ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ (shivamogga) ಪುರುದಾಳು ರಿಂಗ್ ರಸ್ತೆಯ ಖಾಲಿ ಜಾಗದಲ್ಲಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ 27 ವರ್ಷದ ವ್ಯಕ್ತಿಯ ವಿರುದ್ಧ ತುಂಗಾನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ಅಂದರೆ ಸುಮುಟೋ ಕೇಸ್ ದಾಖಲಿಸಿದ್ದಾರೆ. ಆ.20ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಡೆದ ಘಟನೆ ಸಂಬಂಧ ಈ ಕೇಸ್ ದಾಖಲಾಗಿದೆ.
ತುಂಗಾನಗರ ಠಾಣೆಯ ಪೊಲೀಸ್ ಅಧಿಕಾರಿ ತಮ್ಮಣ್ಣ ಜಂಬಗಿ ಹಾಗೂ ಸಿಪಿಸಿ ಪ್ರಶಾಂತ್ ಕುಮಾರ್ ಪುರುದಾಳು ರಿಂಗ್ ರಸ್ತೆ ಭಾಗದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಅವರಿಗೆ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ವ ಅಸಭ್ಯವಾಗಿ ವರ್ತಿಸುತ್ತಿರುವುದು ಕಾಣಿಸಿದೆ. ಆತ ಗಾಂಜಾ ಹೊಡೆದು ಈ ರೀತಿ ಆಡುತ್ತಿರುವ ಬಗ್ಗೆ ಅವರಿಗೆ ಸಂಶಯ ಮೂಡಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಸಂಶಯಗೊಂಡು ಹಿಡಿಯಲು ಹೋದಾಗ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದಾಗ್ಯು ಆತನನ್ನು ಹಿಡಿದ ಪೊಲೀಸರು ಆತ ಜನರಿಗೆ ಉಪಟಳ ಕೊಡುವ ಸಾಧ್ಯತೆ ಇದ್ದಿದ್ದರಿಂದ , ಆತನನ್ನು ವಶಕ್ಕೆ ಪಡೆದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯ ಮುಂದೆ ಹಾಜರುಪಡಿಸಿದ್ದಾರೆ.
ಬಳಿಕ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು, ಮಾದಕ ವಸ್ತು ಸೇವಿಸಿರುವ ಕುರಿತು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಮೆಡಿಕಲ್ ಚೆಕಪ್ನಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ . ಈ ವೈದ್ಯಕೀಯ ವರದಿಯ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 27(ಬಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
