ನನ್ನ ಸಾವಿಗೆ ಕಾರಣನಾದವನಿಗೆ ಶಿಕ್ಷೆಯಾಗಬೇಕು ; ಸಾಗರ ವಾಣಿಶ್ರೀಯ ಕೊನೆಮಾತುಗಳಲ್ಲಿದೆ ಈ ಸತ್ಯ

ಹಂಚಿಕೊಳ್ಳಿ
WhatsApp Facebook X Telegram
ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಆರೋಪ ದಾಖಲಿಸಿರುವ ವಾಣಿಶ್ರೀ ಅವರದೆನ್ನಲಾದ ಡೆತ್‌ನೋಟ್

ಮಲೆನಾಡು ಟುಡೆ ಸುದ್ದಿ / ಸಾಗರ / ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ರೂಮಿಗೆ ಬಾ ಎಂದು ಪೀಡಿಸುತ್ತಿದ್ದ. ನನ್ನ ಸಾವಿಗೆ ಕಾರಣನಾದವನಿಗೆ ಕಠಿಣ ಶಿಕ್ಷೆಯಾಗಬೇಕು..ಬೆಂಗಳೂರಿನ ಅಗರ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿಶ್ರೀ (22) (vanishree) ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ದಾಖಲಾಗಿರುವ ವಾಣಿಶ್ರಿಯ ಕೊನೆಯ ಮಾತಿದು.

ಹೆಣ್ಣು ಹೆತ್ತ ಪೋಷಕರು ತಮ್ಮ ಮನೆಗೆ ಅವಳೇ ಶ್ರೀಲಕ್ಷ್ಮೀ ವರಮಹಾಲಕ್ಷ್ಮೀ ಎಂದುಕೊಂಡೇ ಪೋಶಿಸುತ್ತಿರುತ್ತಾರೆ. ಅವಳ ಮೇಲೆಯೇ ಲಕ್ಷ ಸಾವಿರ ಕನಸು ಕಟ್ಟಿರುತ್ತಾರೆ. ಆದರೆ ಯಾವುದೋ ಕೆಲಸಕ್ಕೆ ಬಾರದವ ಅಂತಹ ವರಮಹಾಲಕ್ಷ್ಮೀಯನ್ನ ಹೆಣವಾಗಿಸುತ್ತಾನೆ ಎಂದರೆ ಅದು ಅಕ್ಷಮ್ಯವೇ ಸರಿ. ಯಾರಿಗಾದರೂ ಒಂದು ಹಂತದವರೆಗೂ ಕೇಳಬೇಕು ಬೇಡಬೇಕು! ಅದರಾಚೆಗೆ ಹಿಂಸಿಸಬಾರದು! ಆದರೆ ಇಲ್ಲಿ ಆ ಹುಡುಗ ಆಕೆಯನ್ನ ಅದೆಷ್ಟರಮಟ್ಟಿಗೆ ಹಿಂಸಿಸಿದ್ದಾನೆ ಎಂಬುದು ಆತನಿಗೂ ಆಕೆಯ ಸಾವಿನ ಬಳಿಕವೇ ರಿಯಲೈಸ್ ಆಗಿದೆ ಎನಿಸುತ್ತಿದೆ.

ಪ್ರೀತಿಸು ಎಂದು ಕಾಡುವುದು ಬೇಡುವುದು ಲಾಗಾಯ್ತಿಗೆ ಸೇರಿ ಬಹಳ ದಿನವಾಯ್ತು! ಈಗ ಪ್ರೀತಿಗೆ ಸ್ವಚ್ಚಂದತೆ ಬೇಕಿಲ್ಲ ! ಜಾಗವಷ್ಟೆ ಬೇಕಿರದು. ಇಲ್ಲಿಯು ಆ ಹುಡುಗ ಮನದ ನಗುವಿನ್ನೂ ಹದ ಹಿಡಿಯುತ್ತಿದ್ದ ಆ ಹುಡುಗಿಯನ್ನ ತನ್ನ ರೂಮಿಗೆ ಬಾ ಬಾ ಅಂತಾ ಪೀಡಿಸುತ್ತಿದ್ದ. ಅದನ್ನ ಪ್ರೀತಿ ಎನ್ನಬಹುದಾ? ಗೊತ್ತಿಲ್ಲ..

ಆದರೆ, ಆ ಹುಡುಗಿ ತನ್ನ ಹೆತ್ತವರ ಮುಖ ನೋಡಿತು, ಅವರ ಗೌರವಕ್ಕೆ ತನ್ನಿಂದ ತೊಂದರೆ ಆಗುತ್ತೆ ಎಂದುಕೊಂಡಿತು, ಹಾಗಾಗಬಾರದು ಎಂದುಕೊಂಡು ಆತನ ಕಿರುಕುಳವೂ ಸಹಿಸಿಕೊಳ್ಳಲಾಗದೆಂದು ಆತ್ಮಹತ್ಯೆ ಮಾಡಿಕೊಂಡಿತು. ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ವಾಣಿಶ್ರೀ ಈಗ ನೆನಪಷ್ಟೆ.

ಬೆಂಗಳೂರಲ್ಲಿ ಚಿನ್ನದಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆಗೆ ಕಾಲೇಜಿನ ಸ್ನೇಹಿತ ಅಭಿಷೇಕ್ ಬೆಂಗಳೂರಲ್ಲಿಯು ಪರಿಚಯದಲ್ಲಿದ್ದ . ಈ ಪರಿಚಯದ ನಡುವೆ, ಆತ ಈಕೆಯನ್ನ ಪೀಡಿಸಲು ಆರಂಭಿಸಿದ್ದ. ಎಷ್ಟರ ಮಟ್ಟಿಗೆ ಎಂದರೆ, ಆತ ತನ್ನ ಕೊಠಡಿಗೆ ಬರುವಂತೆ ಪೀಡಿಸುತ್ತಿದ್ದ ಎಂಬ ಆರೋಪವನ್ನೂ ವಾಣಿಶ್ರೀ ಡೆತ್‌ನೋಟ್‌ನಲ್ಲಿ ದಾಖಲಿಸಿದ್ದಾಳೆ. ಆತ ನೀಡುತ್ತಿದ್ದ ಮಾನಸಿಕ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾಳೆ..

ಕಿರುಕುಳದ ವಿಷಯ ಹೊರಬಂದರೆ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಬಹುದು ಎಂಬ ಭಯವೂ ವಾಣಿಶ್ರೀ ಅವರನ್ನು ಕಾಡುತ್ತಿತ್ತು ಈ ಆತಂಕವನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಅವರು, ತನ್ನ ಸಾವಿಗೆ ಅಭಿಷೇಕ್ ನೇರ ಕಾರಣ ಎಂದು ಆರೋಪಿಸಿದ್ದು, ನನ್ನ ಸಾವಿಗೆ ಕಾರಣನಾದ ಅಭಿಷೇಕ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬರೆದಿದ್ದಾಳೆ

ಏನೋ ಮಾಡಬೇಕು ಜೀವನದಲ್ಲಿ ಸಾಧಿಸಬೇಕು ಎಂದುಕೊಂಡಿದ್ದ ವಾಣಿಶ್ರೀಯು ಇಂತಹದ್ದೊಂದು ಡೆತ್​ನೋಟ್ ಬರೆದಿದ್ದು, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರದ ಕೆರೆಗೆ ಹಾರಿ ಸಾವನ್ನಪ್ಪಿದ್ದಾಳೆ. ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ವಾಣಿಶ್ರೀ ಅವರ ಮೃತದೇಹವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor