ಶಿವಮೊಗ್ಗ: ಗಸ್ತು ತಿರುಗುತ್ತಿದ್ದಾಗ ಕಣ್ಣಿಗೆ ಬಿತ್ತು ಈ ದೃಶ್ಯ ; ಅಕ್ಕಪಡೆ ಸಿಬ್ಬಂದಿಯಿಂದ ಮಾನವೀಯ ಕಾರ್ಯ!

ಹಂಚಿಕೊಳ್ಳಿ
WhatsApp Facebook X Telegram
ಆಯಾ ತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ 112 ಸಿಬ್ಬಂದಿಗಳು
ಆಯಾ ತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ 112 ಸಿಬ್ಬಂದಿಗಳು

ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ನಗರದಲ್ಲಿ 112 ಪೊಲೀಸ್ ಸಿಬ್ಬಂದಿ ಹಾಗೂ ಅಕ್ಕಪಡೆ ಸಿಬ್ಬಂದಿ ಒಂದಲ್ಲ ಒಂದು ರೀತಿಯ ಮಾನವೀಯ ಕಾರ್ಯಗಳನ್ನು ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಅಪರಿಚಿತ ಮಹಿಳೆಯನ್ನು ರಕ್ಷಿಸುವ ಮೂಲಕ ಅಕ್ಕಪಡೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಶಿವಮೊಗ್ಗ ಅಕ್ಕಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯಾದ ಮಹಿಳಾ ಪೊಲೀಸ್ ಠಾಣೆಯ ಜಯಂತಿ ಎಎಸ್‌ಐ, ವಿನೋಬನಗರ ಠಾಣೆಯ ಮಪಿಸಿ ಕುಮಾರಿ ಮಧುರಾ ಹಾಗೂ ಎಂಎಚ್‌ಜಿ ಸುಪ್ರಿಯಾ ಅವರು ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರಿಗೆ ತಲೆಸುತ್ತು ಬಂದು ಏಕಾಏಕಿ ರಸ್ತೆಯ ಮೇಲೆ ಬಿದ್ದಿರುವುದು ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ಸ್ವಲ್ಪವೂ ತಡಮಾಡದೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ನೋಡಿದಾಗ ಮಹಿಳೆಗೆ ಗಾಯವಾಗಿ ರಕ್ತ ಬರುತ್ತಿರುವುದು ಕಂಡುಬಂದಿದೆ.

ಕೂಡಲೇ ಅಕ್ಕಪಡೆಯ ಅಧಿಕಾರಿಗಳು ಮಹಿಳೆಯನ್ನು ಉಪಚರಿಸಿ, ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ವಿಚಾರ ತಿಳಿಸಿ ಬರಲು ಹೇಳಿದ್ದಾರೆ. ಕುಟುಂಬಸ್ಥರು ಬರುವವರೆಗೂ ಮಹಿಳೆಯ ಜೊತೆಯಲ್ಲೇ ಇದ್ದು, ನಂತರ ಅವರೊಂದಿಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಅಕ್ಕಪಡೆ ಸಿಬ್ಬಂದಿಯ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor