1 ಕೊಲೆ, 3 ದರೋಡೆ, 12 ಸುಲಿಗೆ ಸೇರಿದಂತೆ 174 ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸ್ ತಂಡ!ಐಜಿಪಿ ಬಿ.ಆರ್. ರವಿಕಾಂತೇಗೌಡರಿಂದ ಬಹುಮಾನ!

ಹಂಚಿಕೊಳ್ಳಿ
WhatsApp Facebook X Telegram
174 ಪ್ರಕರಣಗಳನ್ನು ಭೇದಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ತಂಡದ ಕಾರ್ಯವನ್ನು ಐಜಿಪಿ ಬಿ.ಆರ್. ರವಿಕಾಂತೇಗೌಡ ಶ್ಲಾಘಿಸುತ್ತಿರುವುದು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಪೊಲೀಸ್ ಇಲಾಖೆ (Shivamogga Police Team) ಇವತ್ತು ಪ್ರಾಪರ್ಟಿ ರಿಟರ್ನ್​ ಪರೇಡ್ ಹಮ್ಮಿಕೊಂಡಿತ್ತು. ಈ ಪರೇಡ್​ನಲ್ಲಿ ಶಿವಮೊಗ್ಗ ಪೊಲೀಸರ ಒಟ್ಟಾರೆ ಕಾರ್ಯಾಚರಣೆ ಐಜಿಪಿ ಬಿ.ಆರ್. ರವಿಕಾಂತೇಗೌಡರಿಂದ ಶ್ಲಾಘನೆಗೆ ಒಳಗಾಗಿದ್ದಷ್ಟೆ ಅಲ್ಲದೆ ಬಹುಮಾನವನ್ನು ಪಡೆಯಿತು! ಈ ಕುರಿತು ಆಯೋಜಿಸಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಐಜಿಪಿ ಬಿ.ಆರ್. ರವಿಕಾಂತೇಗೌಡ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿ, ಕೋಟ್ಯಂತರ ರೂಪಾಯಿ ಮೌಲ್ಯದ ಕಳುವು ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ತಂಡಕ್ಕೆ ₹50,000 ನಗದು ಬಹುಮಾನ ಘೋಷಿಸಲಾಗಿದೆ. ಪ್ರಕರಣಗಳ ತನಿಖೆಯಲ್ಲಿ ಕಾನ್‌ಸ್ಟೆಬಲ್‌ಗಳಿಂದ ಇನ್‌ಸ್ಪೆಕ್ಟರ್‌ಗಳವರೆಗೆ ಕಾರ್ಯನಿರ್ವಹಿಸಿದ ಸಿಬ್ಬಂದಿಯ ಶ್ರಮ ಶ್ಲಾಘನೀಯ ಎಂದಿದ್ದಾರೆ.

  1. ಇನ್ನೂ ಐಜಿಪಿ ನೀಡಿರುವ ಮಾಹಿತಿ ಪ್ರಕಾರ, 2026ನೇ ಸಾಲಿನ 142 ಪ್ರಕರಣಗಳು ಹಾಗೂ ಹಿಂದಿನ ವರ್ಷಗಳ 32 ಪ್ರಕರಣಗಳು ಸೇರಿದಂತೆ ಒಟ್ಟು 174 ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ .
  2. ಈ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಬಂಗಾರ-ಬೆಳ್ಳಿ ಆಭರಣ, ಮೊಬೈಲ್‌ಗಳು, ವಾಹನಗಳು, ನಗದು, ಎಲೆಕ್ಟ್ರಾನಿಕ್ ವಸ್ತುಗಳು, ಜಾನುವಾರು ಹಾಗೂ ಅಡಕೆ ಸೇರಿದಂತೆ ಒಟ್ಟು ₹5,73,00,000 ಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಸಂಬಂಧಪಟ್ಟ ವಾರಸುದಾರರು ಮತ್ತು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ.
  3. 2024ರಲ್ಲಿ ಭೇದಿಸಿರುವ ಪ್ರಕರಣಗಳಲ್ಲಿ ಲಾಭದ ಉದ್ದೇಶದಿಂದ ನಡೆದ 1 ಕೊಲೆ ಪ್ರಕರಣ, 3 ದರೋಡೆ ಪ್ರಕರಣ, 17 ಸುಲಿಗೆ ಪ್ರಕರಣ, 7 ಸರಗಳ್ಳತನ ಪ್ರಕರಣ, 34 ಕನ್ನ ಕಳವು ಪ್ರಕರಣ, 14 ಮನೆಗಳ್ಳನತನ, 31 ಸಾಮಾನ್ಯ ಕಳ್ಳತನ ಪ್ರಕರಣ, 14 ಜಾನುವಾರು ಕಳ್ಳತನ ಪ್ರಕರಣ ಹಾಗೂ 21 ವಾಹನ ಕಳ್ಳತನ ಪ್ರಕರಣಗಳು ಸೇರಿವೆ.
  4. ಅಲ್ಲದೇ ಹಿಂದಿನ ವರ್ಷಗಳಲಿ., ವರದಿಯಾದ ಪ್ರಕರಣಗಳಲ್ಲಿ, 12 ಮನೆಗಳ್ಳತನ, 11 ಸಾಮಾನ್ಯ ಕಳವು ಮತ್ತು 9 ವಾಹನ ಕಳವು ಸೇರಿದಂತೆ ಒಟ್ಟು 32 ಪ್ರಕರಣಗಳನ್ನು ಸಹಾ ಪತ್ತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

CEIR ಮೂಲಕ 1,164 ಮೊಬೈಲ್ ಪತ್ತೆ

ಕಳವು ಪ್ರಕರಣಗಳ ತನಿಖೆಯ ಜತೆಗೆ, ವಿವಿಧ ಸಂದರ್ಭಗಳಲ್ಲಿ ಕಳೆದುಹೋಗಿದ್ದ ಮೊಬೈಲ್‌ಗಳ ಪತ್ತೆಯಲ್ಲಿಯೂ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ. CEIR ಪೋರ್ಟಲ್ ಮೂಲಕ ಒಟ್ಟು 1,164 ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ, ಅವುಗಳ ನಿಜವಾದ ವಾರಸುದಾರರನ್ನು ಗುರುತಿಸಿ ಹಿಂತಿರುಗಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor