ಬೀರೂರು ಹತ್ತಿರ, ಹೆದ್ದಾರಿಯಲ್ಲಿ ಸಾರಿಗೆ ಬಸ್‌–ಬೈಕ್ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಯುವಕರ ಸಾವು

ಹಂಚಿಕೊಳ್ಳಿ
WhatsApp Facebook X Telegram
Lightning Strike Trading advertisement Current shock : Rippon pete Dasara Sports cyber crimeThreat case
Lightning Strike Trading advertisement Rippon pete Dasara Sports cyber crime Threat case

ಮಲೆನಾಡು ಟುಡೆ ಸುದ್ದಿ / ಬೀರೂರು /ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೀರೂರಿನ ಪಲ್ಸ್ ಕ್ಲಬ್ ಮುಂಭಾಗದಲ್ಲಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಬ್ಯಾಗಡೇಹಳ್ಳಿ ಗ್ರಾಮದ ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದಾರೆ.

ಬ್ಯಾಗಡೇಹಳ್ಳಿ ಗ್ರಾಮದ ಅಜಯ್ ಬಿ.ಎಸ್. (27) ಹಾಗೂ ಗಿರೀಶ್ (22) ಮೃತಪಟ್ಟವರು. ಇಬ್ಬರೂ ಬೈಕ್‌ನಲ್ಲಿ ಬಿಳುವಾಲದಿಂದ ಬ್ಯಾಗಡೇಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪಲ್ಸ್ ಕ್ಲಬ್ ಮುಂಭಾಗ ಬೈಕ್ ಸಾಗುತ್ತಿದ್ದ ವೇಳೆ, ಬೀರೂರಿನಿಂದ ಅತಿವೇಗದಲ್ಲಿ ಬಂದ ಸಾರಿಗೆ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬೈಕ್‌ನಲ್ಲಿದ್ದ ಅಜಯ್ ಮತ್ತು ಗಿರೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಇಬ್ಬರೂ ಯುವಕರ ತಲೆ, ಮುಖ ಹಾಗೂ ಮೈಕೈಗೆ ತೀವ್ರ ಪೆಟ್ಟಾಗಿದ್ದು, ಗಾಯಗಳ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಡರಾತ್ರಿ ನಡೆದ ಈ ರಸ್ತೆ ಅಪಘಾತದಲ್ಲಿ ಬ್ಯಾಗಡೇಹಳ್ಳಿ ಗ್ರಾಮದ 27 ವರ್ಷದ ಅಜಯ್ ಹಾಗೂ 22 ವರ್ಷದ ಗಿರೀಶ್ ಮೃತಪಟ್ಟಿರುವುದು ವರದಿಯಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor