ಶಿವಮೊಗ್ಗ : ಫಾರ್ಚುನರ್​ ಹಾಗೂ ಹೈಕ್ರಾಸ್​​ಗೆ ಟಕ್ಕರ್​​ ಕೊಡೋಕೆ ಬರ್ತಿದೆ ಕಿಯಾ ಸೊರೆಂಟೊ ಕಾರು, ಏನಿದರ ವಿಶೇಷ, ಲಾಂಚ್ ಯಾವಾಗ.

ಹಂಚಿಕೊಳ್ಳಿ
WhatsApp Facebook X Telegram
Kia Sorento Launching in Shivamogga ಶಿವಮೊಗ್ಗದಲ್ಲಿ ನಡೆದ ಪತ್ರಿಕಾ ಘೋಷ್ಟಿ
Kia Sorento Launching in Shivamogga ಶಿವಮೊಗ್ಗದಲ್ಲಿ ನಡೆದ ಪತ್ರಿಕಾ ಘೋಷ್ಟಿ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ :  ಶಿವಮೊಗ್ಗದ ಬೈಪಾಸ್‌ನಲ್ಲಿರುವ ಜಾನ್ಸಿ ಕಿಯಾ ಶೋರೂಮ್‌ನಲ್ಲಿ ಸೆಪ್ಟೆಂಬರ್ 08 ರಂದು ಸಂಜೆ 6 ಗಂಟೆಗೆ ನೂತನ ಕಿಯಾ ಸೊರೆಂಟೊ ಕಾರು ಬಿಡುಗಡೆಯಾಗಲಿದೆ ಎಂದು ಸಂಸ್ಥೆಯ ಸಿಎಕ್ಸ್ ಮ್ಯಾನೇಜರ್ ಎಸ್.ಕೆ. ದೀಪಕ್ ತಿಳಿಸಿದ್ದಾರೆ.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಎಂಡಿ ಶ್ರೀ ರಾಘವೇಂದ್ರ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಸುಭಾಷ್ ಬಿ.ಆರ್. ಅವರ ನಾಯಕತ್ವದಲ್ಲಿ ಜಾನ್ಸಿ ಕಿಯಾ ನಿರಂತರವಾಗಿ ಬೆಳೆಯುತ್ತಿದೆ ಎಂದರು. ಗ್ರಾಹಕರಿಗೆ ಜಾಗತಿಕ ಮಟ್ಟದ ಚಾಲನಾ ಅನುಭವ ನೀಡಲು ಕಿಯಾ ಸೊರೆಂಟೊ ಬಿಡುಗಡೆ ಪ್ರಮುಖ ಮೈಲಿಗಲ್ಲಾಗಿದೆ. 2020 ರಲ್ಲಿ ಶಿವಮೊಗ್ಗದಲ್ಲಿ ಕಿಯಾ ಸೆಲ್ಟೋಸ್ ಮೂಲಕ ಶೋರೂಮ್ ಆರಂಭಿಸಿದ ನಂತರ, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ತಮ್ಮ 5 ಶಾಖೆಗಳಿಂದ ಇದುವರೆಗೆ ಸುಮಾರು 3,950 ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದರು.

ಈ ಹೊಸ ಕಾರು 6 ಹಾಗೂ 7 ಸೀಟರ್ ಮಾದರಿಗಳಲ್ಲಿ ಲಭ್ಯವಿದ್ದು, ಎಕ್ಸ್-ಶೋರೂಮ್ ಬೆಲೆ 27 ಲಕ್ಷದಿಂದ ಆರಂಭವಾಗಿ ಟಾಪ್ ಮಾಡೆಲ್‌ಗೆ 40 ಲಕ್ಷದವರೆಗೆ ಇರಲಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲ್ಲಾ ವೇರಿಯೆಂಟ್‌ಗಳಲ್ಲಿ 10 ಏರ್‌ಬ್ಯಾಗ್‌ಗಳು ಮತ್ತು 5-ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿದೆ. ಅತ್ಯಾಕರ್ಷಕ ಇಂಟೀರಿಯರ್ ವಿನ್ಯಾಸದೊಂದಿಗೆ ಬರುವ ಈ ಕಾರು 2151 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್‌ಗೆ ಸುಮಾರು 18 ರಿಂದ 20 ಕಿ.ಮೀ ಮೈಲೇಜ್ ನೀಡುತ್ತದೆ. ಪ್ರಸ್ತುತ ಫಾರ್ಚುನರ್​ ಹಾಗೂ ಹೈಕ್ರಾಸ್​ ಕಾರುಗಳಿಗೆ ಈ ಕಾರು ಕಾಂಪಿಟೇಷನ್​ ನೀಡಲಿದೆ ಎಂದರು.

ಸೆಪ್ಟೆಂಬರ್ 08 ರಂದು ನಡೆಯಲಿರುವ ಪ್ರಿ-ಲಾಂಚ್ ಕಾರ್ಯಕ್ರಮದಲ್ಲಿ ಉದ್ಯಮಿ ಕಿಮ್ಮನೆ ಜಯರಾಂ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಿಯಾ ಇಂಡಿಯಾದ ಅಧಿಕಾರಿಗಳಾದ ಸಂತೋಷ್ ಕುಮಾರ್ ಬಿ. ಹಾಗೂ ಗೌರವ್ ಅವರು ಸಹ ಉಪಸ್ಥಿತರಿರಲಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor