ಶಿವಮೊಗ್ಗ ಜಿಲ್ಲೆಯ 52 ಶಿಕ್ಷಕರಿಗೆ ಪ್ರಶಸ್ತಿ ; 21 ಮಂದಿಗೆ ಜಿಲ್ಲಾ ಅತ್ಯುತ್ತಮ, 31 ಮಂದಿಗೆ ವಿಶೇಷ ಉತ್ತಮ ಶಿಕ್ಷಕ ಗೌರವ

ಹಂಚಿಕೊಳ್ಳಿ
WhatsApp Facebook X Telegram
Shivamogga Teachers Award 2026 AI image
Shivamogga Teachers Award 2026 AI image

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / 2026-27ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ ಜಿಲ್ಲಾ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ 21 ಶಿಕ್ಷಕರು ಹಾಗೂ ವಿಶೇಷ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ 31 ಶಿಕ್ಷಕರು (Shivamogga Teachers Award 2026) ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸೆಪ್ಟೆಂಬರ್ 4ರಂದು ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ಪೂರ್ತಿ ವಿವರವನ್ನು ಗಮನಿಸುವುದಾದರೆ, ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ತಲಾ 7ರಂತೆ ಒಟ್ಟು 21 ಶಿಕ್ಷಕರನ್ನು ಜಿಲ್ಲಾ ಅತ್ಯುತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ವಿವಿಧ ವಿಭಾಗಗಳಿಂದ ಒಟ್ಟು 31 ಶಿಕ್ಷಕರನ್ನು ವಿಶೇಷ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಇಲಾಖೆಯ ದಾಖಲೆ ತಿಳಿಸಿದೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: ಕಿರಿಯ ಪ್ರಾಥಮಿಕ ಶಾಲಾ ವಿಭಾಗ

ಸಾಗರ ತಾಲೂಕಿನ ಬನಶಂಕರಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸೋಮಪ್ಪ ಹೆಚ್, ಹೊಸನಗರ ತಾಲೂಕಿನ ಶರವಣ ಎಸ್, ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸತೋಟದ ಅಣ್ಣಪ್ಪ ಡಿ. ಹೆಚ್, ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಉಮಾದೇವಿ ಎಲ್, ಸೊರಬ ತಾಲೂಕಿನ ಚನ್ನಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಾಲೇಶಪ್ಪ ಎನ್.ಸಿ, ಶಿಕಾರಿಪುರ ತಾಲೂಕಿನ ಬೇಗೂರು ವಡ್ಡಿಗೇರ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಸವರಾಜಪ್ಪ ಜಿ ಹಾಗೂ ಶಿವಮೊಗ್ಗದ ತುಂಗಾನಗರದ ಶಾಲೆಯ ನಾಜಿಯಾ ಕೌಸರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ

ಸಾಗರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಲಮಕ್ಕಿಯ ಜಯಮ್ಮ ಎಂ.ಬಿ, ಹೊಸನಗರ ತಾಲೂಕಿನ ಪಿಎಂಶ್ರೀ ಕೆಪಿಎಸ್ ಮೇಲಿನ ಬೆಸಿಗೆಯ ಗುರುಮೂರ್ತಿ, ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಗುಂಬೆಯ ಉಮಾ ಕುಲಕರ್ಣಿ, ಭದ್ರಾವತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಲಕ್ಷ್ಮೀಶ ಎಂ.ಟಿ, ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಉಮಾದೇವಿ ಬಿ.ಎಂ, ಶಿಕಾರಿಪುರದ ಶ್ರೀ ಸಿದ್ದಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಪೇಟೆಯ ಸುಧಾ ಎನ್.ವಿ ಹಾಗೂ ಸೊರಬ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಿಳಿವಾಲದ ಜಗದೀಶ ಜಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗ

ಸಾಗರದ ಹೆಚ್. ಶಿವಲಿಂಗಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಎಂ, ಹೊಸನಗರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೆದ್ದಾರಿಪುರದ ಸುರೇಶಪ್ಪ ಟಿ. ಹೆಚ್, ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಮೇಲಿಗೆಯ ಹೇಮರಾಜು ಎಂ.ಎಸ್, ಭದ್ರಾವತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಅರಳಿಹಳ್ಳಿಯ ರಂಗರಾಜು ಡಿ, ಸೊರಬ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಅಂಕರವಳ್ಳಿ, ಗುಂಜನೂರು ಕ್ರಾಸ್‌ನ ರಾಜಶೇಖರ್ ಪಿ.ಬಿ, ಶಿಕಾರಿಪುರ ತಾಲೂಕಿನ ಇಂಡಿಯನ್ ಪ್ರೌಢಶಾಲೆಯ ರಾಜಪ್ಪ ಎಸ್ ಹಾಗೂ ಶಿವಮೊಗ್ಗದ ವಿನೋಬನಗರ ಸರ್ಕಾರಿ ಪ್ರೌಢಶಾಲೆಯ ರಮೇಶ್ ಎನ್.ಎಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

31 ಮಂದಿಗೆ ವಿಶೇಷ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ

ಇದರೊಂದಿಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲೆಗಳ 31 ಶಿಕ್ಷಕರನ್ನು ವಿಶೇಷ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 6, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 19 ಮತ್ತು ಪ್ರೌಢಶಾಲಾ ವಿಭಾಗದಿಂದ 6 ಶಿಕ್ಷಕರು ಈ ಪಟ್ಟಿಯಲ್ಲಿದ್ದಾರೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಾಗರ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಲ್ಲತ್ತಿಯ ಜ್ಯೋತಿ ಎಂ. ಹೆಚ್, ಎಂ.ಎಲ್. ಹಳ್ಳಿಯ ಸಣ್ಣಪ್ಪ ಹೆಚ್.ಬಿ, ಹಿರಳೆ ಮದೂರಿನ ಶಾರದ, ಹೊಸನಗರ ತಾಲೂಕಿನ ಬುಲ್ಡೋಜರ್ ಗುಡ್ಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿರಂಜೀವಿ ಎಲ್, ತೀರ್ಥಹಳ್ಳಿ ತಾಲೂಕಿನ ಕುಂದಿಹಕ್ಕಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೀಣ ಬಿ ಹಾಗೂ ಶಿಕಾರಿಪುರ ತಾಲೂಕಿನ ಬೇಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಾಜು ಬಿ.ಎಂ ಆಯ್ಕೆಯಾಗಿದ್ದಾರೆ.

ವಿಶೇಷ ಪ್ರಶಸ್ತಿ: ಹಿರಿಯ ಪ್ರಾಥಮಿಕ ಶಾಲಾ ವಿಭಾಗ

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಾಗರ ತಾಲೂಕಿನ ರಾಮಚಂದ್ರ ಟಿ, ಸಣ್ಣಪ್ಪ ಹೆಚ್.ಬಿ ಹಾಗೂ ಟಿಜಿಟಿ ಶಿಕ್ಷಕ ವೆಂಕಟೇಶ್ ಆರ್; ಹೊಸನಗರ ತಾಲೂಕಿನ ಮಂಜುನಾಥ್ ಹೆಚ್.ಡಿ, ಮಂಗಳ ಎಂ.ಆರ್, ಸುಮಾ ಎಸ್; ತೀರ್ಥಹಳ್ಳಿ ತಾಲೂಕಿನ ವೀಣಾ ಎ.ಸಿ; ಭದ್ರಾವತಿ ತಾಲೂಕಿನ ತಿಪ್ಪೇಸ್ವಾಮಿ ಈ.ಎನ್, ಮಾಯಮ್ಮ, ಸುಮತಿ; ಶಿವಮೊಗ್ಗ ತಾಲೂಕಿನ ಫಾತಿಮುನ್ನಿಸಾ ಹೆಚ್.ಎಂ, ಪದವೀಧರ ಮುಖ್ಯ ಶಿಕ್ಷಕಿ ವಿಜಯ ಆರ್, ರತ್ನ ಜಿ.ಹೆಚ್; ಶಿಕಾರಿಪುರ ತಾಲೂಕಿನ ಕುಮಾರ್ ನಾಯ್ಕ, ಮೃತ್ಯುಂಜಯ್ ಮರಡ್, ಕವಿತಾ ಕೆ.ಪಿ, ಯಶೋದಮ್ಮ ಪಿ; ಸೊರಬ ತಾಲೂಕಿನ ಜಗದೀಶ ಕೆ.ಎಸ್ ವಿಶೇಷ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದ ವಿಶೇಷ ಪ್ರಶಸ್ತಿ

ವಿಶೇಷ ಉತ್ತಮ ಶಿಕ್ಷಕ ಪ್ರಶಸ್ತಿಯ ಪ್ರೌಢಶಾಲಾ ವಿಭಾಗದಲ್ಲಿ ಸಾಗರ ತಾಲೂಕಿನ ಕೆಪಿಎಸ್ ಆನಂದಪುರದ ಉಪಪ್ರಾಂಶುಪಾಲ ಕೃಷ್ಣಪ್ಪ ಹೆಚ್.ಎಂ, ಹೊಸನಗರ ತಾಲೂಕಿನ ನಗರ ಪ್ರೌಢಶಾಲೆಯ ಜಗನ್ನಾಥ್ ಎಂ.ವಿ, ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹುಂಚದಕಟ್ಟೆಯ ಸೋಮಶೇಖರ್ ಎಂ.ಆರ್, ಭದ್ರಾವತಿ ತಾಲೂಕಿನ ಮಂಜುನಾಥ್ ಟೇಲರ್, ಶಿಕಾರಿಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಚಂದ್ರನಾಯ್ಕ ಜಿ ಹಾಗೂ ಶ್ರೀ ಗುರುರುದ್ರಮುನಿ ಶಿವಯೋಗಿ ಪ್ರೌಢಶಾಲೆಯ ಪ್ರೇಮಕುಮಾರ ಸ್ವಾಮಿ ಎ.ಎಸ್ ಆಯ್ಕೆಯಾಗಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor