ಶಿವಮೊಗ್ಗ : 10 ಸಾವಿರ ಲಂಚ, 9 ವರ್ಷದ ಹಿಂದಿನ ಪ್ರಕರಣ, ಅಧಿಕಾರಿಗೆ ಕೋರ್ಟ್​​ಕೊಟ್ಟ ಶಿಕ್ಷೆ ಏನು ಗೊತ್ತಾ ? 

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ:  ಅರ್ಜಿದಾರರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಅಸಿಸ್ಟೆಂಟ್ ಎ.ಕೆ. ಕಾಂತರಾಜ್‌ಗೆ ಶಿಕ್ಷೆಯಾಗಿದೆ. ಇವರಿಗೆ 2 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಹಾಗೂ 30,000 ದಂಡ ವಿಧಿಸಿ ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಶಿವಮೊಗ್ಗ ; ಮಲ್ನಾಡಲ್ಲಿ ಅಡಿಕೆ ರೇಟು ಮತ್ತುಷ್ಟು ಇಳಿಯುತ್ತಾ ? ಏರೋದಾದ್ರೂ ಯಾವಾಗ? ದಿನೇ ದಿನೇ ಅಡ್ಕೆ ರೇಟ್​​ ಕಡ್ಮೆ ಆಗೋಕೆ ಕಾರಣ ಏನು? ಸಂಪೂರ್ಣ ವಿವರ ಇಲ್ಲಿದೆ. : https://malenadutoday.com/shivamogga-arecanut-price-drop/

ಪ್ರಕರಣದ ಹಿನ್ನೆಲೆ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಮೂಲದ ಕೆ. ಅಂಜನಪ್ಪ ಎಂಬುವರು 2016 ರಲ್ಲಿ ಅಡಿಕೆ ಹಾಳೆ ತಟ್ಟೆ ತಯಾರಿಸುವ ಸಣ್ಣ ಉದ್ಯಮ ಆರಂಭಿಸಲು ಐ.ಎಸ್.ಬಿ ಯೋಜನೆಯಡಿ ಸಾಲ ಮತ್ತು ಸಬ್ಸಿಡಿ ಕೋರಿ ಅಂಬೇಡ್ಕರ್ ನಿಗಮಕ್ಕೆ ಅರ್ಜಿ ಹಾಕಿದ್ದರು. ಇವರ ಕೋರಿಕೆಯಂತೆ 3.50 ಲಕ್ಷ ಸಹಾಯಧನ ಸೇರಿದಂತೆ ಒಟ್ಟು 5 ಲಕ್ಷ ಹಣ ಮಂಜೂರಾಗಿತ್ತು.

ಆದರೆ, ಮಂಜೂರಾದ ಸಬ್ಸಿಡಿ ಚೆಕ್ ಹಸ್ತಾಂತರಿಸಲು ಅಕೌಂಟೆಂಟ್ ಅಸಿಸ್ಟೆಂಟ್ ಕಾಂತರಾಜ್ 15,000 ಲಂಚಕ್ಕೆ ಪಟ್ಟು ಹಿಡಿದಿದ್ದರು. ಅಧಿಕಾರಿ ಕಿರುಕುಳದಿಂದ ಬೇಸತ್ತ ಅಂಜನಪ್ಪ ಲೋಕಾಯುಕ್ತ ಪೊಲೀಸರ ಬಾಗಿಲು ತಟ್ಟಿದ್ದರು. ದೂರಿನ ಅನ್ವಯ 2017 ರ ಜುಲೈ 7 ರಂದು ಕಾರ್ಯಾಚರಣೆ ನಡೆಸಿದ ಅಂದಿನ ಲೋಕಾಯುಕ್ತ ಡಿವೈಎಸ್ಪಿ ಎ. ಚಂದ್ರಪ್ಪ ಹಾಗೂ ಸಿಬ್ಬಂದಿ, ಕಾಂತರಾಜ್ ದೂರುದಾರರಿಂದ 10,000 ಹಣ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಹಿಡಿದು ಬಂಧಿಸಿದ್ದರು.

ಸುದೀರ್ಘ ತನಿಖೆ ನಡೆಸಿದ್ದ ಡಿವೈಎಸ್ಪಿ ಚಂದ್ರಪ್ಪ ಅವರು ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ಈ ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ವಕೀಲ ಎಂ.ಡಿ. ಸುಂದರ್ ರಾಜ್ ವಾದ ಮಂಡಿಸಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor