ಶಿವಮೊಗ್ಗ: ಮೆಸೇಜ್ ಮಾಡಿದಾಗ 50 ಸಾವಿರ ಹಾಕು ಅಂದ್ಲು ಸೋನಲ್ ; ನಂಬಿದ ವೃದ್ಧ ಕಳೆದುಕೊಂಡಿದ್ದು 10 ಲಕ್ಷ! 

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ವೃದ್ಧರೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. 

ಶಿವಮೊಗ್ಗದ ವೃದ್ಧರೊಬ್ಬರು ಆನ್‌ಲೈನ್‌ನಲ್ಲಿ ಜಾಹೀರಾತು ನೋಡುತ್ತಿದ್ದಾಗ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂಬ ಜಾಹೀರಾತೊಂದು ಕಾಣಿಸಿದೆ. ಇದನ್ನು ನಂಬಿದ ವೃದ್ಧರು ಅದರ ಲಿಂಕ್ ಕ್ಲಿಕ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಾಪ್ ಪೇಜ್ ಓಪನ್ ಆಗಿದ್ದು, ಸೋನಲ್ ಎನ್ನುವ ಯುವತಿಯ ನಂಬರ್ ಕಾಣಿಸಿದೆ. ದೂರುದಾರ ವೃದ್ಧರು ಆ ನಂಬರ್‌ಗೆ ಮೆಸೇಜ್ ಮಾಡಿದಾಗ, 50 ಸಾವಿರ ರೂಪಾಯಿ ಹೂಡಿಕೆ ಮಾಡುವಂತೆ ಆಕೆ ತಿಳಿಸಿದ್ದಾಳೆ. ಅದರಂತೆ ವೃದ್ಧರು 50 ಸಾವಿರ ಡೆಪಾಸಿಟ್ ಮಾಡಿದ್ದು, ವಂಚಕರು ಸೂಚಿಸಿದ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. 

ಹೀಗೆ ದಿನ ಕಳೆದಂತೆ ಆ್ಯಪ್‌ನಲ್ಲಿ ಲಾಭ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ವೃದ್ಧರು ಹಣ ಡೆಪಾಸಿಟ್ ಮಾಡುತ್ತಾ ಹೋಗಿದ್ದಾರೆ. ಕೆಲ ದಿನಗಳ ನಂತರ ವಂಚಕರು 74,00,000 ಹಣ ಹಾಕುವಂತೆ ವೃದ್ಧನಿಗೆ ತಿಳಿಸಿದ್ದಾರೆ. ಯಾವುದೇ ಲಾಭವೂ ಕೈಗೆ ಸಿಗದೆ, ಸುಮ್ಮನೆ ಹಣ ವ್ಯರ್ಥವಾಗುತ್ತಿರುವುದನ್ನು ಅರಿತ ವೃದ್ಧರು ಮತ್ತಷ್ಟು ಹಣ ಹಾಕಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ, ಆ್ಯಪ್‌ನಲ್ಲಿ ತೋರಿಸಲಾಗಿದ್ದ ಬಾಕಿ ಹಣವನ್ನು ಹಿಂಪಡೆಯಲು ಯತ್ನಿಸಿದ್ದಾರೆ. ಆದರೆ ಆ ಹಣ ವಿತ್‌ಡ್ರಾ ಆಗಲಿಲ್ಲ. ಆ ಸಂದರ್ಭದಲ್ಲಿ ತಾನು ಮೋಸ ಹೋಗಿರುವುದನ್ನು ಅರಿತ ವೃದ್ಧರು, ವಂಚಕರನ್ನು ಪತ್ತೆಹಚ್ಚಿಕೊಡುವಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor