ಶರಾವತಿ ಪಂಪ್ ಸ್ಟೋರೇಜ್ ₹380 ಕೋಟಿ ಪಾವತಿ ಆರೋಪದಿಂದ ಸಾಗರ ಆಸ್ಪತ್ರೆ ಮೇಲ್ದರ್ಜೆ ಪ್ರಸ್ತಾವದವರೆಗೆ, ಹಲವಾರು ಸುದ್ದಿಗಳಿವೆ! ಮಲೆನಾಡು ಟುಡೆ ಇ–ಪೇಪರ್ ಓದಿ

ಹಂಚಿಕೊಳ್ಳಿ
WhatsApp Facebook X Telegram
malenadu today epaper
malenadu today epaper

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೆಪ್ಟೆಂಬರ್ 4, 2026ರ ‘ಮಲೆನಾಡು ಟುಡೆ’ ಕನ್ನಡ ದಿನಪತ್ರಿಕೆಯನ್ನು (Kannada Newspaper Online) ಇಲ್ಲಿ ಅಪ್ಲೋಡ್ ಮಾಡಲಾಗಿದೆ. ಶಿವಮೊಗ್ಗ ಹಾಗೂ ಮಲೆನಾಡಿನ ಪ್ರಮುಖ ರಾಜಕೀಯ, ಪರಿಸರ, ಸಾಮಾಜಿಕ, ಶಿಕ್ಷಣ, ಆರೋಗ್ಯ, ಕ್ರೀಡೆ ಮತ್ತು ಸ್ಥಳೀಯ ಸುದ್ದಿಗಳನ್ನು ಒಳಗೊಂಡ 4 ಪುಟಗಳ ಇಂದಿನ ಸಂಚಿಕೆಯನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿಯೇ ಸಂಪೂರ್ಣವಾಗಿ ಓದಬಹುದು.

ಇಂದಿನ ಪತ್ರಿಕೆಯ ಪ್ರಮುಖ ಸುದ್ದಿಯಾಗಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಯಾವುದೇ ಕಾಮಗಾರಿ ನಡೆಯದಿದ್ದರೂ ಮೇಘಾ ಎಂಜಿನಿಯರಿಂಗ್‌ಗೆ ₹380 ಕೋಟಿಗೂ ಅಧಿಕ ಹಣ ಪಾವತಿಸಲಾಗಿದೆ. ಈ ಹಣ ಪಾವತಿಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಪರಿಸರವಾದಿ ಕೆ.ಪಿ. ಶ್ರೀಪತಿ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ನೀಡಿದ ಧರ್ಮ ಸಂಸ್ಥಾಪನೆಯ ಸಂದೇಶ, ಸೆಪ್ಟೆಂಬರ್ 5 ಮತ್ತು 6ರಂದು ಗೋಪಾಲದ ಶ್ರೀ ಯೋಗಿ ನಾರಾಯಣ ಬಲಿಜ ಸಮುದಾಯ ಭವನದಲ್ಲಿ ನಡೆಯಲಿರುವ ‘ಶ್ರಾವಣ ಸಂಭ್ರಮ–2026’ ಮೆಗಾ ಎಕ್ಸ್‌ಪೋ, ಮಕ್ಕಳ ಮೊಬೈಲ್ ಚಟದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ‘ಅಡಿಕ್ಷನ್’ ಕನ್ನಡ ಮಕ್ಕಳ ಚಲನಚಿತ್ರದ ಶಾಲಾ ಪ್ರದರ್ಶನ ಕುರಿತ ಸುದ್ದಿಗಳು ಇವತ್ತಿನ ಪ್ರಮುಖ ಹೈಲೆಟ್ಸ್​!

ಇಂದಿನ ಸಂಚಿಕೆಯಲ್ಲಿ ‘ಓಡುತ್ತಿರುವ ನಗರ; ನಿಂತುಹೋದ ನೆಮ್ಮದಿ!’ ಎಂಬ ವಿಶೇಷ ಲೇಖನವೂ ಇದೆ. ವೇಗವಾಗಿ ಬದಲಾಗುತ್ತಿರುವ ನಗರ ಜೀವನ, ಸಂಚಾರ, ತಂತ್ರಜ್ಞಾನ, ಕುಟುಂಬ ಸಂಬಂಧ, ಮಕ್ಕಳ ಮೇಲಿನ ಒತ್ತಡ ಮತ್ತು ಮನುಷ್ಯನ ನೆಮ್ಮದಿಯ ಕುರಿತು ಚಿಂತನೆಗೆ ಹಚ್ಚುವ ಈ ಬರಹ ಇ–ಪೇಪರ್‌ನ ಪ್ರಮುಖ ಓದಾಗಿದೆ.

ಸಾಗರ ಭಾಗದ ಸುದ್ದಿಗಳಲ್ಲಿ ವಿರೂಪಾಕ್ಷ ಕೆರೆಯ ಮೂಲ ಸ್ವರೂಪ ವಿರೂಪಗೊಳಿಸಿರುವ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ. ಪ್ರತಿಭಾ ಸ್ಥಳ ಪರಿಶೀಲನೆ, ಭೀಮನಕೋಣೆ ಸಹಕಾರಿ ಬ್ಯಾಂಕ್‌ನ ಶೇ.95.63 ಸಾಲ ವಸೂಲಾತಿ, ಗಾಂಧಿನಗರ ಯುವಜನ ಸಂಘದ ನೂತನ ಪದಾಧಿಕಾರಿಗಳ ನೇಮಕ, ಹೆಗ್ಗೋಡಿನ ಕಾಲೇಜುಗಳಲ್ಲಿ ರಕ್ಷಾಬಂಧನ ಕಾರ್ಯಕ್ರಮ ಸೇರಿದಂತೆ ಹಲವು ಸ್ಥಳೀಯ ಬೆಳವಣಿಗೆಗಳಿಗೆ ಆದ್ಯತೆ ನೀಡಲಾಗಿದೆ.

ಇದೇ ಸಂಚಿಕೆಯಲ್ಲಿ ನೋಟಿಸ್ ನೀಡದೆ ಮನೆ ತೆರವುಗೊಳಿಸಿದ ಪ್ರಕರಣದಲ್ಲಿ ₹1.43 ಲಕ್ಷ ಪರಿಹಾರಕ್ಕೆ ನ್ಯಾಯಾಲಯ ಆದೇಶ, ಸೋಗಾನೆ ಶಾಲೆಯ ವಿದ್ಯಾರ್ಥಿನಿಯರ ಖೋ–ಖೋ ಸಾಧನೆ, ದೇಶಭಕ್ತಿ ಗೀತೆಗಳ ಮೂಲಕ ದೇಶಪ್ರೇಮದ ಭಾವನೆ ಗಟ್ಟಿಯಾಗುತ್ತದೆ ಎಂಬ ಸಂದೇಶ ಹಾಗೂ ಡಾ. ಶರತ್ ಸಂಗನಗೌಡರ್ ಅವರ ಪ್ರಬಂಧಕ್ಕೆ ದೊರೆತ ಪ್ರಶಸ್ತಿ ಸೇರಿದಂತೆ ಹಲವು ಸುದ್ದಿಗಳು ಪ್ರಕಟವಾಗಿವೆ.

ಇಂದಿನ ಮಲೆನಾಡು ಟುಡೆ ಇ–ಪೇಪರ್ ಅನ್ನು ಕೆಳಗಿನ ಲಿಂಕ್ ಮೂಲಕ ಸಂಪೂರ್ಣವಾಗಿ ಓದಿ.

ಇ–ಪೇಪರ್ ಓದಲು:
[GOOGLE DRIVE VIEW LINK]

ಪೂರ್ಣ ಪರದೆಯಲ್ಲಿ ಓದಲು:

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor