ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂದು ಯೂಟ್ಯೂಬ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಶಿವಮೊಗ್ಗದ ಉದ್ಯಮಿಯೊಬ್ಬರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಹೀಗೆ ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ, ದೂರುದಾರ ಉದ್ಯಮಿಗೆ ಜಾಹೀರಾತೊಂದು ಕಾಣಿಸಿದೆ. ಅದರಲ್ಲಿ EXNEES ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಮಾಡಿಕೊಡುತ್ತೇವೆ ಎಂದು ವಂಚಕರು ತಿಳಿಸಿದ್ದಾರೆ. ಇದನ್ನು ಸತ್ಯವೆಂದು ನಂಬಿದ ಉದ್ಯಮಿ, ಅಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ತಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ನೀಡಿದ್ದಾರೆ. ನಂತರ ವಂಚಕರು ಅಲ್ಲಿ ತೋರಿಸಿದ ಕ್ಯೂ ಆರ್ ಕೋಡ್ ಮೂಲಕ ಹಣವನ್ನು ಹೂಡಿಕೆ ಮಾಡುತ್ತಾ ಬಂದಿದ್ದಾರೆ.
ಹಣ ಹೂಡಿಕೆ ಮಾಡಿದ ಮೊದಲು ಅವರಿಗೆ ಆ್ಯಪ್‌ನಲ್ಲಿ ಲಾಭಾಂಶ ಸೇರಿ ಒಟ್ಟು ಮೊತ್ತ ತೋರಿಸುತ್ತಿತ್ತು. ಹೀಗೆ ಉದ್ಯಮಿ ಒಟ್ಟಾರೆಯಾಗಿ ಒಟ್ಟು 1,20,08,500 ಪಾವತಿಸಿದ್ದಾರೆ. ಆದರೆ ಹಣವನ್ನು ಹಿಂಪಡೆಯಲು ಹೋದಾಗ ಹಣ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತು ಮನನೊಂದ ವ್ಯಕ್ತಿ, EXNEES ಆ್ಯಪ್ ಅನ್ನು ಬ್ಲಾಕ್ ಮಾಡಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
