ಶಿವಮೊಗ್ಗ : ಆಟೋ ಮೀಟರ್ ಬಳಸದ 16 ಚಾಲಕರ ವಿರುದ್ಧ ಕಾನೂನು ಕ್ರಮ

ಹಂಚಿಕೊಳ್ಳಿ
WhatsApp Facebook X Telegram
ಫೋಟೋ ಮೂಲ : @https://www.facebook.com/Shivamoggatrafficpolice

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ , ಆಪರೇಷನ್ ಆಟೋ ಮುಂದುವರಿದಿದೆ. ದಾಖಲೆಗಳಿಲ್ಲದೇ ಸಂಚರಿಸುತ್ತಿದ್ದ ಆಟೋಗಳನ್ನ ವಶಕ್ಕೆ ಪಡೆದು, ಎಚ್ಚರಿಕೆ ನೀಡಿದ್ದ ಟ್ರಾಫಿಕ್ ಪೊಲೀಸರು ಈ ನಡುವೆ ವಿವಿಧ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿ, ಮೀಟರ್​ ಹಾಕದ ಚಾಲಕರಿಗೆ ದಂಡ ವಿಧಿಸಿದ್ದಾರೆ.

ಆ.19ರಂದು ಶಿವಮೊಗ್ಗ ನಗರದ ವಿವಿಧ ಆಟೋ ಸ್ಟ್ಯಾಂಡ್​ಗಳಿಗೆ ಭೇಟಿಕೊಟ್ಟ ಸಂಚಾರ ಪೊಲೀಸರು, ಪ್ರಯಾಣಿಕರನ್ನು ಕರೆದೊಯ್ಯುವಾಗ ಕಡ್ಡಾಯವಾಗಿ ಆಟೋ ಮೀಟರ್ ಬಳಸುವಂತೆ ಚಾಲಕರಿಗೆ (Auto Drivers) ಜಾಗೃತಿ ಮೂಡಿಸಿದರು. ಪ್ರಯಾಣಿಕರಿಂದ ಬಾಡಿಗೆ ಪಡೆಯುವಾಗ ಆಟೋ ಮೀಟರ್‌ನಲ್ಲಿ ತೋರಿಸುವ ರೇಟನ್ನ ಮಾತ್ರ ಪಡೆಯಬೇಕು. ಮೀಟರ್ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬಾರದು ಎಂದು ಆಟೋ ಚಾಲಕರಿಗೆ ಸೂಚಿಸಿದರು

ಈ ಸಂದರ್ಭದಲ್ಲಿ ಆಟೋ ಮೀಟರ್ ಬಳಸಲು ನಿರಾಕರಿಸಿದ ಹಾಗೂ ಮೀಟರ್‌ನಲ್ಲಿ ನಿಗದಿಯಾಗಿರುವ ದರಕ್ಕಿಂತ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಟ್ಟ ಸುಮಾರು 16 ಆಟೋ ಚಾಲಕರ ವಿರುದ್ಧ ಐ.ಎಂ.ವಿ. ಕಾಯ್ದೆಯಡಿ ಕಾನೂನು ರೀತ್ಯಾ ಕ್ರಮ ಜರುಗಿಸಿಲಾಗಿದೆ ಎಂದು ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ವಿವರಿಸಲಾಗಿದೆ.

ಅಲ್ಲದೆ ಆಟೋ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜತೆಗೆ ನಿಗದಿತ ಮೀಟರ್ ದರದಲ್ಲಿಯೇ ಸೇವೆ ಒದಗಿಸಬೇಕು ಎಂದು ಫೇಸ್​ಬುಕ್​ನಲ್ಲಿಟ ಟ್ರಾಫಿಕ್ ಪೊಲೀಸ್ ಇಲಾಖೆ ಕೋರಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor