ಶಿವಮೊಗ್ಗ: ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ 97ನೇ ವರ್ಷದ ಶ್ರೀ ವಿನಾಯಕೋತ್ಸವ; ಅಕ್ಟೋಬರ್ 4ಕ್ಕೆ ರಾಜಬೀದಿ ಉತ್ಸವ, ಅ.5ಕ್ಕೆ ವಿಸರ್ಜನೆ 

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕ ವೃತ್ತದ ಶ್ರೀ ಸರ್ವಸಿದ್ಧಿ ವಿನಾಯಕಸ್ವಾಮಿ ಸೇವಾ ಸಮಿತಿಯಿಂದ 97ನೇ ವರ್ಷದ ಶ್ರೀ ವಿನಾಯಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ.1ರಂದು ಬೆಳಿಗ್ಗೆ 9.30ಕ್ಕೆ 121 ಕಾಯಿ ವಿಶೇಷ ಗಣಹೋಮ ನಡೆಯಲಿದೆ. ಅ.3ರಂದು ಅನ್ನಸಂತರ್ಪಣೆ ಹಾಗೂ ರಾತ್ರಿ 7ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ.

ಅ.4ರಂದು ಸಂಜೆ 6ರಿಂದ ಶ್ರೀ ವಿನಾಯಕಸ್ವಾಮಿಯ ರಾಜಬೀದಿ ಉತ್ಸವ ನಡೆಯಲಿದೆ. ಭಜನೆ, ವೀರಗಾಸೆ, ಡೊಳ್ಳಿನ ಕುಣಿತ ಹಾಗೂ ವಿವಿಧ ವೇಷಭೂಷಣಗಳೊಂದಿಗೆ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಮೆರವಣಿಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಆರಂಭವಾಗಿ ಗಾಂಧಿಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ, ಗೋಪಿ ಸರ್ಕಲ್, ಜೆ.ಪಿ.ಎನ್. ರಸ್ತೆ, ಎಲ್‌ಎಲ್‌ಆರ್ ರಸ್ತೆ, ಸಾವರಲೈನ್ ರಸ್ತೆ ಮೂಲಕ ಪುನಃ ಗೋಪಿ ಸರ್ಕಲ್, ನೆಹರು ರಸ್ತೆ ಮಾರ್ಗವಾಗಿ ರಾಮಣ್ಣ ಶ್ರೇಷ್ಠಿ ಪಾರ್ಕ್ ತಲುಪಲಿದೆ.

ಮರುದಿನ ಬೆಳಿಗ್ಗೆ 7ರಿಂದ ಬಿ.ಬಿ. ರಸ್ತೆ, ಸೀಗೆಹಟ್ಟಿ, ಕುಂಬಾರಬೀದಿ, ಕೆ.ಆರ್.ಪುರಂ ರಸ್ತೆ, ಹೆಚ್. ಸಿದ್ಧಯ್ಯ ರಸ್ತೆ ಮೂಲಕ ಗಾಂಧಿಬಜಾರ್ ತಲುಪಿ, ಅಲ್ಲಿಂದ ಶ್ರೀ ವಿನಾಯಕಸ್ವಾಮಿಯ ಮೂರ್ತಿಯನ್ನು ತುಂಗಾನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಉತ್ಸವ ಕಾರ್ಯದರ್ಶಿ ಜಿ.ಸಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor