ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಮತ್ತೂರು ರಸ್ತೆಯಲ್ಲಿ (Mattur Road in Shivamogga) ಭತ್ತ ಸಾಗಿಸ್ತಿದ್ದ ಕ್ಯಾಂಟರ್ ಪಲ್ಟಿಯಾಗಿದೆ. ಚಾಲಕನ ಕಂಟ್ರೋಲ್ ತಪ್ಪಿ ಕರೆಂಟ್ ಕಂಬಕ್ಕೆ ಗುದ್ದಿದ ಬಳಿಕ ವೆಹಿಕಲ್ ಪಲ್ಟಿಯಾಗಿದೆ. ಮತ್ತೂರು ರಸ್ತೆಯ ಇಂದ್ರಾನಗರದ ಮಳಲಿಕೊಪ್ಪ ಹತ್ರ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಕ್ಯಾಂಟರ್ ಮಗುಚಿ ಬಿದ್ದಿದ್ದರಿಂದ ಭತ್ತದ ಚೀಲವೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಇನ್ನೂ ಕ್ಯಾಂಟರ್‌ನ ಚಾಲಕ ಹಾಗೂ ಕ್ಲೀನರ್ ಇಬ್ಬರೂ ವಾಹನದೊಳಗೆ ಸಿಲುಕಿಕೊಂಡಿದ್ದರು. ಸ್ಥಳೀಯರು ದೌಡಾಯಿಸಿ ಇಬ್ಬರನ್ನ ರೆಸ್ಕ್ಯೂ ಮಾಡಿದ್ರು. ಸದ್ಯ ಇಬ್ಬರಿಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ಬಂದ ತುಂಗಾನಗರ ಪೊಲೀಸರು ಮಹಜರ್ ನಡೆಸಿ, ವೆಹಿಕಲ್ ತೆರವು ಗೊಳಿಸಿದ್ದಾರೆ. ಈ ಸಂಬಂಧ ಕೇಸ್ ಸಹ ದಾಖಲಿಸಿದ್ದಾರೆ.
ಮನೆ ಬೀಗ ಮುರಿದು ಬಂಗಾರ, ಬೆಳ್ಳಿ ಕಳವು
ಆನಂದಪುರಂ: ಯಡೇಹಳ್ಳಿ ಗ್ರಾಮದ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದ ರಥಬೀದಿ ನಿವಾಸಿ ಪ್ರದೀಶ್ ಎಂಬುವರ ಮನೆಯ ಬೀಗ ಮುರಿದು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಯನ್ನು ಮಂಗಳವಾರ ಮಧ್ಯರಾತ್ರಿ ಕಳವು ಮಾಡಲಾಗಿದೆ. ಮನೆಯ ಕಿಟಕಿಯ ಮೂಲಕ ಮುಂದಿನ ಬಾಗಿಲ ಚಿಲಕ ತೆಗೆದು ಮನೆಯೊಳಗೆ ಕಳ್ಳರು ಪ್ರವೇಶಿಸಿದ್ದು, ಗಾಡ್ರೆಜ್ ಬೀರುವಿನಲ್ಲಿದ್ದ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 32 ಗ್ರಾಂ ತೂಕದ ಐದು ಚಿನ್ನದ ಕಿವಿಯೋಲೆ, 3 ಗ್ರಾಂ ತೂಕದ ಒಂದು ಬ್ರಾಸ್ ಲೈಟ್, 30 ಗ್ರಾಂ ಒಂದು ಜತೆ ಬೆಳ್ಳಿ ಕಾಲು ಚೈನ್, 10 ಗ್ರಾಂ ತೂಕದ ಎರಡು ಜತೆ ಬೆಳ್ಳಿ ಕಾಲುಂಗುರ ಸೇರಿ ಒಟ್ಟು 80 ಗ್ರಾಂ. ತೂಕದ ಚಿನ್ನದ ಆಭರಣ ಹಾಗೂ 40 ಗ್ರಾಂ. ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
