು ಓದಿ. ನಿಮ್ಮ ಸ್ನೇಹಿತರು, ಪರಿಚಯಸ್ಥರು ಹಾಗೂ ಮಲೆನಾಡಿನ ಸುದ್ದಿಗಳಲ್ಲಿ ಆಸಕ್ತಿ ಹೊಂದಿರುವವರೊಂದಿಗೆ ಇ-ಪತ್ರಿಕೆಯನ್ನು ಹಂಚಿಕೊಳ್ಳಿ.
