ಶಿವಮೊಗ್ಗಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ: ರೈಲ್ವೇ ಯೋಜನೆ ಕುರಿತು ಬಿವೈ ರಾಘವೇಂದ್ರರೊಂದಿಗೆ ಚರ್ಚೆ, ಬಿ,ಎಸ್,​ಸಿ ಶೋರೂಂ ಉದ್ಘಾಟನೆ 

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗಕ್ಕೆ ಸಚಿವ ವಿ ಸೋಮಣ್ಣ
ಶಿವಮೊಗ್ಗಕ್ಕೆ ಸಚಿವ ವಿ ಸೋಮಣ್ಣ

 ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ :ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಕ್ಟೋಬರ್ 12ರಂದು ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 6:30ಕ್ಕೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ವಿಶೇಷ ಪರಿಶೀಲನಾ ರೈಲಿನ ಮೂಲಕ ತುಮಕೂರು, ಅರಸೀಕೆರೆ ಮತ್ತು ಬೀರೂರು ಮಾರ್ಗವಾಗಿ ಹೊರಡಲಿರುವ ಅವರು, ಬೆಳಿಗ್ಗೆ 10:30ಕ್ಕೆ ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 

ನಗರಕ್ಕೆ ಆಗಮಿಸಿದ ತಕ್ಷಣ ಸಚಿವರು, ಬಿ.ಎಚ್. ರಸ್ತೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಇರುವ ಪಾರೇಖ್ ವಿನಾಯಕ ಮಾಲ್‌ನಲ್ಲಿ ನೂತನವಾಗಿ ಆರಂಭವಾಗುತ್ತಿರುವ ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್‌’ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕೂಡ ಸಚಿವರೊಂದಿಗೆ ಪಾಲ್ಗೊಂಡು ನೂತನ ಶೋರೂಂ ಅನ್ನು ಶುಭಾರಂಭ ಮಾಡಲಿದ್ದಾರೆ. 

ಬಳಿಕ ಬೆಳಿಗ್ಗೆ 11:30ಕ್ಕೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಅತ್ಯಂತ ಪ್ರಮುಖವಾದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮೈಸೂರು ವಿಭಾಗದ ಡಿಆರ್‌ಎಮ್, ನೈಋತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿಗಳು, ವಿವಿಧ ರೈಲ್ವೆ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯ ನಂತರ ಮಧ್ಯಾಹ್ನ 1:30ಕ್ಕೆ ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣದಿಂದ ನಿರ್ಗಮಿಸಲಿರುವ ಸಚಿವರು, 2:30ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ರೈಲ್ವೆ ನಿಲ್ದಾಣಕ್ಕೆ ತಲುಪಿ ಮುಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor