ರಾಜಕೀಯದಲ್ಲಿ ಬೆಂಬಲಿಗರಿಗೆ ಸಿಗುವ ಸ್ಥಾನಮಾನ ಕಾರ್ಯಕರ್ತರಿಗೂ ಸಿಗಲಿ: ಆಯನೂರು ಮಂಜುನಾಥ್​​​ ಹೀಗಂದಿದ್ಯಾಕೆ

ಹಂಚಿಕೊಳ್ಳಿ
WhatsApp Facebook X Telegram
Ayanur Demands SUDA Post for Minorities ಆಯನೂರು ಮಂಜುನಾಥ್_
Ayanur Demands SUDA Post for Minorities ಆಯನೂರು ಮಂಜುನಾಥ್_

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜಕೀಯದಲ್ಲಿ ವ್ಯಕ್ತಿಗಳ ಬೆಂಬಲಿಗರಿಗೆ ಹೆಚ್ಚಿನ ಸ್ಥಾನಮಾನ ದೊರೆಯುತ್ತದೆಯೇ ಹೊರತು ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ. ಆ ಸಿಟ್ಟಿನಲ್ಲಿ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ, ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ; ನಮಗೂ ಉನ್ನತ ಸ್ಥಾನಮಾನ ಬೇಕು, ಎಂಬ ಉದ್ದೇಶದಿಂದ ಅಲ್ಪಸಂಖ್ಯಾತರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಅಲ್ಪಸಂಖ್ಯಾತರನ್ನು ಬೆಂಬಲಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯಗಳು ನೂರಕ್ಕೆ ನೂರರಷ್ಟು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾ ಬಂದಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅವರನ್ನು ಗುರುತಿಸಿ, ಅವರಿಗೆ ಯಾವುದಾದರೂ ನಿಗಮ ಮಂಡಳಿಯ ಸ್ಥಾನ ಸಿಗುವಂತೆ ಮಾಡಲು ಅವರು ಮಾಡುತ್ತಿರುವ ಪ್ರಯತ್ನಕ್ಕೆ ನನ್ನ ಬೆಂಬಲವಿದೆ, ಎಂದರು.

ಶಿವಮೊಗ್ಗದಲ್ಲಿ ಸುಮಾರು 65 ರಿಂದ 70 ಸಾವಿರ ಮುಸ್ಲಿಮರು ಹಾಗೂ 20 ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ ಮತದಾರರಿದ್ದು, ಅವರು ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದಾರೆ. ಆದರೆ ಅವರನ್ನು ಚುನಾವಣೆಯ ಸಮಯದಲ್ಲಿ ಮಾತ್ರ ಸರ್ಕಾರ ಬಳಸಿಕೊಳ್ಳುತ್ತದೆ; ಉಳಿದ ಸಮಯದಲ್ಲಿ ನಿರ್ಲಕ್ಷಿಸುತ್ತಿದೆ ಎಂಬುದು ಅವರ ಅಭಿಪ್ರಾಯ. ಅವರ ಈ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಚುನಾವಣೆಯ ಸಂದರ್ಭದಲ್ಲಿ ನಮ್ಮ ನಾಯಕರು ಅಲ್ಪಸಂಖ್ಯಾತರಿಗೆ ಯಾವುದಾದರೂ ನಿಗಮ ಮಂಡಳಿಯ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಸರ್ಕಾರ ಬಂದು 3.5 ವರ್ಷಗಳು ಕಳೆದರೂ ಅದು ಈಡೇರಲಿಲ್ಲ. ಜಿಲ್ಲೆಯಲ್ಲಿ ಸೂಡ (SUDA), ಕಾಡ (CADA) ಹಾಗೂ ಎಂಎಬಿಡಿ (MABD) ನಿಗಮ ಮಂಡಳಿಗಳಿದ್ದು, ಅವುಗಳಲ್ಲಿ ಸೂಡ ಅಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡುವುದು ಹೆಚ್ಚು ಸೂಕ್ತ ಎಂದು ನನಗನಿಸುತ್ತದೆ. ಏಕೆಂದರೆ ಭದ್ರಾವತಿ ಹಾಗೂ ಶಿವಮೊಗ್ಗ ಸೇರಿ ಸುಮಾರು 2.5 ಲಕ್ಷ ಅಲ್ಪಸಂಖ್ಯಾತ ಮತದಾರರಿದ್ದಾರೆ. ಆದ್ದರಿಂದ ಅವರಿಗೆ ‘ಸೂಡ’ ಕೊಟ್ಟರೆ ಸರಿಹೊಂದುತ್ತದೆ. ಸರ್ಕಾರ ಎಲ್ಲ ಆಜಾತಿ ಸುದಾಯಗಳನ್ನು ಒಗ್ಗೂಡಿಸಿಕೊಂಡು ಯಾರು ಅವರಿಗೆ ಹೆಚ್ಚು ಬೆಂಬಲ ನೀಡುತ್ತಾರೋ ಅವರಿಗೆ ಪ್ರಾತಿನಿಧ್ಯ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಕಷ್ಟವಾಗುತ್ತದೆ.  ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ನಮ್ಮ ಸಚಿವರಾದ ಮಧು ಬಂಗಾರಪ್ಪ ಅವರೊಡನೆ ನಾನು ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡುತ್ತೇನೆ, ಎಂದು ಭರವಸೆ ನೀಡಿದರು

ಇನ್ನು ಕ್ರಿಶ್ಚಿಯನ್ ಸಮುದಾಯದ ರಾಕೇಶ್ ಫರ್ನಾಂಡೀಸ್ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷಕ್ಕಾಗಿ ಸುಮಾರು 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೆ ಯಾವುದೇ ಮಾನ್ಯತೆ ದೊರೆತಿಲ್ಲ. ಚುನಾವಣೆ ಬಂದಾಗ ಮಾತ್ರ ನಾವು ಪಕ್ಷಕ್ಕೆ ನೆನಪಾಗುತ್ತೇವೆ. ಜಿಲ್ಲೆಯ ನಿಗಮ ಮಂಡಳಿಗಳಲ್ಲಿ ಯಾವುದಾದರೂ ಒಂದಕ್ಕಾದರೂ ನಮ್ಮವರನ್ನು ಆಯ್ಕೆ ಮಾಡಬೇಕು, ಎಂದರು.

ಇನ್ನು ಮುಸ್ಲಿಂ ಸಮುದಾಯದ ರಿಯಾಜ್ ಅಹಮದ್ ಮಾತನಾಡಿ, ಎಲ್ಲೋ ಒಂದು ಕಡೆ ನಮ್ಮ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದಂತೆ ಭಾಸವಾಗುತ್ತದೆ. ಏಕೆಂದರೆ ಚುನಾವಣೆಯ ಸಂದರ್ಭದಲ್ಲಿ ನಾವು ನೂರಕ್ಕೆ ನೂರರಷ್ಟು ಶ್ರಮಹಾಕಿ ಕೆಲಸ ಮಾಡುತ್ತೇವೆ. ಆದರೆ ಸರ್ಕಾರ ನಂತರದ ದಿನಗಳಲ್ಲಿ ನಮ್ಮನ್ನು ಗುರುತಿಸುವ ಕೆಲಸ ಮಾಡುವುದಿಲ್ಲ. ಇನ್ನಾದರೂ ನಮಗೆ ಯಾವುದಾದರೂ ಉತ್ತಮ ಸ್ಥಾನ ನೀಡಿ ಗುರುತಿಸುವಂತಾಗಲಿ, ಎಂದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor